Oplus_0

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಬೆಳಗಾವಿ ಗಾಂಧಿ ಭಾರತ ಐತಿಹಾಸಿಕ ಕಾರ್ಯಕ್ರಮ ರದ್ದು: ಡಿ.ಕೆ.ಶಿವಕುಮಾರ

ನಾಗಾವಿ ಎಕ್ಸಪ್ರೆಸ್

ಬೆಳಗಾವಿ: ದೇಶದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ನಿಧನ ಹಿನ್ನಲೆಯಲ್ಲಿ ಶುಕ್ರವಾರ ಬೆಳಗಾವಿಯಲ್ಲಿ ನಡೆಯಬೇಕಿದ್ದ ಗಾಂಧಿ ಭಾರತ ಐತಿಹಾಸಿಕ ಕಾರ್ಯಕ್ರಮ ರದ್ದುಗೊಳಿಸಿಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞರು, ಅಪರೂಪದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಹಾಗೂ ನನಗೂ ವೈಯಕ್ತಿಕ ತೀವ್ರ ನೋವುಂಟಾಗಿದೆ ಎಂದರು.

ಹೀಗಾಗಿ ಗಾಂಧಿ ಭಾರತ ಕಾರ್ಯಕ್ರಮ ರದ್ದುಪಡಿಸಲಾಗಿದ್ದು, ಮುಖ್ಯ ವೇದಿಕೆಯಲ್ಲಿ ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಶ್ರದ್ಧಾಂಜಲಿ ಸಭೆ ನಡಿಸಿ ಗೌರವ ಸೂಚಿಸಲಾಗುತ್ತಿದ್ದು ಬೆಳಗಾವಿಯಲ್ಲಿ ಉಳಿದುಕೊಂಡ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಬೇಕು ಎಂದರು.

ಕಾಂಗ್ರೆಸ್ ಕಾರ್ಯಕಾರಿ ಸಭೆಗೆ ದೇಶದ ನೂರಾರು ನಾಯಕರು ಬೆಳಗಾವಿಯಲ್ಲಿ ಉಳಿದುಕೊಂಡಿದ್ದು ಇವರಿಗೆ ಯಾವುದೇ ತೊಂದರೆ ಆಗದಂತೆ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಕರ್ತವ್ಯ ನಿಭಾಯಿಸಬೇಕು. ನಾನು ಮತ್ತೆ ಸಿಎಂ ಅವರು ಶುಕ್ರವಾರ ದೆಹಲಿಗೆ ತೆರಳುತ್ತೇವೆ ಎಂದು ಹೇಳಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!