Oplus_0

ನಾಲವಾರ ಶ್ರೀಗಳಿಗೆ ರಜತ್ ಕಿರೀಟ ಧಾರಣೆ, ಶ್ರೀ ಬೆಂಕಿ ತಾತ ಮಹಾರಾಜರ ಭವ್ಯ ರಥೋತ್ಸವ

ನಾಗಾವಿ ಎಕ್ಸಪ್ರೆಸ್

ಜೀವರ್ಗಿ. ತಾಲೂಕಿನ ಶ್ರೀ ಕ್ಷೇತ್ರ ಯನಗುಂಟಿ ಬೆಂಕಿ ತಾತ ಮಹಾರಾಜರ 38ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಾಲವಾರ ಶ್ರೀ ಡಾ. ಸಿದ್ದ ತೋಟೇಂದ್ರ ಮಹಾಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ ಜಯ ಘೋಷಗಳ ಮಧ್ಯೆ ಶ್ರೀ ಬೆಂಕಿ ತಾತ ಮಹಾರಾಜರ ಭವ್ಯ ರಥೋತ್ಸವ ಸಂಭ್ರಮದಿಂದ ನೆರವೇರಿತು

ಶುಕ್ರವಾರ ರಾತ್ರಿ ಭವ್ಯ ರಥೋತ್ಸವದ ನಂತರ ನಡೆದ ಜಾತ್ರಾ ಮಹೋತ್ಸವ ವಿಶೇಷ ಸಮಾರಂಭ ಮತ್ತು ಶ್ರೀ ಕ್ಷೇತ್ರ ನಾಲವಾರ ಶ್ರೀಗಳವರ ಜನ್ಮ ಶಷ್ಟಾಭಿ ಸಮಾರಂಭದ ಸನ್ನಿಧಾನ ವಹಿಸಿದ ಪರಮಪೂಜ್ಯ ಡಾ. ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ನೆರೆದ ಅಪಾರಭಕ್ತ ಸಮೂಹವನ್ನು ಉದ್ದೇಶಿಸಿ ಆಶೀರ್ವಚನ ನೀಡುತ್ತಾ, ಈ ನೆಲದಲ್ಲಿ ನೆಲೆ ನಿಂತ ಅಪಾರ ಸಂಖ್ಯೆಯ ಮಹಾತ್ಮರು ಶರಣರು ಸಂತರು ದಾರ್ಶನಿಕರು ಜನರ ನಿತ್ಯ ಜೀವನದ ಬದುಕಿಗೆ ಬೇಕಾದ ಆದರ್ಶ ಪ್ರೀತಿ ಸೌಹಾರ್ದತೆಯನ್ನು ಈ ನಾಡಿಗೆ ನೀಡಿ ಹೋಗಿದ್ದಾರೆ ಎಂದರು.

ಈ  ನೆಲದ ಪವಿತ್ರ ಕ್ಷೇತ್ರಗಳು ಜನರಲ್ಲಿ ಭಕ್ತಿ ಭಾವಗಳನ್ನು ಬಿತ್ತುವ ಕಾರ್ಯದಲ್ಲಿ ನಿರಂತರವಾಗಿ ಸಾಗಿವೆ ತನ್ಮೂಲಕ ಸಮಾಜದಲ್ಲಿ ಸಹಬಾಳ್ವೆ ಸಾಧಿಸಲು ಸಾಧ್ಯವಾಗುತ್ತಿದೆ ಪ್ರಯಾಗ್ ರಾಜ್ಯದಷ್ಟೇ ಪವಿತ್ರ ಈ ಸಂಗಮ ಕ್ಷೇತ್ರ ಎಂದು ಶ್ರೀಗಳು ನುಡಿದರು.

ಸಮಾರಂಭದಲ್ಲಿ ನಾಲವಾರ ಶ್ರೀಗಳ ಷಷ್ಠಬ್ದಿ ಸಮಾರಂಭದ ಅಂಗವಾಗಿ ಭಕ್ತಾದಿಗಳ ವತಿಯಿಂದ ರಜತ ಕಿರೀಟ್ ಧಾರಣೆಯನ್ನು ನೆರವೇರಿಸಲಾಯಿತು, ಇದಕ್ಕೂ ಪೂರ್ವದಲ್ಲಿ ಶ್ರೀ ಸದಾಶಿವ ಬೆಂಕಿ ತಾತ ಮಹಾರಾಜರ ಭವ್ಯ ರಥೋತ್ಸವಕ್ಕೆ ಪುಷ್ಪಾಲಂಕಾರ ಈ ಸಂದರ್ಭದಲ್ಲಿ ವಿಶೇಷ ಮದ್ದು ಸುಡುವ ಕಾರ್ಯಕ್ರಮ ನಡೆಯಿತು. ರಥೋತ್ಸವ ಸಾಗುತ್ತಿದ್ದಂತೆ ಸೇರಿದ ಸಹಸ್ರಾರು ಭಕ್ತರ ಶ್ರೀ ಬೆಂಕಿತಾತ ಮಹಾರಾಜ ಕೀ, ಶ್ರೀ ಕೋರಿಸಿದ್ದೇಶ್ವರ ಮಹಾರಾಜ ಕೀ ಶ್ರೀ ಸಿದ್ದ ತೋಟೆಂದ್ರ ಮಹಾರಾಜ ಕೀ ಎಂಬ ಜಯ ಘೋಷಗಳು ಮುಗಿಲು ಮುಟ್ಟಿದವು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಅಶೋಕ್ ಗೋಗಿ ಜೇವರ್ಗಿ, ಹನುಮಂತರಾಯೇಗೌಡ ಪಾಟೀಲ ನರಿಬೋಳ, ಬಸವರಾಜ್ ಪಾಟೀಲ್ ನರಿಬೋಳ, ರೇವಣಸಿದ್ದಪ್ಪ ಸಂಕಲಿ, ಸಂತೋಷ್ ಪಾಟೀಲ, ಆನಂದ ಮದರಿ, ಸಾಹೇಬ್ ಗೌಡ ಮರತ್, ಗುರುಲಿಂಗಯ್ಯ ಸ್ವಾಮಿ, ಸಂಗಮೇಶ್ ಮ್ಯಾಳಗಿ, ಅಯ್ಯಣ್ಣ ಕರ್ಗರ್, ಮಹದೇವ್ ಮ್ಯಾಳಗಿ, ಗಂಗಾಧರ ಶಾಸ್ತ್ರಿಗಳಿಂದ ಧಾರ್ಮಿಕ ಪುರಾಣ ಪ್ರವಚನ ನೆರವೇರಿತು, ಪ್ರಭು ಮಧುರಿ ಅವರಿಂದ ಸಂಗೀತ ನೆರವೇರಿತು, ಸಂಗಮೇಶ್ ಯಲಗುಂಟಿ ತಬಲ ಸಾತ್ ನೀಡಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!