ಪ್ರಜಾ ಸೇವೆ ಆಂದೋಲನದ ಸದುಪಯೋಗ ಮಾಡಿಕೊಳ್ಳಲು ಸಿದ್ದಲಿಂಗ ಸ್ವಾಮೀಜಿ ಕರೆ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಕರ್ನಾಟಕ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಪ್ರಜಾಸೇವೆ ಅಭಿಯಾನದಲ್ಲಿ ತಾಲೂಕು ಆಡಳಿತವೇ ನಿಮ್ಮ ಊರಿಗೆ ನಿಮ್ಮ ಮನೆಗೇ ಬಂದಿರುವಾಗ ಗ್ರಾಮದ ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿ ಕರೆ ನೀಡಿದರು.

ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಶಹಾಬಾದ ತಾಲೂಕ ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಹಾಗೆಯೇ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮಸ್ಯೆ, ಹೈಮಾಸ್ ದೀಪದ ಸಮಸ್ಯೆ, ಸ್ಮಶಾನದ ಸಮಸ್ಯೆ ಇರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು.

ತಾಲೂಕು ಪoಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಮಾತನಾಡಿ, ಜನರು ತಮ್ಮ ಸಮಸ್ಯೆಗಳಿಗೆ ತಾಲೂಕು, ಜಿಲ್ಲಾ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಆಡಳಿತವೇ ಜನರ ಮನೆ ಬಾಗಿಲಿಗೆ ಬಂದು ಜನರ ಕುಂದು ಕೊರತೆಗಳನ್ನು ಬಗೆಹರಿಸಲು ಜಾರಿಗೆ ತಂದಿರುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯೇ ಪ್ರಜಾಸೇವೆ ಆಗಿದೆ. ಆದ್ದರಿಂದ ತಾವೆಲ್ಲರೂ ತಮ್ಮ ಸಮಸ್ಯೆಗಳನ್ನು ಹೇಳಿ ಅದಕ್ಕೆ ಪರಿಹಾರ ನೀಡುವ ಕೆಲಸ ನಾವು ಮಾಡುತ್ತೇವೆ ಎಂದರು.

ವೇದಿಕೆಯ ಮೇಲೆ ಗ್ರಾಮದ ಹಿರಿಯ ಮುಖಂಡರಾದ ಮಾಜಿ ಜಿ. ಪಂ ಸದಸ್ಯ ಡಾ. ಗುಂಡಣ್ಣ ಬಾಳಿ, ಮಾಜಿ ತಾ. ಪಂ ಅಧ್ಯಕ್ಷ ಶ್ರೀನಿವಾಸ ಸಗರ ಅವರು ಮಾತನಾಡಿದರು. ಹಾಗೇ ಗ್ರಾಮಸ್ಥರ ಪರವಾಗಿ ಗ್ರಾಮದ ಒಳಗಡೆ ಮಠಕ್ಕೆ ಬರುವ ದಾರಿ ಆಗಲಿಕರಣದ ಮನವಿಯನ್ನು ಗುರುರಾಜ ಸಂಗಾವಿ ಹಾಗೂ ಮಲ್ಲಿನಾಥ ರಾವೂರ ಅವರಿಗೆ ನೀಡಿದರು.

ವೇದಿಕೆಯ ಮೇಲೆ ಉಪ ತಹಸೀಲ್ದಾರ್ ಶಿವಶಂಕರ ಬಿರಾದಾರ್, ಗ್ರೇಡ್ 2 ತಹಸೀಲ್ದಾರ್ ಗುರುರಾಜ್ ಸಂಗಾವಿ, ಗ್ರಾಮದ ಮುಖಂಡ ಸಾಹೇಬಗೌಡ ತುಮಕೂರ, ಅಬಕಾರಿ ನಿರೀಕ್ಷಿಕಿ ವನಿತಾ ಸೀತಾಳೆ, ಅಗ್ನಿಶಾಮಕ ದಳದ ಠಾಣಾ ಅಧಿಕಾರಿ ನಾಗರಾಜ ವೇದಿಕೆಯ ಮೇಲಿದ್ದರು.

ಪಿಡಿಓ ಕಾವೇರಿ ರಾಠೋಡ, ಗ್ರಾಮಲೆಕ್ಕಾಧಿಕಾರಿ ಶಿಲ್ಪಾ ಶಿoಪಿ, ರವಿಕುಮಾರ್, ವಸಂತಮೂರ್ತಿ, ಶಶಿಶೇಖರ, ವೀರಭದ್ರಪ್ಪ, ಶಿರಸ್ತೇದಾರ್ ಅಣವೀರಪ್ಪ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮಸ್ಥರು ತಮ್ಮ ಅಹವಾಲನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡರು.

Spread the love

Leave a Reply

Your email address will not be published. Required fields are marked *

error: Content is protected !!