Oplus_0

ಕುಂದನೂರು ಗ್ರಾಮದ ಹೊಲವೊಂದರಲ್ಲಿ ಬಲವಂತದ ಬಿತ್ತನೆ, ರೈತ ಸೋಯಲ್ ಪಟೇಲ್ ದೂರು

ನಾಗಾವಿ ಎಕ್ಸಪ್ರೆಸ್ 

ವಾಡಿ: ರೈತನೊಬ್ಬನ ಹೊಲದಲ್ಲಿ ಕೆಲವರು ಗೂಂಡಾಗಿರಿ ದಬ್ಬಾಳಿಕೆಯಿಂದ ರಾತ್ರಿ ವೇಳೆಯಲ್ಲಿ ಬಿತ್ತಿನೆ ಮಾಡಿ ಜಮೀನು ಕಬ್ಜ ಮಾಡಿದ್ದಾರೆ ಎಂದು ಆರೋಪಿಸಿ ವಾಡಿ ಪೊಲೀಸ್ ಠಾಣೆಗೆ ರೈತನು ದೂರು ನೀಡಿದ ಘಟನೆ ನಡೆದಿದೆ.

ಪಟ್ಟಣ ಸಮೀಪದ ಕುಂದನೂರು ಗ್ರಾಮದಲ್ಲಿ ರೈತ ಸೋಯಲ್ ಪಟೇಲ್ ಗೆ ಸೇರಿದ ಸರ್ವೆ ಸಂಖ್ಯೆ-120 ರ ಪಟ್ಟ ಜಮೀನಿನಲ್ಲಿ ಅದೇ ಗ್ರಾಮದ ಶಕೀಲ್ ಪಟೇಲ್ ಮತ್ತು ಅವನ ಸಹಚರರು ಗೂಂಡಾಗಿರಿ ದಬ್ಬಾಳಿಕೆ ಮಾಡಿ, ಹೊಲ ಬಿತ್ತನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ರೈತ ಸೋಯಲ್ ಪಟೇಲ್ ಆರೋಪಿಸಿದ್ದಾರೆ.

ಸರ್ವೆ ಸಂಖ್ಯೆ-120 ರ 9.29 ಎಕರೆ ಜಮೀನಿನಲ್ಲಿ ಅದೇ ಗ್ರಾಮದ ಮಹೇಬೂಬಿ ಜಾಫರ್ ಪಟೇಲ್, ಶಕೀಲ್ ಪಟೇಲ್, ಮಹ್ಮದ ಪಟೇಲ್, ಜಾಫರ್ ಪಟೇಲ್ ಬಿಳವಾರ, ಶಮಶೀರ ಪಟೇಲ್ ಕೂಡಿಕೊಂಡು ಗೂಂಡಾಗಿರಿ ಮಾಡಿ, ಬಲವಂತದಿಂದ ರಾತ್ರಿ ಸಮಯದಲ್ಲಿ ಬಿತ್ತನೆ ಮಾಡಿದ್ದಾರೆ. ಕೇಳಿದರೆ ನಿಮ್ಮ ಕುಟುಂಬ ಇನ್ನೂ ನಮಗೆ ಕೊಡಬೇಕಾದ ಹಣ ನೀಡಿಲ್ಲ. ಅದಕ್ಕೆ ಬಿತ್ತಿದ್ದೇವೆ ಏನು ಮಾಡಕೊತಿಯಾ ಮಾಡಕೋ. ಹೊಲದ ಸಮೀಪ ಬಂದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ಶಕೀಲ್ ಪಟೇಲ್ ಎಂಬ ವ್ಯಕ್ತಿನೇ ನಮ್ಮ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ: ಕೆಲ ವರ್ಷದ ಹಿಂದೆ ಮಹೇಬೂಬಿ ಗಂಡ ಜಾಫರ ಪಟೇಲ ಹತ್ತಿರ ಕೈಗಡವಾಗಿ ನಮ್ಮ ತಂದೆ 1 ಲಕ್ಷ ರೂಪಾಯಿ ಸಾಲದ ರೂಪದಲ್ಲಿ ತೆಗೆದುಕೊಂಡಿದ್ದರು. ಅದರ ಬದಲಿಗೆ ಅಡವಾಗಿ ನಮ್ಮ ಜಮೀನು ಸರ್ವೆ ನಂ.120 ರಲ್ಲಿ ಮೂರು ವರ್ಷ ಉಳಿಮೆ ಮಾಡುವುದಕ್ಕೆ ಕೊಟ್ಟಿದ್ದೇವೆ. ಆದರೆ ಈಗ ಜಮೀನಿನ ಶರತ್ತು ಕರಾರು ಒಪ್ಪಂದ ಕೂಡ ಮುಗಿದಿದೆ.

ಇದರಿಂದ ಕಳೆದ ವರ್ಷ ನಮ್ಮ ಹೊಲದಲ್ಲಿ ನಾವೇ ಬಿತ್ತಿ ಉಳುಮೆ ಮಾಡಿದ್ದೇವೆ. ಆದರೆ ಈ ವರ್ಷ ಪುನಃ ಶಕೀಲ್ ಪಟೇಲ್ ಬಂದು ಗೂಂಡಾಗಿರಿ ಮಾಡಿ ಮತ್ತೇ ಹೊಲವನ್ನು ಬಲವಂತದಿಂದ ಬಿತ್ತಿದ್ದಾನೆ. ಕೇಳಿದರೆ ಹೊಲದ ಸಮೀಪ ಬಂದರೆ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕುತ್ತಿದ್ದಾನೆ.

ನಮ್ಮ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದೇ ಹೊಲದಿಂದ ನಮ್ಮ ಉಪಜೀವನ ನಡೆಯುತ್ತಿದೆ. ಈ ರೀತಿ ದಬ್ಬಾಳಿಕೆ ಗೂಂಡಾಗಿರಿಯಿಂದ ಭಯದ ವಾತಾವರಣದಲ್ಲಿ ನಾವು ಬದುಕುವಂತಾಗಿದೆ. ನಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು ಮತ್ತು ಶಕೀಲ್ ಪಟೇಲ್ ಮತ್ತು ಅವರ ಸಹಚರರನ್ನು ಬಂಧಿಸಿ, ನಮಗೆ ಉಳುಮೆ ಮಾಡುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ದೂರಿನಲ್ಲಿ ಸೋಯಿಲ್ ಪಟೇಲ್ ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!