ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಚಿತ್ತಾಪುರ ಬಂಜಾರ ಸಮಾಜ ಹಾಗೂ ನವರಾತ್ರಿ ಉತ್ಸವ ಸಮಿತಿಯಿಂದ ಗೌರವ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ 25 ನೇ ವರ್ಷದ ನವರಾತ್ರಿ ಉತ್ಸವ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಂಜಾರ ಸಮಾಜ ಹಾಗೂ ನವರಾತ್ರಿ ಉತ್ಸವ ಸಮಿತಿಯ ಮುಖಂಡರು ಬೆಂಗಳೂರಿನ ಸರ್ಕಾರಿ ವಸತಿ ಗೃಹದಲ್ಲಿ ಶನಿವಾರ ಭೇಟಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವರು, ಕೆಲಸದ ಒತ್ತಡದಿಂದಾಗಿ ಕಾರ್ಯಕ್ರಮಕ್ಕೆ ಬರಲು ಆಗಿಲ್ಲ, ಹೀಗಾಗಿ ಯಾರೂ ಅನ್ಯತಾ ಭಾವಿಸಬೇಡಿ ಯಾವತ್ತೂ ಯಾವುದೇ ಕಾಲದಲ್ಲೂ ನಾನು ಬಂಜಾರ ಸಮಾಜದ ಪರವಾಗಿ ಇದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಗೌರವಾಧ್ಯಕ್ಷ ಗೋಪಾಲ ರಾಠೋಡ, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ವಿನೋದ್ ಪವಾರ, ಪ್ರಧಾನ ಕಾರ್ಯದರ್ಶಿ ಚಂದರ್ ಚವ್ಹಾಣ, ಹಿರಿಯ ಮುಖಂಡ ಚಂದು ಜಾಧವ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಡಿ ಚವ್ಹಾಣ, ರವಿ ಜಾಧವ, ದೇವಿದಾಸ್ ಚವ್ಹಾಣ, ಪ್ರವೀಣ್ ಪವಾರ, ರಾಕೇಶ್ ಪವಾರ ಸೇರಿದಂತೆ ಇತರರು ಇದ್ದರು.

