Oplus_131072

ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಬಿಜೆಪಿ ಮುಖಂಡರಿಂದ ಕೇಂದ್ರ ರೈಲ್ವೆ ಸಚಿವರಿಗೆ ಮನವಿ

ನಾಗಾವಿ ಎಕ್ಸಪ್ರೆಸ್ 

ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದ ತ್ವರಿತ ಕಾಮಗಾರಿ ಅಭಿವೃದ್ಧಿ ಗಾಗಿ ಬಿಜೆಪಿ ಮುಖಂಡರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಲಬುರಗಿ ನಗರಕ್ಕೆ ಭಾನುವಾರ ಆಗಮಿಸಿದ ಕೇಂದ್ರ ರೈಲ್ವೆ ಸಚಿವರನ್ನು ಮಾಜಿ ಸಂಸದ ಡಾ.ಉಮೇಶ್ ಜಾಧವ ಅವರೊಂದಿಗೆ, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ವಾಡಿ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ ಹಾಗೂ ಮುಖಂಡ ಸುಭಾಷ್ ವರ್ಮಾ ಅವರು ಕಲಬುರಗಿ ನಗರದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಚರ್ಚಿಸಿ ಕೈಗೊಳ್ಳುಬೇಕಾದ ಕಾಮಗಾರಿಗಳ ಪಟ್ಟಿ ಸಲ್ಲಿಸಿದರು.

ವಾಡಿ ಪಟ್ಟಣವು ತನ್ನದೆ ಆದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಲ್ಲಿ ಭೇಟಿ ಕೊಟ್ಟಿದ್ದಾರೆ ಎಂದು ವಿವರಿಸಿದರು.

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜಿ ಅವರು ಅಮೃತ್‌ ಭಾರತ್‌ ಸ್ಟೇಷನ್‌ ಸ್ಕೀಮ್‌ ನಲ್ಲಿ ಈ ರೈಲ್ವೆ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಂಡಿದ್ದು ತುಂಬಾ ಖುಷಿಯಾಗಿದೆ ಅದಕ್ಕೆ ತಮ್ಮ ಸಹಕಾರ ಇರುವುದರಿಂದ ಇದು ಸಾಧ್ಯವಾಗಿದೆ. ಆದರೆ ಈ ನಿಲ್ದಾಣ ಅನೇಕ ಸಮಸ್ಯೆಗಳ ತಾಣವಾಗಿದೆ, ಕಾಮಗಾರಿ ವಿಳಂಬದ ಜೊತೆಗೆ ಕಳಪೆಯಾಗುತ್ತಿರುವುದು ಬೇಸರ ಮೂಡಿಸಿದೆ ಇದರ ಬಗ್ಗೆ ತಾವು ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ವಾಡಿ ನಿಲ್ದಾಣವನ್ನು ಗುಂತಕಲ್ ಅಥವಾ ಸಿಕಿಂದ್ರಬಾದ ವಿಭಾಗಕ್ಕೆ ಅಳವಡಿಸಿ, ಸುಮಾರು ವರ್ಷಗಳಿಂದ ಸೊಲ್ಲಾಪುರ ವಿಭಾಗದಲ್ಲಿದ್ದರೂ ನಿಲ್ದಾಣದ ಅಭಿವೃದ್ಧಿ ಕುಂಠಿತಗೊಂಡಿದೆ. ಫ್ಲೈಓವರ್ ಹಾಗೂ ಬ್ರಿಡ್ಜ್‌ ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಂಡು, ಗುಣಮಟ್ಟದೊಂದಿಗೆ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಹೇಳಿದರು.

ವಾಡಿ ಪಟ್ಟಣದ ಸುತ್ತಾ ರೈಲ್ವೆ ಗೇಟ್ ಗಳು ಆವರಿಸಿಕೊಂಡಿರುವುದರಿಂದ ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಎಸಿಸಿ ರೈಲ್ವೆ ಹಳಿ, ಲಕ್ಮೀಪುರವಾಡಿ ಹಳಿ ಹಾಗೂ ನಿಜಾಮ ಗೇಟ್ ಹಳಿಗಳಿಗೆ ಒಳ ಸೇತುವೆ ಅಥವಾ ಮೇಲ ಸೇತುವೆ ನಿರ್ಮಿಸಿ. ಹನುಮಾನ ನಗರ, ವಿಜಯ ನಗರ, ಸೋಮ್ಲಾ ತಾಂಡಾ ಹಾಗೂ ಇಂದಿರಾ ನಗರಕ್ಕೆ ಹೊಗಬೇಕಾದರೆ ರೈಲ್ವೆ ಹಳಿ ದಾಟಿಯೇ ಹೋಗಬೇಕು. ಸುಮಾರು ಏಳು ಎಂಟು ಸಾವಿರ ಬಡ ಕುಟುಂಬ ವಾಸಿಸುವ ಬಡಾವಣೆಗಳಿವೆ. ಇಲ್ಲಿನ ಜನರಿಗೆ ಸುರಕ್ಷಿತವಾಗಿ ಒಳ ಸೇತುವೆ ನಿರ್ಮಾಣ ಅತೀ ಅವಶ್ಯಕವಾಗಿದೆ. ಕೊಲ್ಲಾಪುರ ರೈಲನ್ನು ವಾಡಿ ಯಿಂದ ಪ್ರಾರಂಭಿಸಿ, ತಲುಪುವಂತೆ ಮಾಡಿ, ಕಾಚಿಗುಡಾ ಪ್ಯಾಸೆಂಜರ್ ರೈಲು ಕಲಬುರಗಿ ಯಿಂದ ಪ್ರಾರಂಭಿಸಿ, ತಲುಪುವಂತೆ ಹಾಗೂ ವಂದೇ ಭಾರತ ರೈಲನ್ನು ವಾಡಿ ನಿಲ್ದಾಣದಲ್ಲಿ ನಿಲ್ಲಿಸಲು ಸೂಚಿಸಿ ಇದ್ದರಿಂದ ಬಹಳಷ್ಟು ಜನತೆಗೆ ತುಂಬಾ ಅನುಕೂಲ ಆಗುತ್ತದೆ ಎಂದರು.

ರೈಲ್ವೆ ನಿಲ್ದಾಣದ ಕೊಳಚೆ ನೀರು ವಾರ್ಡ್ ಸಂಖ್ಯೆ 20ರಲ್ಲಿ ಹರಿದು ಹೊಗುತ್ತಿರುವುದರಿಂದ ಮಳೆಗಾಲದಲ್ಲಿ ಜನರು ಸಂಕಟಕ್ಕೆ ಸಿಲುಕುತ್ತಿದ್ದು ಇದನ್ನು ಪರಿಹರಿಸಿ, ನಿಲ್ದಾಣದಲ್ಲಿ ಶೌಚಾಲಯ ಮತ್ತು ವೇಟಿಂಗ್‌ ಹಾಲ ಸಮರ್ಪಕವಾದ ನಿರ್ವಹಣೆ ಇಲ್ಲದೇ ಇರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು ಮಾಡಿದರು.

ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ಗಾಗಿ ವೈದ್ಯರೊಂದಿಗೆ ಔಷಧ ಅಂಗಡಿ, ಸ್ವದೇಶಿ ಮಳಿಗೆ ಪ್ರಾರಂಭಕ್ಕೆ ಒತ್ತು ನೀಡಿ, ಗುಟುಕಾ, ದೊಮ್ರಪಾನ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ, ಜನರ ಮತ್ತು ಜಾನುವಾರುಗಳ ಸುರಕ್ಷಿತೆಗಾಗಿ ನಿಲ್ದಾಣದ 3 ಕಿ.ಮಿ ಸುತ್ತಲೂ ಬೇಲಿ ಹಾಕಿಸುವುದು, ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಿ, ತುರ್ತು ಸಂಧರ್ಭದಲ್ಲಿ ಅಂಬುಲೇನ್ಸ್ ಸಂಚಾರಿಸುವಂತೆ ಮಾಡುವುದು, ಹಳಿಗಳ ಮಧ್ಯ ಇರುವ ಸಾರ್ವಜನಿಕ ರುಧ್ರಭೂಮಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕೆಂಬ ಮನವಿ ಪತ್ರ ಸಲ್ಲಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!