ಹೂಡಾ.ಬಿ ವಾಂತಿ ಭೇದಿ, ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ ಬಾಲರಾಜ್ ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಹೂಡಾ (ಬಿ) ಗ್ರಾಮದಲ್ಲಿ ಹಲವು ಜನರಿಗೆ ವಾಂತಿ ಭೇದಿಯಿಂದ ಅಸ್ವಸ್ಥಗೊಂಡು ಕಲಬುರಗಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ದಾಖಲಾದವರನ್ನು ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಹಣ್ಣು ಹಂಪಲು ವಿತರಿಸಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೂಡಾ (ಬಿ) ಗ್ರಾಮದಲ್ಲಿ ಹಲವು ಜನರಿಗೆ ವಾಂತಿ ಭೇದಿ ಮತ್ತು ಅಸ್ವಸ್ಥತಗೊಂಡಿದ್ದು ತಾಲೂಕು ಆಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದೆ. ಗ್ರಾಮೀಣ ಭಾಗದ ಜನರ ಆರೋಗ್ಯದ ಕುರಿತು ಸರಕಾರಕ್ಕಾಗಲಿ, ತಾಲೂಕು ಆಡಳಿತಕ್ಕಾಗಲಿ ಯಾವುದೇ ಕಾಳಜಿ ಇಲ್ಲದಂತೆ ಕಾಣುತ್ತಿದೆ. ಹಲವು ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಇದ್ದರು ಕೆಟ್ಟು ಹೊಗಿವೆ, ಅದನ್ನು ದುರಸ್ಥಿ ಮಾಡಿ ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದರು.
“ಹೂಡಾ (ಬಿ) ಗ್ರಾಮದಲ್ಲಿ ಹಲವು ಜನರಿಗೆ ವಾಂತಿ ಭೇದಿ ಮತ್ತು ಅಸ್ವಸ್ಥತಗೊಂಡಿದ್ದು ಗ್ರಾಮದ ಪಿಡಿಓ ಅವರಿಗೆ ದೂರವಾಣಿ ಕರೆ ಮಾಡಿ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಬೇಕು ಹಾಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕು”.-ಬಾಲರಾಜ್ ಗುತ್ತೇದಾರ ಜೆಡಿಎಸ್ ಜಿಲ್ಲಾಧ್ಯಕ್ಷರು ಕಲಬುರಗಿ.