ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಪ್ರಕರಣ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ | ಯಾವುದೇ ಮುಲಾಜಿಲ್ಲದೆ ಬಂಧಿಸಿ ಕಾನೂನಿನ ಪ್ರಕಾರ ಶಿಕ್ಷಸುವಂತೆ: ಅಯ್ಯಪ್ಪ ರಾಮತೀರ್ಥ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಾರ್ವಜನಿಕ ಸರ್ಕಾರದ ಕಚೇರಿಯಲ್ಲಿ ಡಿಜಿಪಿ ರಾಮಚಂದ್ರ ರಾವ್ ಐ.ಪಿ.ಎಸ್ ಅಧಿಕಾರಿಯ ರಾಸಲೀಲೆ ವಿಡಿಯೋ ಪ್ರಕರಣ ಕರ್ನಾಟಕದ ಪೊಲೀಸ್ ಇಲಾಖೆಗೆ ಒಂದು ಕಪ್ಪುಚುಕ್ಕೆ ಹಾಗೂ ಅನಾಗರಿಕ ಸಂಸ್ಕೃತಿಯ ಪರಮಾವಧಿಯ ನೀಚ ಕಾರ್ಯ, ಇಂತಹ ಹೀನ ಕೃತ್ಯಗಳಲ್ಲಿ ತೊಡಗಿರುವ ಅಧಿಕಾರಿಗಳನ್ನು ಕೇವಲ ಅಮಾನತ್ತುಗೊಳಿಸಿದರೆ ಸಾಲದು, ಅವರನ್ನು ಕಾನೂನಿನ ಪ್ರಕಾರ ತನಿಖೆಗೆ ಒಳಪಡಿಸಿ, ಸೇವೆಯಿಂದ ವಜಾಗೊಳಿಸಿ ಮತ್ತು ಯಾವುದೇ ಮುಲಾಜಿಲ್ಲದೆ ಬಂಧಿಸಿ ಕಾನೂನಿನ ಪ್ರಕಾರ ಶಿಕ್ಷಸಬೇಕು ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಘಟನೆಯು ಕರ್ನಾಟಕದ ಪೋಲಿಸ್ ಇಲಾಖೆಯ ಇತಿಹಾಸದಲ್ಲೇ ಬಹು ದೊಡ್ಡ ಕಪ್ಪು ಚುಕ್ಕೆ ಆಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಕರ್ನಾಟಕ ಪೊಲೀಸ್ ನೈತಿಕತೆಯನ್ನೇ ಪ್ರಶ್ನೆ ಮಾಡುವಂತಹದಾಗಿದೆ ಎಂದು ತಿಳಿಸಿದ್ದಾರೆ.
ಗೃಹ ಇಲಾಖೆಯ ಹೊಣೆ ಹೊತ್ತಿರುವ ಗೃಹಮಂತ್ರಿ ಜಿ. ಪರಮೇಶ್ವರ್ ಅವರು ರಾಜ್ಯದಲ್ಲಿ ತಮ್ಮದೇ ಇಲಾಖೆಯ ಹಿರಿಯ ಅಧಿಕಾರಿ ನಡೆಸಿದ ರಾಸಲೀಲೆ ವಿಡಿಯೋ ಪ್ರಕರಣದ ನೈತಿಕ ಹೊಣೆ ಹೊತ್ತು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಹಾಗೂ ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಬಿಜೆಪಿಯವರು ಹಾಗೂ ಆರ್.ಎಸ್.ಎಸ್ ನವರು ಸಂವಿಧಾನದ ವಿರೋಧಿಗಳು ಎಂದು ಸುಮ್ಮನೆ ಟೀಕೆ ಮಾಡುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿ ಬಾರಿ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸದೇ ತಮ್ಮದೇ ಸರ್ಕಾರದ ಅಧಿಕಾರಿಗಳ ರಾಸಲೀಲೆ ಹಾಗೂ ಆಡಳಿತ ವೈಫಲ್ಯಗಳ ಬಗ್ಗೆ ಸಂವಿಧಾನ ಚೌಕಟ್ಟಿನಲ್ಲಿಯೇ ಇಂತಹ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸಲಿ ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲಿಂದಲೂ ನಿತ್ಯಲೂ ಸಾರ್ವಜನಿಕ ವಲಯದಲ್ಲಿ ಕೊಲೆ, ಧರೋಡೆ, ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ, ಸ್ವಜನ ಪಕ್ಷಪಾತ, ವಿರೋಧ ಪಕ್ಷಗಳ ವಿರುದ್ಧ ದ್ವೇಷದ ರಾಜಕಾರಣ, ಭ್ರಷ್ಟಾಚಾರ, ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸೇವನೆಯಿಂದ ಯುವ ಸಮಾಜ ಬಲಿ, ತಾರತಮ್ಯ ಹಾಗೂ ಗೊಂದಲಗಳ ಕೆಲ ಮಸೂದೆಗಳನ್ನು ವಿಧಾನಸಭಾದಲ್ಲಿ ಏಕಾ ಏಕಿ ಮಂಡನೆ ಹಾಗೂ ರಾಜ್ಯಪಾಲರಿಂದ ಬಿಲ್ ವಾಪಸ್ ನಿಂದ ಸರ್ಕಾರದ ಮುಖಭಂಗ, ಮಹಿಳೆಯರ ಮೇಲೆ ದೌರ್ಜನ್ಯ, ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಕಾನೂನುಗಳನ್ನು ಗಾಳಿಗೆ ತೂರಿ ಸಚಿವರ ಅಣತಿಯಂತೆ ಕಾರ್ಯ ಮುಂತಾದವು ನಮ್ಮ ಕಣ್ಣಮುಂದೆ ಇರುವಾಗಲೇ ಈಗ ಪೋಲಿಸ್ ಇಲಾಖೆಯಲ್ಲಿ ಐ.ಪಿ.ಎಸ್ ದರ್ಜೆಯ ಅಧಿಕಾರಿಯೊಬ್ಬ ತನ್ನ ಕಚೇರಿಯನ್ನೇ ದುರುಪಯೋಗ ಪಡಿಸಿಕೊಂಡು ಆತನಲ್ಲಿಗೆ ಬಂದ ಹೆಣ್ಣು ಮಕ್ಕಳ ಜೊತೆ ರಾಸಲೀಲೆ ಪ್ರಕರಣದ ಅಸಭ್ಯ ವಿಡಿಯೋದ ಅನೈತಿಕ ಕೃತ್ಯಗಳಿಂದ ಇಡೀ ದೇಶದ ನಾಗರಿಕ ಸಮಾಜವೇ ತಲೆ ತಗ್ಗಿಸುವಂಥಾಗಿದೆ. ಇಂತಹ ಅನೈತಿಕ ಘಟನೆಗಳಿಂದ ರಾಜ್ಯದ ಕಾಂಗ್ರೆಸ್ ನೇತೃತ್ವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಗೃಹ ಇಲಾಖೆಯು ಸಂಪೂರ್ಣ ವಿಫಲವಾಗಿ ಭ್ರಷ್ಟಾಚಾರ ಹಾಗೂ ಅನೈತಿಕ ಚಟುವಟಿಕಗಳಲ್ಲಿ ತೊಡಗಿರುವುದು ಈಗ ಸಾಬೀತಾದಂತಾಗಿದೆ ಎಂದು ತಿಳಿಸಿದ್ದಾರೆ.

