Oplus_0

ಸಂತ ಕವಿ ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ | ಕನಕದಾಸರು ಮಹಾನ್ ಸಮಾಜ ಸುಧಾರಕರು: ಸತ್ಯಂಪೇಟೆ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಒಬ್ಬ ಪಾಳೆಗಾರನ ಮನೆಯಲ್ಲಿ ಹುಟ್ಟಿ ಕನಕ ನಾಯಕನಿಂದ ಕನಕದಾಸನಾಗುವರೆಗಿನ ಕನಕರ ಜೀವನದ ದಾಟುಗಳನ್ನು ಗಮನಿಸಿದರೆ ಅವರು ಕೇವಲ ಭಕ್ತ, ದಾರ್ಶನಿಕ ಅಲ್ಲ. ಬದಲಿಗೆ ಅವರೊಬ್ಬ ಮಹಾನ್ ಸಮಾಜ ಸುಧಾರಕನಾಗಿ ಕಂಡು ಬರುತ್ತಾನೆ ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.

ನಗರದ ಎಂ.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡದ ಸಂತ ಕವಿ ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರ ವ್ಯಕ್ತಿತ್ವದ ವಿಭಿನ್ನ ನೆಲೆಗಳನ್ನು ಗುರುತಿಸುವುದು ಅಗತ್ಯವಿದೆ ಎಂದರು.

ಯುವ ಮುಖಂಡ ತಿರುಪತಿ ಹತ್ತಿಕಟಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಅಂಟಿಕೊಂಡಿರುವ ಗೊಡ್ಡ ಸಂಪ್ರದಾಯಗಳ ವಿರುದ್ಧ ಧ್ವನಿ ಎತ್ತಿ ಸಾಕಷ್ಟು ಬದುಕಿನಲ್ಲಿ ಕಷ್ಟ ನೋವುಗಳನ್ನು ಅನುಭವಿಸಿ ದಾರ್ಶನಿಕರಾಗಿ ಸಾಕಷ್ಟು ಈ ನಾಡಿಗೆ ಕೊಡುಗೆಯನ್ನು ನೀಡಿದ್ದಾರೆ. ಆದ್ದರಿಂದ ಯುವ ವಿದ್ಯಾರ್ಥಿಗಳು ಕನಕದಾಸರ ಜ್ಞಾನದ ಆಳ ಮತ್ತು ಅರಿವು ಅರಿತುಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದ ಕಾರ್ಯದರ್ಶಿ ಜಗನ್ನಾಥ್ ನಾಗೂರ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ಞಾ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಮರತೂರ, ಸಮಾಜ ಸೇವಕ ಹಾಗೂ ವಕೀಲರಾದ ಹಣಮಂತರಾವ ಅಟ್ಟೂರ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂದೀಪ್ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಅಂಬಿಕಾ ಪಾಟ್ನಾ ನಿರೂಪಿಸಿದರು, ನಾಗರಾಜ್ ಪಟ್ಟಣಕರ ಸ್ವಾಗತಿಸಿದರು, ಡಿ.ಪಿ.ಸಜ್ಜನ್ ವಂದಿಸಿದರು.

“ಕನಕದಾಸರು ಕವಿಗಳಾಗಿ, ಬಂಡಾಯ ಬರಹಗಾರರಾಗಿ, ತತ್ವಪದಕಾರರಾಗಿ, ದಾಸರಾಗಿ, ದಂಡನಾಯಕರಾಗಿ, ಸಮಾಜ ಸುಧಾರಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಂಥವರು”.-ಡಾ. ಶಿವರಂಜನ ಸತ್ಯಂಪೇಟೆ, ಕಲಬುರಗಿ

Spread the love

Leave a Reply

Your email address will not be published. Required fields are marked *

error: Content is protected !!