Oplus_0

ದಿಗ್ಗಾಂವ ಕ್ರಾಸ್, ಸಾತನೂರ ರಸ್ತೆಯ ಸ್ಲಂ ಬೋರ್ಡ್ ಹತ್ತಿರ ಸಾರಿಗೆ ಬಸ್ಸುಗಳು ನಿಲ್ಲಿಸುವಂತೆ ಆಗ್ರಹ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ದಿಗ್ಗಾಂವ ಕ್ರಾಸ್ ಕೆಸಿಎಲ್ ಫ್ಯಾಕ್ಟರಿ ಹತ್ತಿರ ಹಾಗೂ ಸಾತನೂರ ರಸ್ತೆಯ ನಾಗಾವಿ ನಾಡು ಕಾಲೋನಿಯ ಹತ್ತಿರ ಕೋರಿಕೆಯ ಮೇರೆಗೆ ಬಸ್ ನಿಲ್ಲುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹೋರಾಟ ಸಮಿತಿ ಮುಖಂಡರು ಸೋಮವಾರ ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.

ದಿಗ್ಗಾಂವ ಕ್ರಾಸ್ ಕೆಸಿಎಲ್ ಫ್ಯಾಕ್ಟರಿ ಹತ್ತಿರ ಕೊಳೆಗೇರಿ ಅಭಿವೃದ್ಧಿ ಮಂಡಳಿಯ 320 ಹಾಗೂ ಸಾತನೂರ ರಸ್ತೆಯಲ್ಲಿ 680 ಮನೆಗಳಿವೆ. ಈಗಾಗಲೇ ಇಲ್ಲಿ ಅನೇಕ ಕುಟುಂಬಗಳು ವಾಸ ಮಾಡುತ್ತಿವೆ. ಈ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್ಸುಗಳಿಗೆ ಕೈ ಮಾಡಿದರೂ ನಿಲ್ಲುತ್ತಿಲ್ಲ ಹೀಗಾಗಿ ಇಲ್ಲಿನ ನಿವಾಸಿಗಳಿಗೆ, ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ತುಂಬಾ ತೊಂದರೆ ಆಗುತ್ತಿದೆ ಅದರಲ್ಲೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.

ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ದಿಗ್ಗಾಂವ ಕ್ರಾಸ್ ಹಾಗೂ ಸಾತನೂರ ರಸ್ತೆಯಲ್ಲಿ ಸಾರಿಗೆ ಬಸ್ಸುಗಳು ನಿಲ್ಲಿಸುವ ಕ್ರಮ ಕೈಗೊಂಡು ಆ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್ಸುಗಳ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ತಾಂಡೂರಕರ್, ಕೃಷ್ಣ ಭೋವಿ, ತಿಮ್ಮು ತಾಂಡೂರಕರ್, ಶಂಭು ಭೋವಿ, ಅಂಬು ಚವ್ಹಾಣ, ರಾಜು ಗುತ್ತೇದಾರ, ಸುನೀಲ್ ಪವಾರ, ದಿಲೀಪ್ ಕಟಗೆ, ಪರಶುರಾಮ ರಾಜಾಪೂರ, ಚಿದಾನಂದ ಕಾಶಿ, ಸೂರ್ಯಕಾಂತ, ರಾಜು ಭಜಂತ್ರಿ, ಸಂತೋಷ ಭಂಗಿ, ನಾಗು ಹೋಳಿಕಟ್ಟಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!