Oplus_0

ಚಿತ್ತಾಪುರದಲ್ಲಿ ನಾಳೆ ಸಂವಿಧಾನ ಸಮಾವೇಶ, ಭರ್ಜರಿ ಸಿದ್ಧತೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸಂವಿಧಾನ ಸಂರಕ್ಷಣಾ ಸಮಿತಿ ಚಿತ್ತಾಪುರ ಹಾಗೂ ಎಲ್ಲಾ ಸಮಾಜಗಳು ಒಳಗೊಂಡಂತೆ ಡಿಸೆಂಬರ್ 1 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣದ ದಿನದ ಅಂಗವಾಗಿ ಸಂವಿಧಾನ ಸಮಾವೇಶ ಕಾರ್ಯಕ್ರಮದ ನಿಮಿತ್ತ ಭರ್ಜರಿ ಸಿದ್ಧತೆ ನಡೆದಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪರಾರಿ, ಬಂಟಿಂಗ್ಸ್, ಬ್ಯಾನರ್ ಗಳು ಕಟ್ಟುವ ಕಾರ್ಯ ಭರದಿಂದ ಸಾಗಿದೆ.

ಇದೊಂದು ಇತಿಹಾಸಿಕ ಕಾರ್ಯಕ್ರಮವಾಗಿದ್ದು, ಬೆಳಗ್ಗೆ 11 ಕ್ಕೆ ಭೀಮ ನಡಿಗೆ ಅದ್ದೂರಿ ಮೆರವಣಿಗೆ ಚಿತ್ತಾವಲಿ ವೃತ್ತದಿಂದ ಪ್ರಾರಂಭವಾಗಿ ಕಪ್ಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಲಿದೆ. ನಂತರ ಮದ್ಯಾಹ್ನ 1 ಘಂಟೆಗೆ ಬಹಿರಂಗ ಸಭೆ ನಡೆಯಲಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಎಲ್ಲಾ ಸಮಾಜಗಳ ಗುರುಗಳ ಭಾವಚಿತ್ರಗಳು, ಧ್ವಜಗಳು ಹಾಗೂ ರಾಷ್ಟ್ರ ಧ್ವಜಗಳು, ಸಂವಿಧಾನದ ಪೀಠಿಕೆಗಳ ಪ್ರತಿಗಳು ರಾರಾಜಿಸಲಿವೆ ಹೀಗಾಗಿ ಸರ್ವ ಧರ್ಮಿಯರು ಭಾಗವಹಿಸಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!