ಕಾಂಗ್ರೆಸ್ ನಾಯಕರುಗಳಿಗೆ ಮುಜುಗರ ಉಂಟು ಮಾಡುವ ಪದಗಳನ್ನು ಬಳಸಬೇಡಿ: ಡಿ.ಕೆ.ಶಿವಕುಮಾರ
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಭಿಮಾನಿಗಳು, ಬ್ಲಾಕ್/ಡಿಸಿಸಿ ಮುಖಂಡರುಗಳು ಪಕ್ಷದ ಕಾರ್ಯಕ್ರಮಗಳ ಪಚಾರಕ್ಕೆ ಬಳಸುವ ಫ್ರೆಕ್ಸ್, ಬ್ಯಾನರ್ ಮತ್ತು ಇತರ ಪ್ರಚಾರ ಸಾಧನೆಗಳಲ್ಲಿ ಪಕ್ಷ ಹಾಗೂ ನಾಯಕರುಗಳಿಗೆ ಮುಜುಗರ ಉಂಟು ಮಾಡುವ ಪದಗಳನ್ನು ಇನ್ನು ಮುಂದೆ ಬಳಸಬಾರದೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಕೋರಿದ್ದಾರೆ.
ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಸಂದರ್ಭದಲ್ಲಿ ಪ್ಲೆಕ್ಸ್ ಬ್ಯಾನರ್, ಡ್ರಾಪ್ಸ್ ಕಟೌಟ್, ಹೊರ್ಡಿಂಗ್ಸ್ ಹಾಕುವಾಗ ನಾಯಕರುಗಳ ಹೆಸರುಗಳ ಮುಂದೆ ಬಾಸ್, ಕಿಂಗ್, ಟೈಗರ್, ರಾಜಾಧಿರಾಜ ಇತ್ಯಾದಿ ಪದಗಳನ್ನು ಬಳಸುವುದಲ್ಲದೆ ಸಿಂಹ, ಹುಲಿ, ಚಿರತೆ ಇತರೆ ಪ್ರಾಣಿಗಳ ಚಿತ್ರಗಳೊಂದಿಗೆ ನಾಯಕರ ಫೋಟೊಗಳನ್ನು ಜೊತೆಸೇರಿಸಿ ಅತಿಶಯವಾದ ಮುಜುಗರ ಉಂಟುಮಾಡುವಂತೆ ಮುದ್ರಿಸಿ ಹಾಕುತ್ತಿರುವುದನ್ನು ಗಮನಿಸಿರುತ್ತೇನೆ.
ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಕ್ಕೆ ಇಂತಹ ಪದಬಳಕೆ, ಪ್ರದರ್ಶನಗಳು ವಿರುದ್ಧವಾಗಿರುತ್ತವೆ ಹಾಗೂ ಈ ಪದಗಳ ಉಪಯೋಗ ಸಾರ್ವಜನಿಕರಲ್ಲಿ ನಮ್ಮ ಪಕ್ಷ ಮತ್ತು ನಾಯಕರ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಮೂಡಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದುದರಿಂದ, ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಬ್ಲಾಕ್/ಡಿಸಿಸಿ ಮುಖಂಡರುಗಳು ಪಕ್ಷದ ಕಾರ್ಯಕ್ರಮಗಳ ಪಚಾರಕ್ಕೆ ಬಳಸುವ ಫ್ರೆಕ್ಸ್, ಬ್ಯಾನರ್ ಮತ್ತು ಇತರ ಪ್ರಚಾರ ಸಾಧನೆಗಳಲ್ಲಿ ಪಕ್ಷ ಹಾಗೂ ನಾಯಕರುಗಳಿಗೆ ಮುಜುಗರ ಉಂಟು ಮಾಡುವ ಪದಗಳನ್ನು ಇನ್ನು ಮುಂದೆ ಬಳಸಬಾರದೆಂದು ಕೋರಿದ್ದಾರೆ.
ಇಂತಹ ಸಂದರ್ಭದಲ್ಲಿ ನಾಯಕರ ಬಗ್ಗೆ ಮೆಚ್ಚುಗೆ ಪದಗಳನ್ನು ಬಳಸವುದಾದರೆ ನಾಯಕರು, ಸಾಧಕರು, ಹಿರಿಯರು, ಹಿರಿಯ ನಾಯಕರು ಇತ್ಯಾದಿ ಸದ್ಭಾವನೆ ಮೂಡುವಂತಹ ಪದಬಳಕೆಗಳನ್ನು ಮಾಡುವುದು ಸೂಕ್ತ ಎಂದು ತಿಳಿಸಿದ್ದಾರೆ.
ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಉಸ್ತುವಾರಿ ಕೆಪಿಸಿಸಿ ಪದಾಧಿಕಾರಿಗಳು, ಶಾಸಕರು, 2023 ರ ವಿಧಾನಸಭೆ ಅಭ್ಯರ್ಥಿಗಳು, ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಲ್ಲಾ ಮುಂಚೂಣಿ ಘಟಕ, ಸೆಲ್, ವಿಭಾಗಗಳ ಅಧ್ಯಕ್ಷರು, ಎಲ್ಲಾ ಹಂತದ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರುಗಳು ಹಾಗೂ ಮಾಜಿ ಸದಸ್ಯರುಗಳು ಹಾಗೂ ಇತರ ಸಂಬಂಧಪಟ್ಟ ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ಪ್ರಕಟಣೆ ಮೂಲಕ ಸೂಚಿಸಿದ್ದಾರೆ.