ರೇಣುಕಾಚಾರ್ಯ ಜಯಂತಿ ಮಹೋತ್ಸವ ಪ್ರಯುಕ್ತ ಪೆದ್ದು ಮಠದಲ್ಲಿ ನಾಳೆಯಿಂದ ಜ್ಞಾನಜ್ಯೋತಿ ಪ್ರವಚನ
ನಾಗಾವಿ ಎಕ್ಸಪ್ರೆಸ್
ಚಿತ್ತಾವುರ: ಪಟ್ಟಣದ ಕಡಬೂರ ಗಲ್ಲಿಯ ಪುರಾತನ ಶ್ರೀ ಸಿದ್ಧವೀರೇಶ್ವರ ಪೆದ್ದು ಮಠದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಮಹೋತ್ಸವದ ಅಂಗವಾಗಿ ಫೆ. 24 ರಿಂದ ಮಾರ್ಚ್ 1 ರವರೆಗೆ ಐದು ದಿನ ಗಳ ಕಾಲ ‘ಜ್ಞಾನಜ್ಯೋತಿ ಪ್ರವಚನ’ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ವಕ್ತಾರ ಶರಣು ಉಡುಗಿ ತಿಳಿಸಿದ್ದಾರೆ.
ಕಳೆದ 16 ವರ್ಷಗಳಿಂದ ಅವಿರತವಾಗಿ ನಡೆದುಕೊಂಡು ಬಂದಿರುವ ಈ ಧಾರ್ಮಿಕ ಪರಂಪರೆಯು, ಸುಕ್ಷೇತ್ರ ಪಂಚಗೃಹ ಹಿರೇಮಠ ದಿಗ್ಗಾಂವ-ನಾಗಾವಿ ಶ್ರೀ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಜರುಗಲಿದೆ.
ಫೆಬ್ರವರಿ 24ರ ಮಂಗಳವಾರದಿಂದ ಫೆಬ್ರವರಿ 28 ರ ಶನಿವಾರದವರೆಗೆ ಪ್ರತಿದಿನ ರಾತ್ರಿ 7.30 ಕ್ಕೆ ಮಲಕೂಡದ ಖ್ಯಾತ ಪ್ರವಚನಕಾರರಾದ ವೇ.ಪಂ. ವೀರೇಶ ಶಾಸ್ತ್ರಿಗಳಿಂದ ‘ಜ್ಞಾನಜ್ಯೋತಿ ಪ್ರವಚನ’ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಕಲ್ಯಾಣಕುಮಾರ ಭಂಟನಳ್ಳಿ ಅವರ ಸಂಗೀತ ಹಾಗೂ ಅಭಿಷೇಕ ವಿಶ್ವಕರ್ಮ ಕೊಡ್ಲಾ ಅವರ ತಬಲಾ ಸಾಥ್ ಇರಲಿದೆ.
ಮಾರ್ಚ್ 1 ಕ್ಕೆ ಮಹಾಮಂಗಲ:
ಮಾರ್ಚ್ 1 ರ ಭಾನುವಾರದಂದು ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ, ಮುಂಜಾನೆ 6.30 ಕ್ಕೆ ಸಿದ್ದವೀರೇಶ್ವರರ ಕರ್ತ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ. ಬೆಳಿಗ್ಗೆ 10.30 ಕ್ಕೆ ಜಗದ್ಗುರು ರೇಣುಕಾಚಾರ್ಯರ ತೊಟ್ಟಿಲು ಕಾರ್ಯ ಹಾಗೂ ಮಹಾಮಂಗಲ ಕಾರ್ಯಕ್ರಮ. ತದನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಪಟ್ಟಣದ ಹಾಗೂ ಸುತ್ತಮುತ್ತಲಿನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಐದು ದಿನಗಳ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಸಮಸ್ತ ಸದ್ಭಕ್ತ ಮಂಡಳಿಯ ವರವಾಗಿ ಶರಣು ಉಡಗಿ ಹಾಗೂ ಮಲ್ಲಿಕಾರ್ಜುನ ಪೂಜಾರಿ ಕೋರಿದ್ದಾರೆ.

