ನಾಳೆ ಚಿತ್ತಾಪುರಕ್ಕೆ ಶ್ರೀ ಸತ್ಯಾತ್ಮತೀರ್ಥ ಶ್ರೀಗಳು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದ್ವೈತ ತತ್ವ ಸಿದ್ಧಾಂತದ ಉತ್ತರಾದಿ ಮಠದ 42ನೇ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಜುಲೈ 14 ರಂದು ಸಾಯಂಕಾಲ 5 ಗಂಟೆಗೆ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಉತ್ತರಾದಿ ಮಠಕ್ಕೆ ಆಗಮಿಸಲಿದ್ದಾರೆ ಎಂದು ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗಿರೀಶ ಜಾನೀಬ್ ತಿಳಿಸಿದ್ದಾರೆ.
ವಿಶ್ವ ಮಾಧ್ವ ಮಹಾ ಪರಿಷತ್ (ಇಎಂಎಂಪಿ) ಸಂಸ್ಥಾಪಕರಾಗಿರುವ ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು, ಭಕ್ತರಿಗೆ ದರ್ಶನ ಮತ್ತು ಆಶೀರ್ವಚನ ನೀಡಲಿದ್ದಾರೆ. ಶ್ರೀಗಳು ಬಂದ ನಂತರ, ಭಕ್ತರಿಗೆ ಮುದ್ರಾ ಧಾರಣೆ ಕಾರ್ಯಕ್ರಮ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಜಾನೀಬ್ ಅವರು ಕೋರಿದ್ದಾರೆ.
ಮುದ್ರಾ ಧಾರಣೆ ಪಡೆಯಲು ಬಯಸುವ ಪುರುಷರು ಮತ್ತು ಸ್ತ್ರೀಯರು ಉಪವಾಸವಿದ್ದು, ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಲು ಮನವಿ ಮಾಡಿದ್ದಾರೆ.

