ಮೊಗಲಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮೊಗಲಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಇದರ ಅಂಗವಾಗಿ ವಿಜ್ಞಾನ ಮೇಳವನ್ನು ಸಹ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಅರವತ್ತಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ, ತಮ್ಮ ಸೃಜನಶೀಲತೆ ಮತ್ತು ವೈಜ್ಞಾನಿಕ ಚಿಂತನೆಗೆ ಮೆಚ್ಚುಗೆ ಪಡೆದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಾಲಕರು ಹಾಗೂ ಪೋಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಕೊಂಡಾಡಿ, ಶಾಲೆಯ ವಿಜ್ಞಾನ ಮೇಳದ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಶಕ್ತಿ ಬೆಳೆಸುವ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದಾಗಿವೆ ಎಂದು ಅಭಿಪ್ರಾಯಪಟ್ಟರು.
ಎಸ್ಡಿಎಂಸಿ ಅಧ್ಯಕ್ಷ ಕಲ್ಯಾಣಿ ಮಳಖೇಡಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಗುರು ಸುರೇಶ್ ಸರಾಫ್ ಹಾಗೂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಚಿತ್ತಾಪುರ ಸಂಸ್ಥಾಪಕ ಅಜಿತಕುಮಾರ್ ಪಂಚಾಳ, ರಾಜೇಶ್ವರಿ, ಸಂತೋಷ್ ಸಾಹು ಮಸ್ತಾನಪ್ಪ ಹಾದಿಮನಿ, ಬಸವರಾಜ್ ಬಿ ಪೂಜಾರಿ, ವೀರಪ್ಪ ಕುಂಬಾರ್, ಎಲ್ಎಲ್ಎಫ್ ಪ್ರತಿನಿಧಿ ರೇಣುಕಾ, ಎಪಿಎಫ್ ಮಾರ್ಗದರ್ಶಕ ಸಾಬಣ್ಣ, ಸಹಶಿಕ್ಷಕರಾದ ಶಿವಕುಮಾರ್, ಸಾಬಮ್ಮ, ಅನಿಲ್, ವಿಜಯಲಕ್ಷ್ಮೀ, ಈಶ್ವರಾಜ್ ದೊಡ್ಡಮನಿ, ಕಾಶಿನಾಥ್, ಅಂಬಣ್ಣ ಅಲ್ಲೂರ್ ಕೆ, ಶರಣಬಸಪ್ಪ ಅಲಹಳ್ಳಿ ಸೇರಿದಂತೆ ಹಲವಾರು ಪಾಲಕರು, ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವಲ್ಲಿ ಮಹತ್ವದ ಹೆಜ್ಜೆಯಾಗಿತ್ತು.

