Oplus_0

ಡೋಣಗಾಂವ ಗ್ರಾಮದಲ್ಲಿ ಅ. 9 ರಿಂದ ಅಂತೂರ-ಬೆಂತೂರ ಜಗದ್ಗುರು ಡಾ. ರಾಚೋಟೇಶ್ವರ ಮಹಾಸ್ವಾಮಿಗಳ ಮೌನಾನುಷ್ಠಾನ, 21 ರಂದು ಸಮಾಧಿಯೋಗ ಆರಂಭ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಗದಗ ಮತ್ತು ವಾರಣಾಸಿ ಬೂದೀಶ್ವರ ಸಂಸ್ಥಾನ ಮಠ ಅಂತೂರ-ಬೆಂತೂರ ಜಗದ್ಗುರು ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಮೌನ ಅನುಷ್ಠಾನ ಅಕ್ಟೋಬರ್ 9 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ ಎಂದು ಮುಖಂಡರಾದ ಶರಣಗೌಡ ಪೊಲೀಸ್ ಪಾಟೀಲ, ಕಾಶಪ್ಪ ಹಲಕರ್ಟಿ ಅವರು ತಿಳಿಸಿದ್ದಾರೆ.

ಅ.9 ರಂದು ಸಾಯಂಕಾಲ 6 ಗಂಟೆಗೆ ಶ್ರೀ ಶರಣಬಸವೇಶ್ವರ ಪುರಾಣ ಪ್ರಾರಂಭವಾಗಲಿದೆ, 21 ರಂದು ಸಮಾಧಿಯೋಗ  ಆರಂಭವಾಗಲಿದ್ದು, 31 ರಂದು ಮುಕ್ತಾಯ ಸಮಾರಂಭ ನಡೆಯಲಿದೆ, ಸಾಯಂಕಾಲ ರಾಮಲಿಂಗೇಶ್ವರ ದೇವಸ್ಥಾನದಿಂದ ಡೋಣಗಾಂವ ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

60 ಮೌನಾನುಷ್ಠಾನ, 16ನೇ ಶಿವಯೋಗ ಸಮಾಧಿಯ ನಂತರ ಶ್ರೀಗಳು ವಿಶ್ವಶಾಂತಿಗಾಗಿ 33 ದಿನಗಳ ನಿರ್ವಿಕಲ್ಪ ಶಿವಯೋಗ ಸಮಾಧಿ ತಪಸ್ಸು ಕೈಗೊಂಡು ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮಕ್ಕೆ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ತಾಲೂಕಿನ ಎಲ್ಲಾ ಪಕ್ಷಗಳ ಹಾಗೂ ಸಮಾಜಗಳ ಮುಖಂಡರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ.

ಮೌನ ಅನುಷ್ಟಾನಕ್ಕೆ ಗೊತ್ತು ಮಾಡಿದ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಅಂತೂರ-ಬೆಂತೂರ ಜಗದ್ಗುರು ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಭಾನುವಾರ ಭೇಟಿ ನೀಡಿ ಭಕ್ತಾದಿಗಳೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ರಾಮಣ್ಣಗೌಡ, ಮಲ್ಲಗೌಡ ಅವಂಟಿ, ಶಿವಶರಣ ಮೆಂಗನೋರ್, ಮಲ್ಲಿಕಾರ್ಜುನ ಅವಂಟಿ, ಮಲ್ಲಪ್ಪ ಹೊನ್ನಪುರ, ಶಿವರಾಜ್ ಮೆಂಗನೋರ್, ದೊಡ್ಡ ಶರಣಪ್ಪ ಹೊನ್ನಪುರ, ದೇವಾನಂದಪ್ಪ ಹೊನ್ನಪುರ, ಪದ್ಮಣ್ಣ ಬಾನರ್, ಭೀಮರಾಯ ಹೆಗಲೇರಿ, ಭೀಮರಾಯ ಸೋಂಡಿ, ದಯಾನಂದ್ ರೆಡ್ಡಿ ಹೊಸಳ್ಳಿ, ಹಣಮಂತ ಹಂದರಕಿ, ಶರಣಪ್ಪ ಹಲಕರ್ಟಿ, ಶರಣಪ್ಪ ನಾಟೀಕರ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!