Oplus_0

ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲುವು | ಮತ್ತೊಮ್ಮೆ ನಿಜವಾಯಿತು ಮಾಲಗತ್ತಿ ಶ್ರೀ ಚನ್ನಬಸವ ಶರಣರ ಭವಿಷ್ಯ 

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಐದು ಸಾವಿರ ಮತಗಳ ಆಸುಪಾಸಿನಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ ಮಾಲಗತ್ತಿ ಶ್ರೀ ಚನ್ನಬಸವ ಶರಣರ ಭವಿಷ್ಯ ಮತ್ತೊಮ್ಮೆ ನಿಜವಾಯಿತು.

ಈ ಹಿಂದೆ ಡಾ.ಉಮೇಶ್ ಜಾಧವ್, ಮಹಾರಾಷ್ಟ್ರ ರಾಜ್ಯದ ಚುನಾವಣೆ, ಅಕ್ಕಲಕೋಟ್ ವಿಧಾನಸಭಾ ಚುನಾವಣೆ ಸೇರಿದಂತೆ ಇತರೆ ಚುನಾವಣೆಗಳ ಬಗ್ಗೆ ನುಡಿದ ಭವಿಷ್ಯ ನಿಜವಾಗಿತ್ತು ಈಗ ಮತ್ತೊಮ್ಮೆ ಎಂಎಲ್ಸಿ ಚುನಾವಣೆ ಭವಿಷ್ಯ ನಿಜವಾಗಿದೆ.

ತಾಲೂಕಿನ ಸುಕ್ಷೇತ್ರ ಮಾಲಗತ್ತಿಯ ಶ್ರೀ ಹಿರೋಡೇಶ್ವರ ದೇವಸ್ಥಾನಕ್ಕೆ ಕಲಬುರಗಿಯ ರೇಣುಕಾ ದಾಂಡಿ ಅ.5 ರಂದು ಆಗಮಿಸಿ ಪೂಜ್ಯ ಚನ್ನಬಸವ ಶರಣರ ದರ್ಶನ ಆಶೀರ್ವಾದ ಪಡೆದು ಶ್ರೀಗಳ ಮುಂದೆ ಶಶೀಲ್ ನಮೋಶಿ ಗೆಲುವಿಗಾಗಿ ಮೊರೆ ಹೋದಾಗ ಪೂಜ್ಯಶ್ರೀ ಚನ್ನಬಸವ ಶರಣರ ವಾಣಿಯಂತೆ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸುಮಾರು ಐದು ಸಾವಿರ ಮತಗಳಿಂದ ಅಭೂತಪೂರ್ವ ಭರ್ಜರಿ ಜಯ ಸಾಧಿಸುತ್ತಾರೆಂದು ಭವಿಷ್ಯ ನುಡಿದಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!