ಇಟಗಾ ಗ್ರಾಮದಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆ | ದೇಶಕ್ಕೆ ರೖತರು ಎಷ್ಟು ಮುಖ್ಯವೋ, ಮೀನುಗಾರರು ಅಷ್ಟೆ ಮುಖ್ಯ: ತಮ್ಮಣ್ಣ ಡಿಗ್ಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದೇಶಕ್ಕೆ ರೖತರು ಎಷ್ಟು ಮುಖ್ಯವೋ ಅಷ್ಟೇ ಮೀನುಗಾರರು ಅಷ್ಟೆ ಮುಖ್ಯ ಎಂದು ಬಿಜೆಪಿ ಮೀನುಗಾರರ ಪ್ರಕೋಷ್ಟ ರಾಜ್ಯ ಸಮಿತಿ ಸದಸ್ಯ ತಮ್ಮಣ್ಣ ಡಿಗ್ಗಿ ಇಟಗಾ ಹೇಳಿದರು.
ಮೀನುಗಾರರ ಪ್ರಕೋಷ್ಟ ರಾಜ್ಯ ಸಂಚಾಲಕ ನಾಗಪ್ಪ ಅಂಬಿ ಅವರ ಆದೇಶದಂತೆ ತಾಲೂಕಿನ ಇಟಗಾ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮೀನುಗಾರರ ದಿನಾಚರಣೆ ಸಮಾರಂಭದಲ್ಲಿ ಮೀನುಗಾರರನ್ನು ಸನ್ಮಾನಿಸಿ ಮಾತನಾಡಿದ ಅವರು, ರೖತರು ಭೂಮಿಯಲ್ಲಿ ವ್ಯವಸಾಯ ಮಾಡಿ ದೇಶಕ್ಕೆ ಅಣ್ಣ ಹಾಕುವುದು ಎಷ್ಟು ಮುಖ್ಯ ಅಷ್ಟೆ ನಮ್ಮ ಮೀನುಗಾರರು ಬೆಸ್ತ ಸಮುದಾಯ ಸಮುದ್ರ ತೀರ ಇರಬಹುದು ಅಥವಾ ನದಿ ತೀರ ಇರಬಹುದು ಅವರ ಜೀವದ ಹಂಗು ತೊರೆದು ಚಳಿ ಇರಲಿ ಮಳೆ ಬಿಸಿಲು ಇರಲಿ ಮೀನುಗಾರಿಕೆ ಮಾಡಿ ದೇಶಕ್ಕೆ ಒಳ್ಳೆಯ ಆಹಾರ ಒದಗಿಸುವಲ್ಲಿ ಮೀನುಗಾರರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.
ಇಂದು ಮೀನುಗಾರರಿಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀರವರು ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯಲ್ಲಿ ಸಾಕಷ್ಟು ಅನುದಾನ ಒದಗಿಸಿ ಮೀನುಗಾರರ ಬದುಕನ್ನ ಕಟ್ಟಿ ಕೊಟ್ಟಿರುವ ನರೇಂದ್ರ ಮೋದಿಜೀ ರವರಿಗೆ ವಿಶ್ವ ಮಿನುಗಾರಿಕೆ ದಿನದಂದು ಸಮಸ್ತ ರಾಜ್ಯದ ಮೀನುಗಾರರ ಪರವಾಗಿ ಅಭಿನಂದನೆಗಳು ಸಲ್ಲಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಶಾಮರಾಯ ಡಿಗ್ಗಿ, ಸತ್ತಪ್ಪ ತಳವಾರ, ಪೀರಪ್ಪ ವಚ್ಚಾ, ಮಲ್ಲಪ್ಪ ಬೊಮ್ಮನಳ್ಳಿ, ಸಾಯಬಣ್ಣ ಕುಂಬಾರ, ಪುಂಡಲೀಕ ಡಿಗ್ಗಿ, ಸಿದ್ದಪ್ಪ ಡಿಗ್ಗಿ, ಸಾಬಣ್ಣ ಡಿಗ್ಗಿ, ಬಸಪ್ಪ ಡಿಗ್ಗಿ, ಸಿದ್ರಾಮ ಕೊಗನೂರ, ರಘುನಾಥ ದೊರಿ, ಸಾಬಣ್ಣ ತಳವಾರ, ದೇವಿಂದ್ರ ಬೊಮ್ಮನಳ್ಳಿ, ಸಿದ್ದಣ್ಣಗೌಡ ಪಾಟೀಲ, ಬಸವರಾಜ ಡಿಗ್ಗಿ, ಮಾಳಪ್ಪ ಡಿಗ್ಗಿ, ಸಿದ್ದಪ್ಪ ಹಂದರಕಿ, ಮಲ್ಲಪ್ಪ ತೊನಸನಳ್ಳಿ, ಸುಬ್ಬಣ್ಣ ಕುಂಬಾರ, ಜಗದೇವ ಕುಂಬಾರ, ಉಮೇಶ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

