ಚಿತ್ತಾಪುರದಲ್ಲಿ ನ.22 ರಂದು ಉದ್ಯಮಶೀಲತಾ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ, ತರಬೇತಿ ಹಾಗೂ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಯುವಜನರಲ್ಲಿ ಸ್ವಯಂ ಉದ್ಯೋಗದ ಚೈತನ್ಯ ತುಂಬುವ ಉದ್ದೇಶದಿಂದ ನಾಗಾವಿ ಸೇವಾ ಪ್ರತಿಷ್ಠಾನದ ವತಿಯಿಂದ “ಉದ್ಯಮಶೀಲತಾ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ, ತರಬೇತಿ ಹಾಗೂ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ” ಮತ್ತು “ಜಿಲ್ಲಾ ಮಟ್ಟದ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಗಾರ ನವೆಂಬರ್ 22 ರಂದು ಅಕ್ಕಮಹಾದೇವಿ ಮಂದಿರದಲ್ಲಿ ಜರುಗಲಿದೆ ಎಂದು ಪ್ರತಿಷ್ಠಾನದ ರಾಜು ಕುಲಕರ್ಣಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಪಿಎಂಎಫ್‌ಎಂಇ, ಪಿಎಂಇಜಿಪಿ, ಎನ್‌ಎಲ್‌ಎಂ, ಟೆಕ್ಸ್ಟೈಲ್, ಪ್ರವಾಸೋದ್ಯಮ, ಎಫ್‌ಎಂಸಿಜಿ, ವೈದ್ಯಕೀಯ, ಕಟ್ಟಡ ನಿರ್ಮಾಣ, ಆಹಾರ, ಕೃಷಿ, ಎಎಂಐ, ಎಐಎಫ್ ಮತ್ತು ಇತರ ಕೈಗಾರಿಕಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಯುವಕರು, ಮಹಿಳೆಯರು ಹಾಗೂ ಉದ್ಯಮಾಸಕ್ತರಿಗೆ ಈ ಕಾರ್ಯಗಾರ ಪ್ರೇರಣೆಯ ವೇದಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಮುಖ್ಯ ಪ್ರೇರಣಾ ಉಪನ್ಯಾಸಕರಾಗಿ ಡಾ. ಸುರೇಶ ಕಮ್ಮಾರ ಭಾಗವಹಿಸಲಿದ್ದಾರೆ. ಅವರು ಮಾನವ ಹಕ್ಕುಗಳ ಆಯೋಗದ ಸದಸ್ಯರು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಂಘಟನೆಯ ಸಂಪನ್ಮೂಲ ವ್ಯಕ್ತಿ, ಪಿಎಂಎಫ್‌ಎಂಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಎನ್‌ಜಿಒ, ಇಡಿಪಿ, ಎಂ.ಎಸ್.ಎಂ.ಇ ತಜ್ಞ, ಮಾರ್ಗದರ್ಶಕ, ತರಬೇತುದಾರ ಹಾಗೂ ಪ್ರೇರಣಾ ಭಾಷಣಕಾರರಾಗಿದ್ದಾರೆ.
ಸಾನಿಧ್ಯವನ್ನು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಹಾಬಾದ ಉಪವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ತಾ.ಪಂ. ಇಓ ಡಾ. ಬಸಲಿಂಗಪ್ಪ ಡಿಗ್ಗಿ, ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ ಕರದಾಳ, ಉದ್ಯಮಿ ಸೋಮಶೇಖರ ಪಾಟೀಲ ಬೆಳಗುಂಪಾ, ಬಸವರಾಜ ಬೆಣ್ಣೂರಕರ್, ಗೋಪಾಲ ರಾಠೋಡ, ಯಶೋದಾ ಮಹಾದೇವಪ್ಪ, ಮುಕ್ತಾರ್ ಪಟೇಲ್, ಶಾಂತಕುಮಾರ ಹತ್ತಿ, ಬಾಬು ಕಾಶಿ, ವಿನೋದ ಗುತ್ತೇದಾರ, ಗೌತಮ್ ನಾಯಕ, ಡಾ. ಮೋದಿನಸಾಬ್ ಮುಲ್ಲಾ, ರಮೇಶ್ ಬೊಮ್ಮನಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ, ಶಿವಶರಣಪ್ಪ ಸುಲೇಗಾಂವ ಸ್ವಾಗತಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ಸಿದ್ಧತೆಗಳನ್ನು ಪ್ರತಿಷ್ಠಾನ ಸದಸ್ಯರು ಕೈಗೊಂಡಿದ್ದು, ಯುವಜನರಿಗೆ ಉದ್ಯಮದ ದಾರಿ ತೋರಿಸುವ ಮತ್ತು ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಲು ಪ್ರೇರೇಪಿಸುವ ಉದ್ದೇಶ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಕುಲಕರ್ಣಿ ಕೋರಿದ್ದಾರೆ.
