ನೂರು ಮಣಿಕಂಠ ಬಂದರೂ ಪ್ರಿಯಾಂಕ್ ಖರ್ಗೆ ಸೋಲಿಸುವುದು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಕಾಳಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಚಿವ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಹೀಗಾಗಿ ಜನರ ಆಶೀರ್ವಾದ ಇರೊವರೆಗೆ ಇಂತಹ ನೂರು ಮಣಿಕಂಠ ಬಂದರೂ ಸೋಲಿಸುವುದು ಸಾಧ್ಯವಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಸೋಲಿಸುವುದೇ ಅಜೆಂಡಾ ಎಂದು ಹೇಳಿದ ಮಣಿಕಂಠ ರಾಠೋಡ ತಿರುಕನ ಕನಸು ಕಾಣುತ್ತಿದ್ದಾನೆ ಎಂದು ತಿರುಗೇಟು ನೀಡಿದರು.
ಚಿತ್ತಾಪುರ ಕ್ಷೇತ್ರಕ್ಕೆ ಮತ್ತು ಕಲಬುರಗಿ ಜಿಲ್ಲೆಗೆ ನಿನ್ನ ಕೊಡುಗೆ ಏನು ? ಯಾವತ್ತಾದರೂ ದಲಿತಪರ, ರೈತಪರ, ಕಾರ್ಮಿಕರ ಪರ, ವಿದ್ಯಾರ್ಥಿಗಳ ಪರ, ನೊಂದವರ ಪರ ಹೋರಾಟ ಮಾಡಿದಿಯಾ ? ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಉಚಿತವಾಗಿ ಸರ್ಕಾರದ ಯೋಜನೆಗಳಿಗೆ ಬೇಕಾದ ವಿವಿಧ ಗುರುತಿನ ಚೀಟಿಗಳು, ಪ್ರಮಾಣ ಪತ್ರಗಳು ಜನರಿಗೆ ನೀಡಿ, ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡಿ ಈಗ 3 ವರ್ಷದ ನಂತರ ಕ್ಷೇತ್ರದ ನೇನಾಪಾಯ್ತೆ ಎಂದು ಮಣಿಕಂಠ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಅಥವಾ ರಾಜ್ಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಯಾರಿಗೂ ತೊಂದರೆ ನೀಡಿಲ್ಲ, ಗುಂಡಾಗಿರಿ ಮಾಡಿಲ್ಲ ಅವರೊಬ್ಬ ಪ್ರಬುದ್ಧ ರಾಜಕಾರಣ ಇಂತಹವರ ಬಗ್ಗೆ ಮಾತನಾಡುವ ನೈತಿಕತೆ ನೀನಗಿಲ್ಲ ಎಂದು ಟಾಂಗ್ ನೀಡಿದರು.
ಕಳೆದ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಷಡ್ಯಂತ್ರದಿಂದ ಸೋಲಾಯಿತು ಎಂದು ಹೇಳಿದ ಮಣಿಕಂಠ, ಜನರ ತೀರ್ಪಗೆ ತಲೆಬಾಗಬೇಕು ಹೊರತು ವೈಯಕ್ತಿಕ ಟೀಕೆ ಟಿಪ್ಪಣಿ ಮಾಡುವುದು ಸರಿಯಲ್ಲ ಎಂದರು.
ಕ್ಷೇತ್ರದಲ್ಲಿ ಡೊಳ್ಳು ಬಾಜಾ ಭಜಂತ್ರಿಯಿಂದ ಸ್ವಾಗತಿಸಲಿಕ್ಕೆ ಕ್ಷೇತ್ರಕ್ಕೆ ನಿನ್ನ ಕೋಡುಗೆ ಏನಿದೆ, ಮನೆಮಗ ಇಷ್ಟು ದಿವಸ ಎಲ್ಲಿಗೆ ಹೋಗಿದ್ದಿ, ಎನ್ ದೊಡ್ಡ ಸಾಧನೆ ಮಾಡಿದ್ದಿ ಅಂತ ಜನ ನಿನಗೆ ಸ್ವಾಗತಿಸುತ್ತಾರೆ. ಜನರಿಗೆ ಹಾದಿ ತಪ್ಪಿಸುವ ಹೇಳಿಕೆ ನೀಡೋದು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಲಿ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಕೇಸುಗಳು ಹಾಗೂ ಗಡಿಪಾರು ಆಗಿರುವ ಮಣಿಕಂಠ ರಾಠೋಡ ಸುಖಾಸುಮ್ಮನೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಗಳನ್ನು ಮಾಡುತ್ತಾ ತಿರುಗುತ್ತಾನೆ. ಪ್ರಿಯಾಂಕ್ ಖರ್ಗೆ ಅವರಿಗೆ ಬೈದರೆ, ಟೀಕಿಸಿದರೆ ದೊಡ್ಡವನಾಗಲ್ಲ ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ವಯಸ್ಸಿಗೆ ಮೀರಿ ಮಾತನಾಡಬಾರದು, ಯಾರಿಗೂ ಶೋಭೆ ತರುವಂಥದ್ದಲ್ಲ ಎಂದು ಕಿವಿಮಾತು ಹೇಳಿದರು.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಮಣಿಕಂಠ ರಾಠೋಡ ಕ್ಷೇತ್ರದಿಂದ ದೂರವಾಗಿದ್ದಾರೆ ಹಾಗಾಗಿ ಚಿತ್ತಾಪುರಕ್ಕೆ ಹೊಸ ನಾಯಕತ್ವ ನೀಡುವುದಾಗಿ ಮಾಲಗತ್ತಿ ಕಾರ್ಯಕ್ರಮದಲ್ಲಿ ಹೇಳಿರುವಾಗ ಮುಂದಿನ ಚುನಾವಣೆಯ ಟಿಕೆಟ್ ಬೇರೆಯವರಿಗಿದೆ ಎನ್ನುವ ಸುಳಿವು ನೀಡಿದ್ದಾರೆ. ಹೀಗಾಗಿ ನಿನಗೆ ಟಿಕೆಟ್ ಸಿಗುವ ಕುರಿತು ನಂಬಿಕೆ ಇಲ್ಲದ ನೀನು ಸಚಿವ ಪ್ರಿಯಾಂಕ್ ಖರ್ಗೆ ಸೋಲಿಸುವ ಬಗ್ಗೆ ಮಾತಾಡ್ತೀಯಾ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಪರಶುರಾಮ ಅಗ್ಗಿ, ಶಿವುಕುಮಾರ ಯಾದಗಿರಿ ಇದ್ದರು.

