ಹಸಿ ಬರಗಾಲ ಎಂದು ಘೋಷಿಸಿ ಜಿಲ್ಲೆಗೆ 1000 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನಾಳೆ ಕಲಬುರಗಿ ಬಂದ್: ವೀರಣ್ಣ ಗಂಗಾಣಿ
ನಾಗಾವಿ ಎಕ್ಸಪ್ರೆಸ್
ರಟಕಲ್: ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಿಸಿ ಜಿಲ್ಲೆಗೆ 1000 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಅ.13 ರಂದು ಕಲಬುರಗಿ ಬಂದ್ಗೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್ ಗೊಣಗಿ ಹೇಳಿದರು.
ರಟಕಲ್ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 13ರಂದು ಬಂದ್ಗೆ ಕರೆ ನೀಡಲಾಗಿದೆ. ಅಂದು ಕಲಬುರಗಿ ನಗರದ ಪ್ರಮುಖ ರಸ್ತೆಗಳಾದ ಆಳಂದ ಚೆಕ್ ಪೋಸ್ಟ್, ರಾಮಮಂದಿರ ಸರ್ಕಲ್, ಸೇಡಂ ಹಾಗೂ ಹುಮನಾಬಾದ ರಿಂಗ್ ರೋಡ್, ಹೀರಾಪುರ ಕ್ರಾಸ್, ಹೈಕೋರ್ಟ್ ರಸ್ತೆ ಹಾಗೂ ಶಹಾಬಾದ ರಿಂಗ್ ರೋಡ್ಗಳಲ್ಲಿ ಎತ್ತಿನಗಾಡಿ ಹಾಗೂ ಟ್ರಾಕ್ಟರ್ಗಳೊಂದಿಗೆ ರೈತರು ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತ, ದಲಿತ, ಕನ್ನಡ ಪರ, ಮಹಿಳಾ ಪರ ಸಂಘಟನೆಗಳು, ಕೆಎಸ್ಆರ್ಟಿಸಿ ಸಾರಿಗೆ ಸಂಘ, ಬಿದಿ ಬದಿ ವ್ಯಾಪರಸ್ಥರು, ಅಡತ ಬಜಾರ, ಲಾರಿ ಮಾಲೀಕರ ಸಂಘ, ಪೆಟ್ರೋಲ್ ಬಂಕ್, ಆಟೋ ಚಾಲಕರ ಸಂಘಗಳು ಬಂದ್ ಕರೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ, ಭೀಮರಾವ ಮಲಘಾಣ, ಸಿದ್ದರಾಮಪ್ಪ ಪಾಟೀಲ್, ಸುಂದರ ಸಾಗರ, ಪೃಥ್ವಿರಾಜ ಮಲಘಾಣ, ಮೋಹನ ಚಿನ್ನ, ಮಲ್ಲಿಕಾರ್ಜುನ ರದನೂರು, ರೇವಣಸಿದ್ದಪ್ಪ ಮೋಟಪ್ಪಳ್ಳಿ, ಮಲ್ಲು ಪಾಟೀಲ್ ಹೊಳಗೇರಾ, ಗೌರಿಶಂಕರ ನವದಗಿ, ಸಿದ್ದಯ್ಯ ಸ್ವಾಮಿ ಮುಕ್ರಂಬಿ, ಜಗನ್ನಾಥ ಅಲ್ಬ, ಶಾಂತಪ್ಪ ನಾಗೂರ ರೇವಗ್ಗಿ, ರಮೇಶ ಹೆಬ್ಬಾಳ, ಸಿದ್ದು ಚಟ್ನಳ್ಳಿ, ಪ್ರದೀಪ್ ಪಾಟೀಲ್, ಮಸಾಕ ಪಟೇಲ್,ಕಾಶೀನಾಥ ಗೋಗಿ, ಮಲ್ಲು ಹೂಗಾರ, ಚಂದ್ರಕಾಂತ ಕಲಶೆಟ್ಟಿ, ಸಿದ್ದಯ್ಯ ಸ್ವಾಮಿ ರೇವಗ್ಗಿ, ಸಂಜು ರೆಡ್ಡಿ ರೂಮನಗೂಡು, ದೇವಪ್ಪ ಪೂಜಾರಿ ಹೊಳಗೇರಾ, ಬಸವರಾಜ ಚಟ್ನಳ್ಳಿ, ಬಾಬುಸಾಬ ಮುಲ್ಲಾ, ಗುಂಡಯ್ಯ ಮಠಪತಿ, ರೇವಪ್ಪ ಬಸವಣ್ಣೋರ, ರೇವಣಸಿದ್ಧ ಮಳಖೇಡ, ರಾಜು ಹಂದ್ರಳ್ಳಿ ರಟಕಲ್ ಉಪಸ್ಥಿತರಿದ್ದರು.

