ನಾಲವಾರ ಶ್ರೀಗಳ ಸನ್ನಿಧಿಯಲ್ಲಿ ನಾಳೆ ಬೆಂಕಿತಾತ ಮಹಾರಾಜರ ಭವ್ಯ ರಥೋತ್ಸವ
ನಾಗಾವಿ ಎಕ್ಸಪ್ರೆಸ್
ಜೇವರ್ಗಿ: ತಾಲೂಕಿನ ಸುಕ್ಷೇತ್ರ ಯೆನಗುಂಟಿ ಬೆಂಕಿತಾತ ಮಹಾರಾಜರ ಜಾತ್ರಾ ಮಹೋತ್ಸವ ಸಮಾರಂಭವು ನಾಲವಾರದ ಪೂಜ್ಯ ಡಾ. ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆ ಶ್ರೀ ಸದಾಶಿವ ಬೆಂಕಿತಾತ ಮಹಾರಾಜರ ಭವ್ಯ ರಥೋತ್ಸವ ನಡೆಯಲಿದೆ ಈ ಸಂದರ್ಭದಲ್ಲಿ ವಿಶೇಷ ಮದ್ದು ಸುಡಲಾಗುವುದು.
ನಾಳೆ ಸುಕ್ಷೇತ್ರ ಯೆನಗುಂಟಿಗೆ ಶ್ರೀ ಕ್ಷೇತ್ರ ನಾಲವಾರ ಕೋರಿಸಿದ್ದೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ಶುಭಾಗಮನ ಪೂರ್ಣ ಕುಂಭ ಕಳಸ ಕನ್ನಡಿ ಮಂಗಳವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು ತದನಂತರ ಶ್ರೀ ಸದಾಶಿವ ಬೆಂಕಿತಾತ ಮಹಾರಾಜರ ಭವ್ಯ ರಥೋತ್ಸವ ನೆರವೇರಿದ ಬಳಿಕ ಜಾತ್ರಾ ಮಹೋತ್ಸವ ವಿಶೇಷ ಧಾರ್ಮಿಕ ಸಮಾರಂಭ ನಡೆಯಲಿದೆ ಮತ್ತು ಕಳೆದ ಒಂದು ವಾರದಿಂದ ಸಾಗಿಕೊಂಡು ಬಂದಿರುವ ಧಾರ್ಮಿಕ ಪುರಾಣ ಪ್ರವಚನ ಮಹಾಮಂಗಳೋತ್ಸವ ನಡೆಯಲಿದೆ ಈ ಸಮಾರಂಭದಲ್ಲಿ ವಿವಿಧ ಮಠಾಧೀಶರು ಸಾಹಿತಿಗಳು, ರಾಜಕೀಯ ಧುರೀಣರು, ಕವಿ, ಕಲಾವಿದರು ಭಾಗವಹಿಸುವರು ಮಾ. 8 ರಿಂದ ಬೃಹತ್ ಜಾನುವಾರುಗಳ ಜಾತ್ರೆ ಆರಂಭವಾಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
