ಲಾಡ್ಲಾಪುರ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
ನಾಗಾವಿ ಎಕ್ಸಪ್ರೆಸ್
ವಾಡಿ: ಸಮೀಪದ ಲಾಡ್ಲಾಪುರ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಮುಖಂಡರು ಸದಸ್ಯತ್ವ ಅಭಿಯಾನ ಕೈಗೊಂಡರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ್ ನಾಯಕ ಮಾತನಾಡಿ, ದೇಶ ಮತ್ತು ರಾಜ್ಯ ಜನರು ಭಾರತೀಯ ಜನತಾ ಪಾರ್ಟಿ ಸದಸ್ಯತ್ವ ಸ್ವೀಕರಿಸುವ ಮೂಲಕ ಮತ್ತಷ್ಟು ಬಿಜೆಪಿಗೆ ಬೆಂಬಲ ನೀಡುವ ಮುಖಾಂತರ ಭಾರತದ ಭವಿಷ್ಯಕ್ಕೆ ತಮ್ಮ ಸಹಕಾರ ನೀಡಬೇಕು ಎಂದು ಹೇಳಿದರು.
ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ವಾಡಿ ಅಧ್ಯಕ್ಷ ವೀರಣ್ಣ ಯಾರಿ ಮುಖಂಡರಾದ ನಾಗಣ್ಣ ಸಾಹು, ಮುಕ್ತೇದಾರ, ಸೋಮಶೇಖರ ಹಲಕರ್ಟಿ, ಈರಣ್ಣ ಮಲ್ಕಂಡಿ, ಸಾಬಣ್ಣ ಅಣೆಮಿ, ಪೋಮು ರಾಠೋಡ, ಶಿವಶಂಕರ ಕಾಶೆಟ್ಟಿ, ಮಲ್ಲು ಇಂದೂರ, ರವಿಕುಮಾರ ಕಮರವಾಡಿ, ದೇವರಾಜ ಮುಕ್ತೆದಾರ, ವಸಂತ ಹಲಕರ್ಟಿ ಸೇರಿದಂತೆ ಇತರರು ಇದ್ದರು.