Oplus_131072

ಚಿತ್ತಾಪುರ ಪಿಎಲ್’ಡಿ ಬ್ಯಾಂಕ್ ಚುನಾವಣೆ, 26 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ, ಓರ್ವ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ: ಹಿರೇಮಠ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.ಚಿತ್ತಾಪುರ (ಪಿಎಲ್’ಡಿ) ಚುನಾವಣೆಯ ಹಿನ್ನೆಲೆ ಸೋಮವಾರ ನಡೆದ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆಯಲ್ಲಿ ಒಟ್ಟು 14 ಕ್ಷೇತ್ರಗಳಿಗೆ 27 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಈ ಪೈಕಿ 26 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು ಓರ್ವ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಕಾಳಗಿ (ಬಿಸಿಬಿ)-ಯಂಕಾರೆಡ್ಡಿ ತಿಪ್ಪಾರೆಡ್ಡಿ ನಾಮಪತ್ರ ಕ್ರಮಬದ್ಧವಾಗಿದ್ದು, ಸಿದ್ದಲಿಂಗಪ್ಪ ಅಣ್ಣಾರಾವ ನಾಮಪತ್ರಕ್ಕೆ ಜಾತಿ ಪ್ರಮಾಣ ಪತ್ರ ಸಲ್ಲಿಸದೆ ಇರುವುದಕ್ಕೆ  ತಿರಸ್ಕೃತಗೊಂಡಿದೆ. ಕಂದಗೋಳ (ಸಾಮಾನ್ಯ)-ಶಿವರಾಯ ಮಲ್ಲಶೆಟ್ಟಪ್ಪ, ಹೆಬ್ಬಾಳ (ಸಾಮಾನ್ಯ)-ಅಶೋಕ ಗುರುಲಿಂಗಪ್ಪ, ರಾಜಶೇಖರ್ ಶಂಕ್ರಪ್ಪ ಕಿಲ್ಲಾ. ಗುಂಡಗುರ್ತಿ (ಪರಿಶಿಷ್ಟ ಜಾತಿ)-ಸುನೀಲಕುಮಾರ್ ವಿಠಲ್ ದೊಡ್ಡ ಮನಿ. ಕೊಡದೂರ (ಸಾಮಾನ್ಯ)-ರಾಜಶೇಖರ ಗುಂಡಪ್ಪ, ಶಾಂತಪ್ಪ ವಿಶ್ವನಾಥ. ಚಿತ್ತಾಪುರ (ಸಾಮಾನ್ಯ)-ಅಣ್ಣಾರಾವ ಹಣಮಂತರಾವ ಪಾಟೀಲ. ವಾಡಿ (ಸಾಮಾನ್ಯ)-ಜಾವೀದ್ ಪಟೇಲ್ ಮಹಿಬೂಬ್ ಪಟೇಲ್, ಸಂಗಣ್ಣ ಬಸವರಾಜ ಯಾದಗಿರ. ಭಂಕೂರ (ಸಾಮಾನ್ಯ)-ರಮೇಶ್ ಥಾವರು ಜಾಧವ. ಕಮರವಾಡಿ (ಪರಿಶಿಷ್ಟ ಪಂಗಡ)-ಮರೆಪ್ಪ ಸಾಯಬಣ್ಣ ಕರಿಮರ. ನಾಲವಾರ (ಸಾಮಾನ್ಯ ಮಹಿಳೆ)-ಬಸಲಿಂಗಮ್ಮ ಬಸವರಾಜ ಪಾಟೀಲ. ಭೀಮನಳ್ಳಿ (ಬಿಸಿಎ)-ಮಲ್ಲಪ್ಪ ದುರ್ಗಪ್ಪ ವಾಡ್, ರಾಮಣ್ಣ ಕೃಷ್ಣಪ್ಪ ನಾಟೀಕಾರ, ಕರಿಗೂಳಿ ತಿಪ್ಪಣ್ಣ ವಾಡ್, ಮಹಾದೇವಪ್ಪ ಮಲ್ಲಪ್ಪ ನಾಶಿ. ಅಳ್ಳೋಳ್ಳಿ (ಸಾಮಾನ್ಯ)-ಚಂದ್ರಶೇಖರ ದೊಡ್ಡಪ್ಪ ತೆಂಗಳಿ, ಅಯ್ಯಣ್ಣಗೌಡ ಬಸರೆಡ್ಡಿ ರಾಜೋಳ್ಳಾ, ಭೀಮಣ್ಣ ಸಾಲಿ. ಶಹಾಬಾದ (ಸಾಮಾನ್ಯ ಮಹಿಳೆ)-ಅತ್ತರಬೇಗಂ ಅಜಮೋದ್ದಿನ್. ಚಿತ್ತಾಪುರ ಸಾಲಗಾರರಲ್ಲದ ಕ್ಷೇತ್ರ-ಪ್ರಸಾದ ಚಂದ್ರಶೇಖರ ಅವಂಟಿ, ಭೀಮಣ್ಣ ಅಂಬಣ್ಣ, ಸಿದ್ರಾಮಪ್ಪ ಬಸವರಾಜ ರೇಷ್ಮಿ, ವೀರಪಾಕ್ಷಪ್ಪ ಮಲ್ಲಿಕಾರ್ಜುನಪ್ಪ ಗಡಾದ್, ಸಿದ್ರಾಮ ಶಿವಶರಣಪ್ಪ ಸಣಮೊ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ನಾಳೆ ನಾಮಪತ್ರ ವಾಪಸ್ ಪಡೆಯುವ ದಿನ: ಜೂ.10 ರಂದು ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ನಾಮಪತ್ರ ವಾಪಸ್ ಪಡೆಯುವುದಕ್ಕೆ ಅವಕಾಶ ಇದೆ. ನಂತರ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚಿನ್ನೆಗಳನ್ನು ಹಂಚಿಕೆ ಮಾಡಲಾಗುವುದು ಜೂ.12 ರಂದು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು, ಜೂ.15 ರಂದು ಚುನಾವಣೆ ನಡೆಯಲಿದ್ದು ಅಂದೆ ಫಲಿತಾಂಶ ಕೂಡ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

ಒಟ್ಟು ಮತದಾರರು: ಸಾಲಗಾರರ 13 ಕ್ಷೇತ್ರದಲ್ಲಿ 331 ಹಾಗೂ ಸಾಲಗಾರರಲ್ಲದ 1 ಕ್ಷೇತ್ರದಲ್ಲಿ 105 ಒಟ್ಟು 436 ಮತದಾರರು ಇದ್ದಾರೆ. ಒಟ್ಟು 6045 ಸದಸ್ಯರಿಗೆ ನಿಗಧಿತ ಶುಲ್ಕ ಪಾವತಿಸಿ ಮತದಾನ ಹಕ್ಕು ಪಡೆಯುವುದಕ್ಕೆ ನೋಟಿಸ್ ಕಳುಹಿಸಲಾಗಿದೆ ಆದರೆ ಕೇವಲ 436 ಸದಸ್ಯರು ಮಾತ್ರ ನಿಗಧಿತ ರೂ.2500 ಶುಲ್ಕ ಪಾವತಿಸಿ ಮತದಾನಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!