Oplus_131072

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಪ್ರಯತ್ನದಿಂದ ಚಿತ್ತಾಪುರ-ಮಾಲಗತ್ತಿ ಹಿರೊಡೇಶ್ವರ ದೇವಸ್ಥಾನಕ್ಕೆ ಸಾರಿಗೆ ಬಸ್ ಆರಂಭ: ಚನ್ನಬಸವ ಶರಣರು 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಮತಕ್ಷೇತ್ರದ ಮಾಲಗತ್ತಿ ಗ್ರಾಮದ ಹಿರೊಡೇಶ್ವರ ದೇವಸ್ಥಾನಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು ಆದರೆ ಈಚೇಗೆ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಭೇಟಿ ನೀಡಿದಾಗ ಬಸ್ಸಿನ ಸೌಕರ್ಯ ಒದಗಿಸುವ ವಿಷಯ ಪ್ರಸ್ತಾಪಿಸಲಾಗಿತ್ತು, ಇದನ್ನು ಗಂಭೀರವಾಗಿ ಪರಿಗಣಿಸಿದ ಕಮಕನೂರ ಅವರು ಕೆಲವೇ ದಿನಗಳಲ್ಲಿ ದೇವಸ್ಥಾನಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ ಇದರಿಂದ ಅಸಂಖ್ಯಾತ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ಪೂಜ್ಯ ಚನ್ನಬಸವ ಶರಣರು ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಸಾರಿಗೆ ಬಸ್ ಒದಗಿಸುವಲ್ಲಿ ಪ್ರಯತ್ನ ಮಾಡಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಐಸಿ ಹೊಸಮನಿ ಅವರಿಗೆ ದೇವಸ್ಥಾನದ ಪರವಾಗಿ ಕೃತಜ್ಞತೆಗಳು ಸಲ್ಲಿಸಿದರು.

ಬೆಳಗ್ಗೆ 11 ಗಂಟೆಯಿಂದ ಚಿತ್ತಾಪುರದಿಂದ ಬಸ್ ಹೊರಡುವುದು, 11.30ಕ್ಕೆ ಮಾಲಗತ್ತಿಗೆ ಬಸ್ ಬರುವುದು 11.45 ಕ್ಕೆ ದೇವಸ್ಥಾನ ತಲುಪುವುದು. 12 ಗಂಟೆಗೆ ದೇವಸ್ಥಾನದಿಂದ ಪುನಃ ಚಿತ್ತಾಪುರಕ್ಕೆ ಬಸ್ ಮರಳುವುದು ಸಮಸ್ತ ಮಾಲಗತ್ತಿ ಗ್ರಾಮಸ್ಥರು ಭಕ್ತಾದಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಕ್ತಾರ ಈಶ್ವರ ಮುಗುಳನಾಗಾಂವ ತಿಳಿಸಿದ್ದಾರೆ.

ಶುಕ್ರವಾರ ದೇವಸ್ಥಾನಕ್ಕೆ ಆಗಮಿಸಿದ ಸಾರಿಗೆ ಬಸ್ ಗೆ ಪೂಜ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನಿಸಿ ಆಶೀರ್ವದಿಸಿರು.

ಈ ಸಂದರ್ಭದಲ್ಲಿ ಗುಂಡು ಪೂಜಾರಿ, ಮಲ್ಲಪ್ಪ ತಳವಾರ್, ರವಿ ಯರಗೋಳ, ಶಿವಪ್ಪ ಬಾಲಕ್, ಸಚಿನ್ ಕೊಲಕುಂದಿ, ವಿಜಯಲಕ್ಷ್ಮಿ ಮುಗುಳನಾಗಾಂವ, ಮಲ್ಲಪ್ಪ ಬಿ ಯರಗೋಳ, ಈಶ್ವರ್ ಮುಗುಳನಾಗಾಂವ ಸೇರಿದಂತೆ ಅನೇಕ ಭಕ್ತರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!