ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಸೇವೆಗೆ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದಿಗೆ 4399 ದಿನಗಳು ಕಾಲ ಸೇವೆ ಸಲ್ಲಿಸಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸೇವೆ ಹಿಂದಿಕ್ಕಿ ಸುದೀರ್ಘವಾಗಿ ಹೆಚ್ಚು ಆಡಳಿತ ನಡೆಸಿದ್ದ ಪ್ರಯುಕ್ತ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣಗೌಡ ಮುದ್ನಾಳ ಅವರು ವಿಶೇಷ ಪೂಜೆ ಅಭಿಷೇಕ ಮಾಡಿದರು. ಈ ಸಂದರ್ಭದಲ್ಲಿ ದೇಶದ ಸಮಗ್ರ ಅಭಿವೃದ್ಧಿ, ಜನರ ಸುಖ-ಶಾಂತಿ, ಸಮೃದ್ಧಿ ಹಾಗೂ ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ, ಜನಪರ ಆಡಳಿತ ಹಾಗೂ ದೇಶದ ಅಭಿವೃದ್ಧಿಗಾಗಿ ಕೈಗೊಂಡಿರುವ ವಿವಿಧ ಯೋಜನೆಗಳು ಇನ್ನಷ್ಟು ಯಶಸ್ವಿಯಾಗಲಿ ಎಂದು ಭಕ್ತರು ಹಾಗೂ ಕ್ಷೇತ್ರದ ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸಿ. ದೇಶದ ಪ್ರಗತಿ, ರಾಷ್ಟ್ರೀಯ ಏಕತೆ, ಭದ್ರತೆ ಹಾಗೂ ಸಮೃದ್ಧಿಗಾಗಿ ಅವರು ನೀಡುತ್ತಿರುವ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಲಾಯಿತು.
ಮುದ್ನಾಳ ಅವರ ಅಭಿಮಾನಿಗಳ ಬಳಗದ ವತಿಯಿಂದ ರಾಮಸಮುದ್ರ, ಹಳಗೇರಿ, ಮಸ್ಕನಹಳ್ಳಿ, ಅರಿಕೇರಿ, ಆರ್ ಹೊಸಳ್ಳಿ, ಅರಿಕೇರಿ ತಾಂಡಾ ಹಾಗೂ ಮೈಲಾಪುರ ಗ್ರಾಮಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಹಾಗೂ ಮೈಲಾಪುರ ಗ್ರಾಮದ ಪಡ್ಡೆಪ ಮತ್ತು ಬನ್ನಪ್ಪ ಹಾಗೂ ಬಿಜೆಪಿ ಕಾರ್ಯಕರ್ತರ ವತಿಯಿಂದ ಪ್ರಸಾದ ವ್ಯವಸ್ಥೆ ನೆರವೇರಿತು.
ಕಾರ್ಯಕರ್ತರಾದ ಮಲ್ಲಿಕಾರ್ಜುನ ಜಲ್ಲಪ್ಪನವರ ರಾಮಸಮುದ್ರ. ಶರಣಪ್ಪ ಗೌಡ, ಚಂದಪ್ಪ ನಾಯಕ್ ದಂಡನೂರ್ ಸುರೇಶ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು. ಶರಣಗೌಡ ಐಕುರ್, ಭೀಮರಾಯ ಕೊಂಡಿ, ಸಾಬಣ್ಣ ಹಲಗೇರಿ ಟಿಪಿ, ಶಂಕ್ರಪ್ಪ. ಮಲ್ಲಿಕಾರ್ಜುನ ಕಂಚಿರ್, ಮಾರ್ತಾಂಡಪ್ಪಾ ಮೈಲಾಪುರ, ರುದ್ರಗೌಡ ಪಾಟೀಲ ಅರಿಕೇರಿ, ಬಸವರಾಜ ಮೀಸೆ ಅರಿಕೇರಿ, ಆಂಜನೇಯ ಮಸ್ಕಿನಲ್ಲಿ ದೇವು ಸೇರಿದಂತೆ ಹಲವಾರು ಕಾರ್ಯಕರ್ತರು ಮತ್ತು ಮುದ್ನಾಳ ಬಳಗದ ಅಭಿಮಾನಿಗಳು ಉಪಸ್ಥಿತರಿದ್ದರು.

