Oplus_0

ಸಂಕನೂರ ಗ್ರಾಮದಲ್ಲಿ ನಾಳೆ ಶ್ರೀ ಆಂಜನೇಯ ದೇವಸ್ಥಾನ, ಕಳಸಾರೋಹಣ ಮತ್ತು ಮೂರ್ತಿಪ್ರಾಣ ಪ್ರತಿಷ್ಠಾನೆಯ ಕಾರ್ಯಕ್ರಮ: ಹಣಮಂತ ಸಂಕನೂರ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದಲ್ಲಿ ನೂತನವಾಗಿ ನಿಮಾರ್ಣಗೊಂಡ ಶ್ರೀ ಆಂಜನೇಯ ದೇವಸ್ಥಾನ, ಕಳಸಾರೋಹಣ ಮತ್ತು ಮೂರ್ತಿಪ್ರಾಣ ಪ್ರತಿಷ್ಠಾನೆಯ ಕಾರ್ಯಕ್ರಮ ನಾಳೆ ನಡೆಯಲಿದೆ ಎಂದು ಗ್ರಾಮದ ಮುಖಂಡ ಹಣಮಂತ ಸಂಕನೂರ ತಿಳಿಸಿದ್ದಾರೆ.

ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯಾ ಶಿವಾಚಾರ್ಯಭಾಗತ್ಪಾದರು ಶ್ರೀಶೈಲ ಪೀಠ ಶ್ರೀಶೈಲಂ ಅಪ್ಪಣೆಮೇರೆಗೆ ಕ್ರಿಯಾಶೀಲ ಶ್ರೀರತ್ನ ಷ.ಬ್ರ. ಶ್ರೀ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳು ಸುಕ್ಷೇತ್ರ ಪಂಚಗೃಹ ಹಿರೇಮಠ ದಿಗ್ಗಾಂವ – ನಾಗಾವಿ ಶ್ರೀಗಳ ನೇತೃತ್ವದಲ್ಲಿ ಸಂಕನೂರ ಗ್ರಾಮದ ಗುರುಹಿರಿಯರು, ಮಾಲಿಪಾಟೀಲ, ಪೊಲೀಸ್ ಪಾಟೀಲ ಹಾಗೂ ಊರಿನ ಸಮಸ್ತ ಸದ್ಭಕ್ತರ ಸದಿಚ್ಚೆಯಂತೆ ದಿ.14 ರಂದು ನೂತನವಾಗಿ ನಿಮಾರ್ಣಗೊಂಡ ವೀರ ಆಂಜನೆಯ ದೇವಸ್ಥಾನ, ಕಳಸಾರೋಣ ಹಾಗೂ ಮೂರ್ತಿ ಪ್ರಾಣಪ್ರತಿಷ್ಠಾಪನೆ ಬ್ರಹ್ಮ ಮೂಹರ್ತದಲ್ಲಿ ಶ್ರೀ ವೇ. ಪಂ. ಸೋಮಶೇಖರ ಶಾಸ್ತ್ರೀಗಳು ತೆಲ್ಲೂರ ಸೇಡಂ ಇವರ ವೈಧಿಕತ್ವದಲ್ಲಿ ವಿಧಿವಿಧಾನ ಸಂಸ್ಕಾರ ಪೂಜಾ ಆರಂಭಗೊಂಡು ಮುಂಜಾನೆ 8-30ಕ್ಕೆ ಮಹಾಮಂಗಲಗೊಳ್ಳುವುದು ನಂತರ ಬೆಳಗ್ಗೆ 10-30ಕ್ಕೆ ಶ್ರೀಶೈಲ ಜಗದ್ಗುರು ಸನ್ನಿದಿಯವರ ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ಶ್ರೀ ವೀರಾಂಜನೆಯ ದೇವಸ್ಥಾನದಿಂದ ಪುರಪ್ರವೇಶವಾಗಿ ಶ್ರೀ ಸಂಗಮೇಶ್ವರ ದೇವಸ್ಥಾನದವರೆಗೆ ಜರಗುವುದು. ನಂತರ ಬೆಳಗ್ಗೆ 11-30ಕ್ಕೆ ಜಗದ್ಗುರು ಸನ್ನದಿಯವರ ಪರುಷಹಸ್ತದಿಂದ ಮಂತ್ರ ಅಕ್ಷತೆ ಯೊಂದಿಗೆ ಮೂರ್ತಿ ಪ್ರಾಣಪ್ರತಿಷ್ಠಾನ ಹಾಗೂ ಧಾರ್ಮಿಕ ಕಾರ್ಯಕ್ರಮ ಜರಗುತ್ತದೆ. ನಂತರ ಸಂಕನೂರ ಗ್ರಾಮಸ್ಥರಿಂದ ಶ್ರೀಶೈಲ ಜಗದ್ಗುರು ಸನ್ನಿದಿಯವರಿಗೆ ನಾಣ್ಯಗಳಿಂದ ತುಲಾಬಾರ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಂಕನೂರ ಗ್ರಾಮದ, ಪರಗ್ರಾಮಗಳ ಸರ್ವಸದ್ದಕ್ತರು ಆಗಮಿಸಿ ಆರಾಧಿಸಿ, ಆನಂದಿಸಿ, ಶ್ರೀಶೈಲ ಜಗದ್ಗುರುಗಳ ಮತ್ತು ದೇವರ ಕೃಪಾಶೀರ್ವಾದ ಪಡೆದು ಪುನಿತರಾಗಬೇಕು ಎಂದು ಕೋರಿದ್ದಾರೆ. ನಂತರ ಸರ್ವ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!