ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂಲಕ ಸಿಡಿಪಿಒ ಆರತಿ ತುಪ್ಪದ್ ಭಾನುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವೀರನಾಥ್, ಡಾ.ರೇಹೆಮಾನ್, ಡಾ.ಶಾಂತಯ್ಯ ಸ್ವಾಮಿ, ಡಾ.ಅಮೃತಾ, ಡಾ.ಖನೀಜ್ ಫಾತಿಮಾ, ದತ್ತಾತ್ರೇಯ, ಅಂಗನವಾಡಿ ಮೇಲ್ವಿಚಾರಕಿ ರಮಾಬಾಯಿ, ಸುನಂದಾ, ಅನಸುಯ್ಯಾ, ರೋಜಾಲಿನ್, ಕಾಳಮ್ಮ ಮಠಪತಿ, ಸುಹಾಸಿನಿ ಸೇರಿದಂತೆ ಆರೋಗ್ಯ ಸಿಬ್ಬಂದಿಗಳು, ತಾಯಂದಿರು ಉಪಸ್ಥಿತರಿದ್ದರು.

