ಸನ್ನತಿಯ ಗಿಡಗಂಟಿಗಳಿಂದ ಮುಚ್ಚಿ ಹೋಗಿದ್ದ ಗವಿ ಬಸವೇಶ್ವರ ದೇವಸ್ಥಾನ ಸ್ವಚ್ಛಗೊಳಿಸಿದ ಶ್ರೀ ಗುರು ಸೋಮಲಿಂಗೇಶ್ವರ ಸೇವಾ ಸಂಘದ ಕಾರ್ಯಕ್ಕೆ ಮೆಚ್ಚುಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸನ್ನತಿಯ ಬುದ್ಧ ಸ್ತೋಪ ಸಮೀಪ ಗಿಡಗಂಟಿಗಳಿಂದ ಮುಚ್ಚಿ ಹೋಗಿದ್ದ ಶ್ರೀ ಗವಿ ಬಸವೇಶ್ವರ ದೇವಸ್ಥಾನದ ಸುತ್ತ ಬೆಳೆದ ಜಾಲಿ ಮರ, ಗಿಡಗಂಟಿಗಳನ್ನು ಕಡೆದು ಸ್ವಚ್ಛತೆ ಕಾರ್ಯ ಕೈಗೊಂಡು ದೇವಸ್ಥಾನವನ್ನು ಬೆಳಕಿಗೆ ತಂದ ಶ್ರೀ ಗುರು ಸೋಮಲಿಂಗೇಶ್ವರ ಸೇವಾ ಸಂಘ ಪದಾಧಿಕಾರಿಗಳು ಹಾಗೂ ಊರಿನ ಯುವಕರ ಶ್ರಮದಾನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಚ್ಛತೆ ಇಲ್ಲದೆ ಹಾಳು ಕೊಂಪೆಯಾಗಿದ್ದ ದೇವಸ್ಥಾನವನ್ನು ಯುವಕರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಸ್ವಚ್ಛತೆ ಕಾರ್ಯಕ್ಕೆ ಮುಂದಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ದೇವಸ್ಥಾನದ ಒಳಗಡೆ ಮತ್ತು ಹೊರಗಡೆ ಸುಣ್ಣ ಬಣ್ಣಗಳಿಂದ ಅಲಂಕರಿಸಿ ದೇವಸ್ಥಾನದ ಮೇಲೆ ಧ್ವಜವನ್ನು ಕಟ್ಟುವ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಶ್ರೀ ಗುರು ಸೋಮಲಿಂಗೇಶ್ವರ ಸೇವಾ ಸಂಘದಿಂದ ಈಗಾಗಲೇ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಮಾಡುತ್ತಾ ಬಂದಿದ್ದು, ಈಗ ಸೇವಾ ಕಾರ್ಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹಿರಿಯ ಮುಖಂಡ ಸಿದ್ದನಗೌಡ ಪೊಲೀಸ್ ಪಾಟೀಲ ತಿಳಿಸಿದ್ದಾರೆ.
ಜಗದೀಶ್ ಶಾಸ್ತ್ರಿ ಸನ್ನತಿ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ನಾಗಯ್ಯ ಸ್ವಾಮಿ ಗುಡಿ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಗೊಬ್ಬರಡಗಿ, ವೀರಯ್ಯಸ್ವಾಮಿ ಅಡ್ವಿಕೇಟ್, ಮಲ್ಲಯ್ಯ ಸ್ವಾಮಿ ಗುಡಿ, ಸೋಮಶೇಖರ್ ಗೊಬ್ಬರಡಗಿ, ಸೋಮ ಅಣಬಿ, ಪಂಚಕ್ಷರಿ ಗುಡಿ, ಸಾಹೇಬ ನಾಯಿಕೋಡಿ, ಶಿವಯೋಗಿ ನಟೆಕಾರ್, ಮಲ್ಲು ನಟೆಕಾರ್, ಮನೋಜ ನಟೆಕಾರ್, ಜಗಯ್ಯ ಸ್ವಾಮಿ ಸಂಘದ ಎಲ್ಲಾ ಸದಸ್ಯರು, ಯುವಕರು ದೇವಸ್ಥಾನದ ಸ್ವಚ್ಛತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

