ಚಿತ್ತಾಪುರದಲ್ಲಿ ರೇಣುಕಾಚಾರ್ಯರ ಜಯಂತಿ ನಿಮಿತ್ತ ನಾಳೆಯಿಂದ ಜ್ಞಾನಮೃತ ಪ್ರವಚನ ಪ್ರಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕಡಬೂರ ಗಲ್ಲಿಯ ಶ್ರೀ ಸಿದ್ದವೀರೇಶ್ವರ ಪೆದ್ದು ಮಠದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಅಂಗವಾಗಿ ಜ್ಞಾನಮೃತ ಪ್ರವಚನದ ನಾಳೆ ಪ್ರಾರಂಭವಾಗಲಿದ್ದು ಮಾರ್ಚ್ 11 ವರೆಗೆ ಪ್ರತಿನಿತ್ಯ ರಾತ್ರಿ 7.30 ಕ್ಕೆ ನಡೆಯಲಿದೆ, ಮಾ.12 ರಂದು ಬೆಳಗ್ಗೆ 6.30ಕ್ಕೆ ಶ್ರೀ ಸಿದ್ಧವೀರೇಶ್ವರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಬಿಲ್ವಾರ್ಚನೆ ಹಾಗೂ 10.30 ಕ್ಕೆ ಜಗದ್ಗುರು ರೇಣುಕಾಚಾರ್ಯರ ತೊಟ್ಟಿಲು ಕಾರಣ ಹಾಗೂ ಮಹಾಮಂಗಲ ನಂತರ ಪ್ರಸಾದ ಸೇವೆ ನಡೆಯಲಿದೆ ಎಂದು ಮಾಹಿತಿ ಮಠದ ವಕ್ತಾರ ಶರಣು ಉಡುಗಿ ತಿಳಿಸಿದ್ದಾರೆ.
ಚಿತ್ತಾಪುರ ಪಟ್ಟಣದ ಕಡಬೂರ ಗಲ್ಲಿಯ ಪೆದ್ದು ಮಠದಲ್ಲಿ ಕಳೆದ 15 ವರ್ಷದಿಂದ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ದಿಗ್ಗಾಂವ ಪಂಚಗೃಹ ಹಿರೇಮಠ ಶ್ರೀ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಾ ಬಂದಿದೆ. ಚಿತ್ತಾಪುರ ಮತ್ತು ಈ ಭಾಗದ ಸದ್ದಕ್ತರ ಇಚ್ಛೆಯ ಮೇರೆಗೆ ಧಾರ್ಮಿಕ ಪ್ರವಚನ ಆಚರಿಸುತ್ತಾ ಬರಲಾಗಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಗೌರವಾಧಾರಣೀಯ ಕಾರ್ಯಕ್ರಮಗಳು ಐದು ದಿನ ಜರುಗುತ್ತದೆ. ಈ ಕಾರ್ಯಕ್ರಮಕ್ಕೆ ಆಗಮಿಸಿ, ಆರಾಧಿಸಿ, ಆನಂದಿಸಿ ತಮ್ಮ ಭಕ್ತಿ ಸೇವೆ ಮಾಡಿ ಶ್ರೀ ಸಿದ್ದವೀರೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.
ಸನ್ನತ್ತಿ ಸಂಸ್ಥಾನ ಹಿರೇಮಠದ ವೇ.ಪಂ.ಜಗದೀಶ ಶಾಸ್ತ್ರಿಗಳು ಪ್ರವಚನ ನೀಡಲಿದ್ದಾರೆ. ವೇ. ಸಂಗಯ್ಯಸ್ವಾಮಿ ಸ್ಥಾವರ ಮಠ ಹೊನ್ನಗುಂಟಿ ಸಂಗೀತ ಸೇವೆ ಹಾಗೂ ವೇ. ಶರಣಯ್ಯಸ್ವಾಮಿ ಮಠಪತಿ ಕಲಕಂಭ ತಬಲಾ ಸೇವೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

