Oplus_131072

ವಾಡಿ ರೈಲ್ವೆ ನಿಲ್ದಾಣಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕೇಂದ್ರ ಸಚಿವರಿಗೆ ಮನವಿ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರು ವಾಡಿ ಪಟ್ಟಣಕ್ಕೆ 27 ಏಪ್ರೀಲ್ 1952 ರಲ್ಲಿ ಭೇಟಿ ನೀಡಿರುವ ಹಿನ್ನೆಲೆ ವಾಡಿ ರೈಲ್ವೆ ನಿಲ್ದಾಣಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರ ರೈಲ್ವೆ ನಿಲ್ದಾಣವೆಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಚಿತ್ತಾಪುರ ತಾಲೂಕು ಅಧ್ಯಕ್ಷ ಸುನೀಲ್ ಗುತ್ತೇದಾರ ನೇತೃತ್ವದಲ್ಲಿ ಮುಖಂಡರು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಾನುವಾರ ಕಲಬುರಗಿ ನಗರಕ್ಕೆ ಆಗಮಿಸಿದ ಕೇಂದ್ರ ಸಚಿವರಿಗೆ ಭೇಟಿ ಮಾಡಿದ ಮುಖಂಡರು, ಕಲಬುರಗಿ ಮುಖಾಂತರ ಬೆಂಗಳೂರು ವರೆಗೆ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು ಕಾರಣ ಕಲಬುರಗಿ ಇಂದ ಬೆಂಗಳೂರು ವರೆಗೆ ಇಂಟರಸಿಟಿ ಪ್ಯಾಸೇಂಜರ್ ರೈಲು ಪ್ರಾರಂಭ ಮಾಡಿಸಬೇಕು, ಬೀದರ ನಿಂದ ರಾಯಚೂರ ವರೆಗೆ ಕಲಬುರಗಿ ಮಾರ್ಗವಾಗಿ ಪ್ಯಾಸೇಂಜರ್‌ಗಳ ಯಾವುದೇ ರೀತಿಯ ರೈಲುಗಳ ಸಂಪರ್ಕವಿಲ್ಲದ ಕಾರಣ ಬೀದರ್ ಕಲಬುರಗಿ ವರೆಗೆ ಪ್ರಯಾಣಿಸುವ ಪ್ಯಾಸೇಂಜರ್ ರೈಲಿನ ವಿಸ್ತರಣೆ ಮಾಡಿ ರಾಯಚೂರ ವರೆಗೆ ಸಂಪರ್ಕ ಕಲ್ಪಿಸಬೇಕು ಹಾಗೂ ಕಾಚಿಗುಡ-ವಾಡಿ ಪ್ಯಾಸೇಂಜರ್ ರೈಲು ವಾಡಿ ಪಟ್ಟಣದ ವರೆಗೆ ಇರುತ್ತದೆ ಇದರಿಂದ ವಾಡಿ ಪಟ್ಟಣದ ಸಾರ್ವಜನಿಕರು ಕಲಬುರಗಿ ನಗರಕ್ಕೆ ಪ್ರಯಾಣಿಸುವುದಕ್ಕೆ ತೊಂದರೆಯಾಗುತ್ತಿದ್ದು ಕಾರಣ ಕಲಬುರಗಿ ವರೆಗೆ ವಿಸ್ತರಣೆ ಮಾಡಿ ವಾಡಿ ಪಟ್ಟಣದ ಸಾರ್ವಜನಿಕರಿಗೆ ಅನೂಕುಲ ಮಾಡಬೇಕು ಎಂದು ಮನವಿ ಮಾಡಿದರು.

ಬೀದರ್-ಕಲಬುರಗಿ ವಾರಾಂತ್ಯ ರೈಲನ್ನು ದಿನನಿತ್ಯ ಪ್ರಯಾಣಿಸುವಂತೆ ಅದು ಕಲಬುರಗಿ ಮಾರ್ಗವಾಗಿ ಸಂಪರ್ಕ ನೀಡಿ ಬೆಂಗಳೂರು ನಗರಕ್ಕೆ ಪ್ರಯಾಣಿಸಲು ಅನೂಕುಲ ಮಾಡಿಕೊಡಬೇಕು ಈ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ತಾಲೂಕು ಸಂಘಟನಾ ಸಂಚಾಲಕ ಅಂಬರೀಷ್ ಮಾಳಗಿ, ವಾಡಿ ವಲಯ ಅಧ್ಯಕ್ಷ ಸಿದ್ದು ಎಸ್ ಪೂಜಾರಿ, ಪ್ರಭು ಪೂಜಾರಿ, ಬಸವರಾಜ ಗುತ್ತೇದಾರ, ಸಲೀಂ ಶೇಕ್ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!