ಮಾಡಬೂಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅನರ್ಹಗೊಳಿಸಲು ಮುಖಂಡರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮತಕ್ಷೇತ್ರದ ಮಾಡಬೂಳ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅಕ್ರಮವಾಗಿ ನಡೆದಿದ್ದು ಚುನಾಯಿತ ಆಡಳಿತ ಮಂಡಳಿ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮದ ಮುಖಂಡರು ಕಲಬುರಗಿ ಜಿಲ್ಲಾ ಸಹಕಾರ ಸಂಘಗಳ ಇಲಾಖೆಯ ಉಪ ನಿಬಂಧಕರಿಗೆ ಹಾಗೂ ಜಂಟಿ ನಿಬಂಧಕರಿಗೆ ಮನವಿ ಸಲ್ಲಿಸಿದ್ದಾರೆ.
ಮುಖಂಡ ಹಣಮಂತ ಬೆಂಕಿ ಮುಗುಟಾ ಮಾತನಾಡಿ, ಮಾಡಬೂಳ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಅಧಿಕಾರಿ ಪೀಯಾ ಚವ್ಹಾಣ ಅವರು ತಮ್ಮ ಮನಸಿಗೆ ಬಂದ ಹಾಗೆ ಚುನಾವಣೆ ಮಾಡಿದ್ದಾರೆ. ಚುನಾವಣೆಯಲ್ಲಿ ಹೊಸದಾಗಿ ಸದಸ್ಯರಿರುವ 200 ಜನ ಸದಸ್ಯರಿಗೆ ನೋಟಿಸ್ ನೀಡಿರುವುದಿಲ್ಲ. ಅಂಚೆ ಮುಖಾಂತರ ಕೂಡಾ ನೋಟಿಸ್ ಕಳಿಸಿರುವುದಿಲ್ಲ ಮತ್ತು ಚುನಾವಣೆ ನೋಟಿಸ್ ಜೋಡಣೆ ಕೂಡಾ ಹಾಕಿರುವುದಿಲ್ಲ. ಪ್ರೀಯಾ ಚವ್ಹಾಣ ಅವರು ಚೀಫ್ ಪ್ರಮೋಟರ್ ಹೇಗೆ ಹೇಳುತ್ತಾರೆ ಹಾಗೆ ಮಾಡಿದ್ದಾರೆ. ಚುನಾವಣೆಯನ್ನು ಚೀಪ್ ಪ್ರಮೋಟರ್ ಮನೆಯಲ್ಲಿ ಮಾಡಿದ್ದಾರೆ, ದಿನಪತ್ರಿಕೆಯಲ್ಲಿ ಹಾಕಿದ್ದೇವೆ ಎಂದು ಹೇಳಿದ್ದಾರೆ ಯಾವ ಪೇಪರಿನಲ್ಲಿ ಹಾಕಿದ್ದಾರೆಂದು ಗೊತ್ತಿಲ್ಲ, ಚುನಾವಣೆ ಅಧಿಕಾರಿಯಾಗಿ ಯಾವ ರೀತಿ ಚುನಾವಣೆ ಮಾಡಬೇಕೆಂದು ಗೊತ್ತಿದ್ದರೂ ತಮ್ಮ ಮನಸ್ಸಿಗೆ ಬಂದ ಹಾಗೆ ಚುನಾವಣೆ ಮಾಡಿದ್ದಾರೆ ಹಾಗೂ ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರಿಗೆ ತಿಳಿಸದೆ ಚುನಾವಣೆಯನ್ನು ನಡೆಸಿರುತ್ತಾರೆ. ಚಂದ್ರಶಾ ಅಣೆಪ್ಪಾ ಸುಬೇದಾರ ಇವರು (ಪರಿಶಿಷ್ಟ ಪಂಗಡ) ಜಾತಿಗೆ ಸೇರಿದ್ದು ಇವರು ಕೋರವಾರ ಗ್ರಾಮದಲ್ಲಿ ಜಮೀನು ಹೊಂದಿದ್ದು, ಅವರು ಮಾಡಬೂಳ ಪ್ರಾಥಮಿಕ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿರುತ್ತಾರೆ. ಹೀಗಾಗಿ ಆಡಳಿತ ಮಂಡಳಿ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾಗರಾಜ ಕಲ್ಯಾಣರಾವ ಇವರು ಸಂಗಾವಿ ಹಾಲಿ ಗ್ರಾ.ಪಂ ಸದಸ್ಯರಿದ್ದು ಮತ್ತು ಚೀಫ್ ಪ್ರಮೋಟರ ಇದ್ದು. ಇವರು ತಮ್ಮ ಮನೆಯಲ್ಲಿ ಅಕ್ರಮವಾಗಿ ಚುನಾವಣೆ ಮಾಡಿದ್ದಾರೆ ಮತ್ತು ಅವರ ತಂದೆಗೆ ಉಪಾಧ್ಯಕ್ಷರಾಗಿ ಮಾಡಿರುತ್ತಾರೆ. ತಮ್ಮ ಮನೆಯಲ್ಲಿ 5 ಜನ ಸದಸ್ಯರು ಚುನಾವಣಾ ಅಧಿಕಾರಿಗೆ ತಪ್ಪು ಮಾಹಿತಿ ನೀಡಿ, ಚುನಾವಣೆಯನ್ನು ಅಕ್ರಮವಾಗಿ ಚುನಾವಣೆಯನ್ನು ಜರುಗಿಸಿರುತ್ತಾರೆ. ಆದಕಾರಣ ಇವರನ್ನು ಸೇವೆಯಿಂದ ವಜಾಗೊಳಿಸಿ ಇವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮವನ್ನು ಜರುಗಿಸಬೇಕು ಹಾಗೂ ಸಂಘದ ಆಡಳಿತ ಮಂಡಳಿಯನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಖಂಡರಾದ ಸಿದ್ದಣ್ಣ ತೆಳಗಿನಮನಿ ವಚ್ಚಾ, ಮಲಣ್ಣಗೌಡ ಮಾಡಬೂಳ, ಶರಣಗೌಡ ಪಾಟೀಲ ಮಾಡಬೂಳ, ಶೇಖರ್ ಪೂಜಾರಿ ಮಾಡಬೂಳ, ಮಕಸೂದ ಪಟೇಲ್ ಮುಗಟಾ, ಹಮಿದ ಪಟೇಲ್ ಸಂಗಾವಿ, ಮಲ್ಕಣ ಗೌಡ ಹಳದ, ರವಿ ಮಾಡಬೂಳ, ಭೀಮರಾಯ ಮಾವನೂರ ಸಂಗಾವಿ, ಗೋಪಾಲ ಕೃಷ್ಣ ಕೊಳ್ಳಿ ಮುಗಟಾ, ಹಣಮಂತ ಹಡಪದ ಮುಗಟಾ, ಮಲ್ಲಿಕಾರ್ಜುನ ಸಜ್ಜನ ಮಾಡಬೂಳ, ಹಣಮಂತರಾಯ ದಿಗಾಂವಿ, ರಮೇಶ್ ತಳವಾರ ಮಾಡಬೂಳ, ಧನರಾಜ್ ಹದನೂರ ತಾಂಡಾ ಹಾಗೂ ಮುಖಂಡರು ಇದ್ದರು.

