ಗ್ರಾಮೀಣ ಭಾಗದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಘಟನೆಗೆ ಎಲ್ಲರೂ ಕೈಜೋಡಿಸಿ: ನಾಗರಾಜ ಭಂಕಲಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಘಟನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು.
ತಾಲೂಕಿನ ಆಲೂರು ಗ್ರಾಮದಲ್ಲಿ ಮಲ್ಲಿಕಾರ್ಜುನ ಬಸವರಾಜಪ್ಪ ಗೌಡ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಹಾಸಭಾ ವಿವಿಧ ಘಟಕಗಳಿಗೆ ನೇಮಕವಾದ ಎಲ್ಲಾ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜದ ಸಂಘಟನೆಗೆ ಸ್ವಲ್ಪ ಸಮಯ ನೀಡಬೇಕು ಎಂದು ಕಿವಿಮಾತು ಹೇಳಿದರು.
ಉಪಾಧ್ಯಕ್ಷ ಶಾಂತಪ್ಪ ಚಾಳಿಕಾರ ಮಾತನಾಡಿ, ಸಮಾಜದ ಸಭೆ ಸಮಾರಂಭಗಳಲ್ಲಿ ಶಾಲು, ಹಾರಾ ತುರಾಯಿ ಅಂತ ಅನಾವಶ್ಯಕ ಹಣ ಖರ್ಚು ಮಾಡಬೇಡಿ ಇದಕ್ಕೆ ಖರ್ಚು ಮಾಡುವ ಹಣ ಸಮಾಜದ ಅಭಿವೃದ್ಧಿಗೆ ವ್ಯಯಿಸಿ ಎಂದರು.
ಪ್ರದಾನ ಕಾರ್ಯದರ್ಶಿ ಆನಂದ ಪಾಟೀಲ ನರಿಬೋಳ, ಕಾರ್ಯದರ್ಶಿ ಬಸವರಾಜ ಪಾಟೀಲ ಭಾಗೋಡಿ, ಚಂದ್ರಶೇಖರ ಉಟಗೂರ, ಈಶ್ವರ ಬಾಳಿ, ಪ್ರಸಾದ ಅವಂಟಿ, ಪ್ರಕಾಶ ಹಂಚಿನಾಳ, ಮಲ್ಲರೆಡ್ಡಿ ಗೋಪಸೇನ್, ಬಸವರಾಜ ಸಂಕನೂರು, ಅನೀಲಕುಮಾರ ವಡ್ಡಡಗಿ, ನಾಗರಾಜ ಸುಲ್ತಾನಪೂರ, ಮಲ್ಲಿಕಾರ್ಜುನ ಹೂಗಾರ, ಮಹೇಶ್ ಬಾಳಿ, ರಮೇಶ್ ಕಾಳನೂರ, ಸೇರಿದಂತೆ ತಾಲೂಕು ಘಟಕದ, ಯುವ ಘಟಕ, ನಗರ ಘಟಕದ ಎಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ದೇವುಗೌಡ ಪಾಟೀಲ, ಅಣ್ಣಪ್ಪ ಪಾಟೀಲ, ಮಲ್ಲು ಇಂದೂರ, ಬಸವರಾಜಗೌಡ, ಗೌಡಪ್ಪಗೌಡ, ಶರಣಗೌಡ ಮಾಲಿಪಾಟೀಲ ಕಮರವಾಡಿ, ಮಲ್ಲುಗೌಡ ಮಾಲಿ ಪಾಟೀಲ, ಅಣ್ಣಪ್ಪಗೌಡ ಕಮರವಾಡಿ, ಮಲ್ಲಿನಾಥ ಸಾಹು ಸೂಲಹಳ್ಳಿ, ಮಲ್ಲಿಕಾರ್ಜುನ ಕಾಶೆಟ್ಟಿ, ಶಿವಶರಣಪ್ಪ ಶಿರವಾಳ, ಶಿವರಾಜ್ ಮಾಲಿ ಪಾಟೀಲ, ಬಸ್ಸು ಬಿರಾದಾರ, ಸಿದ್ರಾಮಪ್ಪ ಮಾಲಿ ಪಾಟೀಲ ಸೇರಿದಂತೆ ಇತರರು ಇದ್ದರು.