ಪ್ರಧಾನಮಂತ್ರಿ ಪ್ರಕೃತಿ ವಿಕೋಪ ನಿಧಿಗೆ ನರಸಿಂಹ ರಾವ್ ಕುಲಕರ್ಣಿ ರೂ.9999 ಚೆಕ್ ತಹಸೀಲ್ದಾರ್ ಗೆ ಹಸ್ತಾಂತರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಬುಧವಾರ ರಾಷ್ಟ್ರೀಯ ಮಾನವ ಹಕ್ಕು ಪರಿಷತ್ ಜಿಲ್ಲಾಧ್ಯಕ್ಷ ನರಸಿಂಹ ರಾವ್ ಕುಲಕರ್ಣಿ ಅವರು ಪ್ರಧಾನಮಂತ್ರಿ ಪ್ರಕೃತಿ ವಿಕೋಪ ನಿಧಿಗೆ ರೂ.9999 ಚೆಕ್ ನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಹಸ್ತಾಂತರ ಮಾಡಿದರು.
ಅಲ್ಲದೇ ಯರಗಲ್ ರಸ್ತೆಯ ದೇವಿದಾಸ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಣ್ಣ ಕರದಾಳ, ನರಹರಿ ಕುಲಕರ್ಣಿ, ಬಸವರಾಜ ರಂಗನೂರ್, ಅಂಬರೀಷ್ ರಂಗನೂರ್ ಸೇರಿದಂತೆ ಇತರರು ಇದ್ದರು.

