ಕುಂದಗೋಳ ಕ್ರಾಸ್ ಹತ್ತಿರ ಶೌಚಾಲಯ ನಿರ್ಮಾಣ ಮಾಡಲು ಭೀಮ ಪುತ್ರಿ ಬ್ರಿಗೇಡ್ ಆಗ್ರಹ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ತಾಲೂಕಿನ ಕಂದಗೂಳ ಕ್ರಾಸ್‌ನಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಸಿಸಿಟಿವಿ ಕ್ಯಾಮರಾ ಅಳವಡಿಸುವಿಕೆ, ಹಾಗೂ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಭೀಮಪುತ್ರಿ ಬ್ರಿಗೇಡ್ ಸಂಘಟನೆ ಮುಖಂಡರು ಕಾಳಗಿ ತಾಲೂಕು ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ ನರಸಯ್ಯ ಗುತ್ತೇದಾರ ರವರೆಗೆ ಮನವಿ ಪತ್ರ ಸಲ್ಲಿಸಿದರು.
ಭೀಮಪುತ್ರಿ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜಕುಮಾರ ಚವ್ಹಾಣ ಮಾತನಾಡಿ, ತಾಲೂಕಿನ ಕಂದೂಳ ಕ್ರಾಸ್ ಪ್ರಯಾಣಿಕರಿಗೆ ಸಂಚರಿಸಲು ಮುಖ್ಯ ಕೇಂದ್ರವಾಗಿದೆ. ಸಾರಿಗೆ ವಾಹನಗಳಿಗಾಗಿ ಕಾಯುವುದು ಅನಿವಾರ್ಯವಾಗಿದೆ. ಅದರಲ್ಲಿ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನಕ್ಕೆ, ಕಲಬುರಗಿ, ಮಹಾಗಾಂವ ಕ್ರಾಸ್, ಕಮಲಾಪುರ ಮೊದಲಾದ ಪಟ್ಟಣ ಗ್ರಾಮಗಳಿಗೆ ಈ ಮಾರ್ಗಮದ್ಯೆ ಕಾಲೇಜು ವಿದ್ಯಾರ್ಥಿಗಳು, ಶಾಲೆ ಮಕ್ಕಳು, ಸಾರ್ವಜನಿಕರು ಸೇರಿದಂತೆ ಹಲವಾರು ಜನರು ಕ್ರಾಸ್ ಮಾರ್ಗ ಮದ್ಯೆ ಸಂಚರಿಸುತ್ತಾರೆ.
ಈ ಎಲ್ಲಾ ಪ್ರಯಾಣಿಕರಿಗೆ ಶೌಚಾಲಯಕ್ಕೆ ತೆರಳಲು ಯಾವುದೇ ವ್ಯವಸ್ಥೆ ಇಲ್ಲದಂತಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಂದಗೋಳ ಗ್ರಾಮ ಪಂಚಾಯತಿ ವತಿಯಿಂದ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನೂಕುಲ ಆಗುತ್ತದೆ ಎಂದು ಹೇಳಿದರು.
ಮುಖ್ಯವಾಗಿ ಶೌಚಲಯ ಮೊದಲು ಅಗತ್ಯವಾಗಿದೆ. ಪುರುಷರು ಹೇಗಾದರೂ ಶೌಚ ವ್ಯವಸ್ಥೆ ಕಲ್ಪಿಸಿಕೊಂಡರೆ, ಮಹಿಳೆಯರು ಶೌಚಾಲಯಕ್ಕೆ ಪರದಾಡುವ ಪರಿಸ್ಥಿತಿ ಏದುರಾಗಿದೆ, ಹಲವಾರು ವರ್ಷಗಳ ಕಾಲದಿಂದ ಕೆಳಿಬರುತ್ತಿರುವ ಶೌಚಾಲಯದ ಬೇಡಿಕೆ ವ್ಯವಸ್ಥೆ ಕಂದಗೋಳ ಕ್ರಾಸನಲ್ಲಿ ನಿರ್ಮಾಣ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ ಎಂದು ಹೇಳಿದರು.
ಕಂದಗೋಳ ಕ್ರಾಸನಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು, ಶೌಚಾಲಯ ನಿರ್ಮಾಣ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಭೀಮಪುತ್ರಿ ಬ್ರಿಗೇಡ್ ಜಿಲ್ಲಾ ಮಹಿಳಾಧ್ಯಕ್ಷೆ ಜಗದೇವಿ, ಸಿದ್ದು ಕಟ್ಟಿಮನಿ, ಶರಣು ದೊಡ್ಡಮನಿ, ಜಮೀರ್ ಪಟೇಲ್, ಸಾಯಬಣ್ಣ ಸಾಮಗೊಳ, ಗುಲಾಮನಬಿ, ನಗೀನಾ, ಶಶಿಕಲಾ, ಮೋಹಿನ್, ರಾಜೇಂದ್ರ, ಶಾಂತಲಿಂಗ, ಮಹಿಳಾ ಘಟಕದ ಸದಸ್ಯರಾದ ಶೋಭಾ, ಸರಿತಾ, ಲಕ್ಷ್ಮೀ ಇದ್ದರು.

