ಕಲಬುರ್ಗಿ: ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿಗೆ ನಾಗಾವಿ ವಿಶ್ವವಿದ್ಯಾಲಯ ಎಂದು ಹೆಸರಿಡುವ ಮೂಲಕ ಈ ಭಾಗದ ನಾಗಾವಿ ಶ್ರೀ ಯಲ್ಲಮ್ಮ ದೇವಿಯ ಶೈಕ್ಷಣಿಕ ಸೇವೆಯ ಇತಿಹಾಸದ ಸ್ಮರಣೆಗೆ ಅವಕಾಶ ನೀಡಬೇಕೆಂದು ಸಮಾಜ ಸೇವಕ ವಿಶ್ವನಾಥ್ ಪಾಟೀಲ್ ಗವನಳ್ಳಿ ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಗಾವಿಯ ನಾಗಾವಿ ಯಲ್ಲಮ್ಮ ದೇವಿ ರಾಷ್ಟ್ರಕೂಟರ ಅರಸ ಅಮೋಘವರ್ಷ ನೃಪತುಂಗನ ಕುಲದೇವತೆ ಯಾಗಿದ್ದಳು ಮತ್ತು ಹಳೆಯ ಕಾಲದ ದೇವಾಲಯಗಳು ಹಾಗೂ ಮಠಗಳು ಕಲಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದವು
ಇಲ್ಲಿನ ನಾಗಾವಿಯು (ಕಲಿಕೆವಿಡು) ವಿಶ್ವವಿದ್ಯಾಲಯ 10 ರಿಂದ 13 ನೇ ಶತಮಾನ ದವರಿಗೂ ಅಸ್ತಿತ್ವದಲ್ಲಿತ್ತು, ಮತ್ತು ಈ ವಿಶ್ವ ವಿದ್ಯಾಲಯ 10 ನೇ ಶತಮಾನದಲ್ಲಿ ಬದಾಮಿಯ ಚಾಲುಕ್ಯರ ಅಂಶದ ರಾಜ್ಯ ಮೊದಲನೆಯ ಸೋಮೇಶ್ವರ ಮಂತ್ರಿ ಸ್ಥಾಪಿಸಿದರು, ನಾಗಾವಿ ಕಲಿಕೆವಿಡು ವಿಶ್ವ ವಿದ್ಯಾಲಯದಲ್ಲಿ ಸುಮಾರು 400 ನೂರಕ್ಕಿಂತ ಹೆಚ್ಚು ಜನ ವೇದ ಶಾಸ್ತ್ರ ಮತ್ತು ಉಪನಿಷತ್ ಕುರಿತು ಇಲ್ಲಿ ಅಧ್ಯಯನ ನಡೆಯುತ್ತಿತ್ತು ಇದರ ಜೊತೆಗೆ ಆಗಿನ ಕಾಲದ ಎಲ್ಲಾ ಹಂತದ ಕಲಿಕೆಯೂ ಈ ನಾಗಾವಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿತ್ತು ಮತ್ತು ಎಲ್ಲಾ ಕಲಿಕಾ ವಿಧ್ಯಾರ್ಥಿಗಳಿಗೆ ದಾಸೋಹದ ವ್ಯವಸ್ಥೆಯಿತ್ತು ಹಾಗೂ ಇಲ್ಲಿನ ಅನೇಕ ವಿಶೇಷಗಳು ಆಕರ್ಷಣೆ ಗಳಾಗಿವೆ 60 ಕಂಬದ ದೇವಾಲಯ, ಪಾಳು ಬಿದ್ದ ನಾಗಾವಿಯ ಊರಿನ ಅಗಸಿ, ಬಾಗಿಲು ಒಳಗಿರುವ ಬಾವಿ ಕಟ್ಟಡಗಳ ಅವಶೇಷ ಮುಂದಿನ ಬಾವಿ ಈಗಿರುವ ದೇವಿಯ ಮಂದಿರ ಮುಂದಿನ 2 ಬಾವಿಗಳಿಂದ ಗರ್ಭಗುಡಿ ಮತ್ತು ಸುತ್ತಮುತ್ತಲಿನ ಚಿಕ್ಕ ಕಾಲುವೆಯಲ್ಲಿ ಬೇಸಿಗೆ ಸೇರಿ ಸದಾ ಕಾಲ. ಒಂದೇ ಸಮನಾಗಿ ಹರಿಯುವ ನೀರು ಸಾಮಾನ್ಯ ವೇನಲ ಇದರಿಂದ ಭಕ್ತರ ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳು ನಿವಾರಣೆ ಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ ಇದಕ್ಕೆ ಸಂಬಂಧಿಸಿದಂತೆ ಸರ್ಕಾರ
ಕ್ಷೇತ್ರದ ಶಾಸಕ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ ಅಜಯಸಿಂಗ್ ಹಾಗೂ ಜಿಲ್ಲೆಯ ನಮ್ಮ ಭಾಗದ ಜನಪ್ರತಿನಿಧಿಗಳು, ಬುದ್ಧಿ ಜೀವಿಗಳು, ಸಾಹಿತ್ಯಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಂಡು ಕಲಬುರ್ಗಿ ವಿಶ್ವ ವಿದ್ಯಾಲಯಕ್ಕೆ ನಾಗಾವಿ ವಿವಿ ಎಂದು ನಾಮಕರಣ ಮಾಡಲು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!