Oplus_131072

ವಾಡಿ ಪಟ್ಟಣಕ್ಕೆ ಮೂಲಭೂತ ಸೌಕರ್ಯಗಳು ಕಲ್ಪಿಸಲು ಕಮ್ಯುನಿಷ್ಟ್ ಪಕ್ಷ ಆಗ್ರಹ

ನಾಗಾವಿ ಎಕ್ಸಪ್ರೆಸ್

ವಾಡಿ: ಪಟ್ಟಣಕ್ಕೆ ಮೂಲಭೂತ ಸೌಕರ್ಯಗಳು ಕಲ್ಪಿಸುವಂತೆ ಆಗ್ರಹಿಸಿ ಎಸ್.ಯು.ಸಿ.ಐ ಕಮ್ಯುನಿಷ್ಟ್ ಪಕ್ಷದ ಸ್ಥಳೀಯ ಕಾರ್ಯದರ್ಶಿ ಶರಣು ಹೇರೂರ ಅವರ ನೇತೃತ್ವದ ನಿಯೋಗ ಪುರಸಭೆಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಆರ್ಕೂಡ ಅವರಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ವಾಡಿ ಪಟ್ಟಣವು ಸುಮಾರು 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ, ವಾಡಿ ಪಟ್ಟಣವು ಕೈಗಾರಿಕಾ ಪ್ರದೇಶವಾಗಿದ್ದು ವ್ಯಾಪಾರಿಕವಾಗಿ ಕೇಂದ್ರ ಸ್ಥಾನವಾಗಿದೆ, ಪ್ರತಿದಿನವೂ ಸಾವಿರಾರು ಜನ ವ್ಯಾಪಾರ ವಹಿವಾಟುಗಳಿಗಾಗಿ, ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹಾಗೂ ಹಲವಾರು ರೀತಿಯ ಕೆಲಸ ಕಾರ್ಯಗಳಿಗಾಗಿ ಜನರು ವಾಡಿ ಪಟ್ಟಣಕ್ಕೆ ಆಗಮಿಸುತ್ತಾರೆ ಎಂಬುವುದು ಈಗಾಗಲೇ ತಿಳಿದಿರುವ ವಿಷಯ. ದುರಂತವೆಂದರೆ ಚಿತ್ತಾಪುರ ತಾಲೂಕಿನ ಈ ಮುಖ್ಯವಾದ ಪಟ್ಟಣದಲ್ಲಿ ಜನರಿಗೆ ಅತ್ಯವಶ್ಯಕವಾದ ಕನಿಷ್ಠ ಮೂಲಭೂತ ಸೌಲಭ್ಯಗಳು ಕೊಡಬೇಕಾದ ಸಾರ್ವಜನಿಕ ಮೂತ್ರಾಲಯ, ಶೌಚಾಲಯ, ಬಸ್ ನಿಲ್ದಾಣ ಮತ್ತು ದೂಳು ನಿಯಂತ್ರಣಕ್ಕೆ ಸರಿಯಾದ ಕ್ರಮ ಕೈಗೊಳ್ಳದಿರುವುದು ಇಂತಹ ಇನ್ನಿತರ ಅವಶ್ಯಕತೆಗಳು ಇಲ್ಲದೆ ಇರುವುದು ಅತ್ಯಂತ ನಾಚಿಕೆಯ ವಿಷಯವಾಗಿದೆ ಎಂದು ಕಾರ್ಯದರ್ಶಿ ಶರಣು ಹೇರೂರು ತಿಳಿಸಿದ್ದಾರೆ.

ಬೇಸಿಗೆಯ ಪ್ರಾರಂಭದಲ್ಲೇ ಬಿಸಿಲಿನ ತಾಪಮಾನವು ಈಗಾಗಲೇ ಹೆಚ್ಚುತ್ತಿರುವುದು ಜನರು ನರಳಾಡುವಂತಾಗುತ್ತಿದೆ. ಪುರಸಭೆಯ ಮುಖ್ಯ ಅಧಿಕಾರಿಗಳು ಈ ವಿಷಯಗಳ ಕುರಿತು ಕೂಡಲೇ ಗಮನಹರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಟ್ಟಣದಲ್ಲಿ ನೀರಿನ ಅಭಾವ ಉಲ್ಬಣಗೊಳ್ಳದಂತೆ ಕ್ರಮ ಕೈಗೊಳ್ಳಬೇಕು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಹಾಗೂ ಪಟ್ಟಣದಲ್ಲಿ ದೂಳು ನಿಯಂತ್ರಣಕ್ಕೆ ಕ್ರಮ ಹಾಗೂ ಇನ್ನಿತರ ಸೌಲಭ್ಯಗಳನ್ನು ಈ ಕೂಡಲೇ ಒದಗಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಬೇಸಿಗೆ ಪ್ರಾರಂಭವಾಗಿದ್ದು ವಾಡಿ ಪಟ್ಟಣದಲ್ಲಿ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ ಮಾಡಬೇಕು, ಸಾರ್ವಜನಿಕ ಶೌಚಾಲಯಗಳು ನಿರ್ಮಿಸಬೇಕು, ಪಟ್ಟಣದಲ್ಲಿ ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು, ಪುರಸಭೆ ವತಿಯಿಂದ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕು, ವಾಡಿ ಪಟ್ಟಣದಲ್ಲಿ ಬಸ್ ನಿಲ್ದಾಣವನ್ನು ಒದಗಿಸಿ, ವಾಡಿ ಪಟ್ಟಣದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಿ, ನೆನೆಗುದಿಗೆ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ಶೀಘ್ರವೇ ಮುಗಿಸಬೇಕು, ವಾಡಿ ಪುರಸಭೆಯ ಕಚೇರಿಯಲ್ಲಿ ಸಾರ್ವಜನಿಕರಿಗೆ ದೊರಕುವ ಸೇವೆಗಳ ಅವಧಿ ಹಾಗೂ ದರ ಪಟ್ಟಿ ಅಳವಡಿಸಬೇಕೆಂಬ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಷ್ಟ್ ಪಕ್ಷದ ಸ್ಥಳೀಯ ಸದಸ್ಯರಾದ ಮಲ್ಲಿನಾಥ ಹುಂಡೇಕಲ್, ವೆಂಕಟೇಶ್ ದೇವದುರ್ಗ, ಗೋವಿಂದ ಯಳವರ, ರಾಜು ವಡೆಯರ್, ಶಿವುಕುಮಾರ ಆಂದೋಲಾ, ಶ್ರೀಶೈಲ ಕಡಬೂರು, ಚಂದ್ರಕಾಂತ ಪಗಲಾಪೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!