Oplus_0

ಧಾರವಾಡದಲ್ಲಿ ನ.24 ರಂದು ನಡೆಯಲಿರವ ರಾಜ್ಯಮಟ್ಟದ ಕವಿಪೀಠ ಪ್ರಥಮ ಮಾಹಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಪ್ಪು ಕೋಟಿನ ಕವಿ ನಾಗಾವಿ ನಾಡು ದಂಡೋತಿಯ ಭೃಂಗಿಮಠ ಆಯ್ಕೆ, ಅಧಿಕೃತ ಆಹ್ವಾನ

ನಾಗಾವಿ ಎಕ್ಸಪ್ರೆಸ್ 

ವಿಜಯಪುರ: ಕನ್ನಡ ಸಾಹಿತ್ಯ ಸಾಂಸ್ಕೃತಿಕ ಹೊಸ ಹೆಜ್ಜೆಗಳನ್ನು ಸೃಷ್ಠಿಸುತ್ತಲೇ ಕವಿಪೀಠ ಎಂಬ ವಿಶಿಷ್ಡ ವಿನೂತನ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಕವಿಪೀಠದ ಜನಕ, ಕಪ್ಪುಕೋಟಿನ ಕವಿ, ನ್ಯಾಯವಾದಿ ಮಲ್ಲಿಕಾರ್ಜುನ ಗದಗಯ್ಯ ಭೃಂಗಿಮಠ ಅವರನ್ನು ಇದೇ ನವೆಂಬರ್ 24 ರಂದು ವಿದ್ಯಾಕಾಶಿ ಎಂದೇ ಕೆರಯಲ್ಪಡುವ ಧಾರವಾಡದಲ್ಲಿ ನಡೆಯಲಿರುವ ಪ್ರಥಮ ರಾಜ್ಯಮಟ್ಟದ ಕವಿಪೀಠ ಮಹಾಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು ಸಮ್ಮೇಳನದ ಸಂಘಟಕರು, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಬೆಂಗಳೂರಿನ ಪದಾಧಿಕಾರಿಗಳು, ಸಮ್ಮೇಳನಾಧ್ಯಕ್ಷರಾದ ಭೃಂಗಿಮಠ ಅವರಿಗೆ ಸನ್ಮಾನಿಸಿ ಅಧಿಕೃತವಾಗಿ ಆಹ್ವಾನ ನೀಡಿದರು

ಬುಧುವಾರ ಭೃಂಗಿಮಠ ಅವರ ವಿಶ್ವ ಋಷಿ ನಿವಾಸಕ್ಕೆ ಆಗಮಿಸಿದ ಪದಾಧಿಕಾರಿಗಳು ಅವರಿಗೆ ಶಾಲು ಹೊದಿಸಿ ಹಿರಿಯ ಸಾಹಿತಿಗಳ, ಕವಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಆಹ್ವಾನ ಪತ್ರದ ಫಲಕ ನೀಡಿ ಭೃಂಗಿಮಠ ದಂಪತಿಗಳಿಗೆ ಗೌರವಿಸಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಭೃಂಗಿಮಠರು ವಹಿಸಬೇಕೆಂದು ವಿನಂತಿಸಿ ಕವಿಪೀಠದ ಜನಕ ಎಂದು ಭೃಂಗಿಮಠ ಅವರಿಗೆ ಗೌರವ ನಾಮಕರಣ ಮಾಡಿದ ಬಗ್ಗೆ ಆಹ್ವಾನ ಪತ್ರದಲ್ಲಿ‌ ಉಲ್ಲೇಖಿಸಿದರು.

ಈ ಸಂಧರ್ಭದಲ್ಲಿ ಹಿರಿಯ ಸಾಹಿತಿ ರಘುನಾಥ ಬಾಣಿಕೋಲ ಅವರು ಮಾತನಾಡಿ, ಭೃಂಗಿಮಠ ಅವರು ಹಲವು ಪ್ರಥಮಗಳಿಗೆ ಕಾರಣಿಗರಾಗಿದ್ದಾರೆ, ಸ್ವಾಮೀಜಿಗಳಿಗೆ, ಹಣವಂತರಿಗೆ ಸೀಮಿತವಾಗಿದ್ದ ತುಲಾಭಾರ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ಆಚರಿಸಿ ಬಹುತೇಕ ವಿಶ್ವದಲ್ಲಿಯೇ ದಲಿತನೊಬ್ಬನಿಗೆ ಪುಸ್ತಕ ತುಲಾಭಾರ ಮಾಡುವ ಮೂಲಕ ಸಾಮಾಜಿಕ ಸಾಂಸ್ಕೃತಿಯ ಕ್ರಾಂತಿ ಮಾಡಿದ ಅವರ ಸೇವೆ ಕ್ರಿಯಾತ್ಮಕವಾಗಿದೆ, ಸದಾ ಒಂದಿಲ್ಲೊಂದು ಹೊಸತನ ಹುಡುಕುವ ಭೃಂಗಿಮಠರಿಗೆ ನಾನು ವಿದ್ಯಾರ್ಥಿದಸೆಯಿಂದಲೇ ಬಲ್ಲೆ ಎಂದ ಅವರು ಭೃಂಗಿಮಠ ಅವರ ಕವಿತೆಗಳು ಸಾಮಾಜಿಕ ಕ್ರಾಂತಿಗೆ ಪ್ರೇರಣೆಯಾಗಿವೆ ಎಂದರು.

ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ರಾಜ್ಯ ಪ್ರಾಧಾನ ಕಾರ್ಯದರ್ಶಿ  ಜಿ.ಎಸ್ ಬಿರಾದಾರ ಅವರು ಮಾತನಾಡಿ, ವಿಜಯಪುರ ಭೃಂಗಿಮಠ ಅವರ ಕ್ರಿಯಾತ್ಮಕ ಯೋಜನೆ, ಯೋಚನೆಯಲ್ಲಿ ಹುಟ್ಟಿದ ಕವಿಪೀಠ ಪರಿಕಲ್ಪನೆಯ ಕೂಸು ಇಂದು ಪ್ರಥಮ ಮಹಾ ಸಮ್ಮೇಳನ ಆಗುವವರೆಗೂ ಬೆಳದಿದ್ದು ಇದಕ್ಕೆ ಭೃಂಗಿಮಠರು ಮೂಲ ಕಾರಣರಾಗಿದ್ದಾರೆ, ಇದೊಂದು ಇತಿಹಾಸ ಸೃಷ್ಟಿಯಾಗಿದೆ. ಪುಸ್ತಕ ಜೋಳಿಗೆ ಯಾತ್ರೆ, ವಿಶ್ವದ ಪ್ರಥಮ‌ ಪೇಂಟಿಂಗ್ ತುಲಾಭಾರ ಇತ್ಯಾದಿ ಪರಿಕಲ್ಪನೆಯನ್ನು‌ ಹುಟ್ಟು ಹಾಕಿ ಕನ್ನಡದ ಸಾಂಸ್ಕೃತಿಕ‌‌ ಲೋಕಕ್ಕೆ ಉತ್ತಮ‌ ಕೊಡುಗೆ ನೀಡುತ್ತಿರುವ ಭೃಂಗಿಮಠ ವಕೀಲರು ನ್ಯಾಯಾಲಯದ ಒಳಗೂ ಹೊರಗೂ ನ್ಯಾಯಪರ ಹೋರಾಡುತ್ತಲೇ ಇದ್ದಾರೆ. ಇವರ ಈ ವಿವಿಧ ಕ್ಷೇತ್ರಗಳ ಸೇವೆಯನ್ನು ಪರಿಗಣಿಸಿ ಅವರಿಗೆ ಧಾರವಾಡದಲ್ಲಿ ಇದೇ ನಾ.24 ರಂದು ನಡೆಯಲಿರುವ ಕವಿಪೀಠ ಮಹಾಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮನೋಹರ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಷತ್ತಿನ ಸಭೆಯಲ್ಲಿ‌ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ ಅವರು, ಧಾರವಾಡಕ್ಕೂ ವಿಜಯಪುರಕ್ಕೂ ಗತಕಾಲದಿಂದಲೂ ಸಾಹಿತ್ಯಿಕ, ಸಾಂಸ್ಕೃತಿಕ ನಂಟು ಬೆಳೆದು ಬಂದ್ದದ್ದು ಈ ಸಮ್ಮೇಳನಕ್ಕೆ ಭೃಂಗಿಮಠರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದರಿಂದ ಮತ್ತೆ ಸಾಂಸ್ಕೃತಿಕ, ಸಾಹಿತ್ಯಿಕ ನಂಟು ಮುಂದುವರೆಯುವಂತಾಗಿದೆ ಎಂದು ತಮ್ಮ‌ ವಿಚಾರ ವ್ಯಕ್ತಡಿಸಿದರು.

ಹಿರಿಯ ಸಾಹಿತಿ ಜಂಬೂನಾಥ ಕಂಚ್ಯಾಣಿ ಮಾತನಾಡಿ, ಶ್ರಮಜೀವಿಗಳಿಗೆ ಸ್ಥಳದಲ್ಲೇ ಸನ್ಮಾನ, ರೈತನ ಕವಿಗಳ ಮನೆ ಬಾಗಿಲಿಗೆ ಸನ್ಮಾನ ಹೀಗೆ ಕ್ರೀಯಾತ್ಮಕ ಸೇವೆ ಮಾಡುತ್ತಾ ಬಂದಿರುವ ಭೃಂಗಿಮಠರು ಕಪ್ಪು ಕೋಟಿನ ಕವಿಗಳೆಂದು ಖ್ಯಾತನಾಮರಾಗಿದ್ದಾರೆ ಎಂದರು.

ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ಬಿ.ಎಮ್.ಪಾಟೀಲ ಮಾತನಾಡಿ, ಕವಿಪೀಠ ಮಹಾಸಮ್ಮೇಳನ ಎಂಬ ಈ ಸಂಸ್ಕೃತಿ ಕವಿಗಳು, ಅಕ್ಷರ ಲೋಕದ ಭ್ರಮ್ಮರಾದವರು. ಸದಾ ಸಮಾಜಪರ ಚಿಂತಿಸುವ ಜನರ‌ ಕೈಯಲ್ಲಿ ಅಧಿಕಾರ ನೀಡುವ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವ ಚಿಂತಕರನ್ನು ಗೌರವಿಸುವ ಸಮಾಜ ಸ್ಥಾಪನೆಯ ಗುರಿ ಹೊಂದಿರುವುದು ಶ್ಲಾಘನೀಯ ಎಂದರು.

ಹಿರಿಯರಾದ ಓ.ಎಸ್ ಕೆಂಪವಾಡ ಮಾತನಾಡಿ, ಸಾಂಸ್ಕೃತಿಕ ಲೋಕದ ಲೇಖಕರು, ಕವಿಗಳು, ಪತ್ರಕರ್ತ ಕೈಯಲ್ಲಿ ಆಡಳಿತ ಸಿಗುವಂತಹ ವಾತಾವರಣ ಸೃಷ್ಠಿಸುವುದು ಅಗತ್ಯವಾಗಿದ್ದು ಅದಕ್ಕೆ ಕವಿಪೀಠ ಮಹಾ ಸಮ್ಮೇಳನ ಪೂರಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಡಾ.ರಶ್ಮಿ ಭೃಂಗಿಮಠ, ಡಾ. ಶ್ವೇತಾ, ಸುಜಾತ ಕೆಂಪವಾಡ, ಸಿದ್ದಾರ್ಥ ಜಂಡೆ, ಡಾ.ಸತೀಶ ಬ್ಯಾಳಿ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!