ಕಲಬುರ್ಗಿ ಪಾಲಿ ಸಂಸ್ಥೆಗೆ 19 ಎಕರೆ ಜಮೀನು ಅಧಿಕಾರ ದುರುಪಯೋಗದಿಂದ ನೋಂದಣಿ, ಖರ್ಗೆ ವಿರುದ್ಧ ಹಾರಿಹಾಯ್ದ ಮಣಿಕಂಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರ್ಗಿಯಲ್ಲಿ ಪಾಲಿ ಸಂಸ್ಥೆ ಹೆಸರಿಗೆ 19 ಎಕರೆ ಜಮೀನನ್ನು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಸರ್ಕಾರ ಇಂತಿಷ್ಟು ಹಣ ಪಾವತಿಸಿ ಎಂದು ಸೂಚಿಸಿದರು ಇಲ್ಲಿವರೆಗೆ ಹಣ ಕಟ್ಟಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಹಾರಿಹಾಯ್ದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂಚೋಳಿಯಲ್ಲಿ ರೈತರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆ ಆರಂಭ ಮಾಡಿದ್ದರೆ ವಾಯುಮಾಲಿನ್ಯ ಕಾರಣ ನೀಡಿ ಬಂದ್ ಮಾಡಿಸಿದ್ದಾರೆ ಆದರೆ ಚಿತ್ತಾಪುರ ತಾಲ್ಲೂಕಿನಲ್ಲಿ ಸಿಮೆಂಟ್ ಕಂಪೆನಿಗಳಿಂದ ಹೊರಬರುವ ಹೋಗೆ, ವಾಯು ಮಾಲಿನ್ಯದಿಂದ 100 ಮಕ್ಕಳು ಹಾರ್ಟ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು. ಗಣಿ ಮತ್ತು ಭೂ ವಿಜ್ಞಾನ ನಿಯಮ ಪ್ರಕಾರ ಇಲ್ಲಿನ ಕಂಪೆನಿಗಳು ನಡೆಯುತ್ತದೆಯೇ ನಿಯಮದ ಪ್ರಕಾರ ನದಿ ನೀರನ್ನು ಬಳಸಬೇಕು ಆದರೆ ಇಲ್ಲಿ ಬೋರವೆಲ್ ಹೊಡೆಸಿ ಅದರಿಂದ ನೀರು ತೆಗೆದುಕೊಳ್ಳುತ್ತಿದ್ದಾರೆ ಇದೆಲ್ಲ ಸಚಿವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಚಿತ್ತಾಪುರದಲ್ಲಿ ಪಕ್ಷದ ಕಾರ್ಯಕರ್ತರು ಉತ್ಸಾಹದಲ್ಲಿದ್ದು 15 ದಿನದಲ್ಲಿ 50 ಸಾವಿರ ಬಿಜೆಪಿ ಸದಸ್ಯತ್ವ ಪೂರ್ಣಗೊಳಿಸುವ ವಿಶ್ವಾಸವಿದೆ, ಪ್ರತಿ ಮಹಾಶಕ್ತಿ ಕೇಂದ್ರಕ್ಕೆ ಹಾಗೂ ಕಾರ್ಯಕರ್ತರಿಗೆ ಭೇಟಿ ನೀಡಿ ಊರಿನ ಹಾಗೂ ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಮೂಲಕ ಚಿತ್ತಾಪುರ ಅಭಿವೃದ್ಧಿಗಾಗಿ ಹೋರಾಟ ಮಾಡಲಾಗುವುದು ಎಂದರು.
ತಾಲೂಕು ಉಸ್ತುವಾರಿ ಶರಣಪ್ಪ ತಳವಾರ ಮಾತನಾಡಿ, ಕಲಬುರ್ಗಿಯಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ಕಾಟಾಚಾರಕ್ಕೆ ನಡೆದಿದೆ ಸಿಎಂ ಬರುವ ರಸ್ತೆಗಳನ್ನು ಮಾತ್ರ ರಿಪೇರಿ ಮಾಡಿದ್ದಾರೆ, ಹೊರತು ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳು ಸುಧಾರಣೆ ಮಾಡಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕನಿಷ್ಠ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ, ಚಿತ್ತಾಪುರದಲ್ಲಿಯೂ ರಸ್ತೆಗಳು ಹದಗೆಟ್ಟಿವೆ ಶಾಲಾ ಕೋಣೆಗಳು ಸೋರುತ್ತೀವೆ, ಬೆಂಗಳೂರು ಮಂಗಳೂರು, ಮೈಸೂರು ಹೋಗುವುದನ್ನು ಬಿಟ್ಟು ಕಲಬುರ್ಗಿ ಜಿಲ್ಲೆಯಲ್ಲಿ ಹಾಗೂ ಚಿತ್ತಾಪುರ ಕ್ಷೇತ್ರದಲ್ಲಿದ್ದುಕೊಂಡು ಅಭಿವೃದ್ಧಿ ಮಾಡುವ ಕಡೆ ಗಮನ ಹರಿಸಿ ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ 19562 ಹೆಕ್ಟೇರ್ ಬೆಳೆ ಹಾನಿಯಾಗಿದೆ ಆದರೆ ಪರಿಹಾರ ಮಾತ್ರ ಬಂದಿಲ್ಲ ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮುಖಂಡರಾದ ಲಿಂಗಾರೆಡ್ಡಿ ಬಾಸರೆಡ್ಡಿ, ಚಂದ್ರಶೇಖರ ಅವಂಟಿ, ಶರಣಗೌಡ ಭೀಮನಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ್, ಸುರೇಶ್ ರಾಠೋಡ, ಸತ್ಯಾ ನಾರಾಯಣರೆಡ್ಡಿ ಭಂಕಲಗಿ, ಪ್ರಭು ಗಂಗಾಣಿ, ಮಲ್ಲಿಕಾರ್ಜುನ ಮಾಲಗತ್ತಿ, ಮಹೇಂದ್ರ ಕೋರಿ, ನಾಗರಾಜ ಹೂಗಾರ, ಎಂ.ಡಿ.ಯುನುಸ್, ದೇವರಾಜ್ ತಳವಾರ, ಅಶ್ವಥ್ ರಾಠೋಡ, ಶಿವರಾಮ್ ಚವ್ಹಾಣ, ಉದಯ ಸಿಂಪಿ ಸೇರಿದಂತೆ ಇತರರು ಇದ್ದರು.