ಅಯೋಧ್ಯೆಯ ರಾಮ ಮಂದಿರದ ಮೇಲೆ ಮೋದಿ ಧ್ವಜಾರೋಹಣದ ನಿಮಿತ್ತ ಕೊಂಚೂರಿನ ಶ್ರೀ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ 

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ಸಮೀಪದಲ್ಲಿರುವ ಕೊಂಚೂರಿನ ಶ್ರೀ ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ಮುಖಂಡರು ಅಯೋಧ್ಯೆಯ ರಾಮ ಮಂದಿರದ ಮೇಲೆ ಪ್ರಧಾನಿ ನರೇಂದ್ರ ಮೋದಿಜಿ ಅವರು ಐತಿಹಾಸಿಕ ಭಗವಧ್ವಜಾರೋಹಣ ನೆರವೇರಿಸಿದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಮಾತನಾಡಿ, ಅಯೋಧ್ಯೆಯಲ್ಲಿನ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದಿನ ಪವಿತ್ರ ದಿನದಂದು ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂದಿರದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಿ, ನಿರ್ಮಾಣ ಕಾರ್ಯದ ಪೂರ್ಣತೆಯನ್ನು ಅಧಿಕೃತವಾಗಿ ಘೋಷಿಸಿದ್ದು ನಮ್ಮೆಲ್ಲರಿಗೆ ಹೆಮ್ಮೆ ಎನಿಸುತ್ತಿದೆ. ಶ್ರೀ ರಾಮನ ಪರಮಭಕ್ತನಾದ ಆಂಜನೇಯ ಮಂದಿರದಲ್ಲಿ ನಾವು ಜೊತೆಗೂಡಿ ಭಕ್ತಿಯ ಪೂಜೆಯಲ್ಲಿ ಪಾಲ್ಗೊಂಡಿದ್ದರಿಂದ ಧನ್ಯತೆಯ ಭಾವ ಮೂಡಿದೆ ಎಂದರು.

ಈ ಸಂಧರ್ಭದಲ್ಲಿ ಬಂಜಾರ ಸಮಾಜದ ಅಧ್ಯಕ್ಷ ರಮೇಶ ಕಾರಬಾರಿ, ಯುವ ಮುಖಂಡ ವಿಠಲ್ ನಾಯಕ, ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ಮುಖಂಡರಾದ ಕಿಶನ ಜಾಧವ, ರಾಜೇಶ ಅಗ್ರವಾಲ, ಅಂಬದಾಸ ಜಾಧವ, ಅರ್ಜುನ ಕಾಳೆಕರ, ಮಲ್ಲಯ್ಯ ಸ್ವಾಮಿ, ಶಿವಶಂಕರ ಕಾಶೆಟ್ಟಿ, ನಾಗರಾಜ ಗೌಡಗೌಡಪ್ಪನೂರ, ಕಾಶಿನಾಥ ಶೆಟಗಾರ, ಅಂಬ್ರೇಷ್ ದಿಗ್ಗಾಂವ, ಚಂದ್ರಶೇಖರ ಬೆಣ್ಣೂರ, ಶ್ರೀನಿವಾಸ ಅಣ್ಣೆ, ವಿಶ್ವನಾಥ ಬಳವಡಗಿ, ಮಹೇಶ ಮಂತ್ರಿ, ಗುಂಡುಗೌಡ ಚಾಮನೂರ ಸೇರಿದಂತೆ ಅನೇಕರು ಪಾಲ್ಗೊಂಡು ಶ್ರೀ ರಾಮನ ಜಯಘೋಷ ಮೊಳಗಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!