ಸೆ.11 ರಂದು ಶಹಾಬಾದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಬೊಮ್ಮನಳ್ಳಿಕರ್

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ವತಿಯಿಂದ 2026-27 ನೇ ಸಾಲಿನ ಶಹಾಬಾದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.11 ರಂದು ನಗರದ ಬಿವ್ಹಿಎಂ ಶಾಲಾ ಮೈದಾನದಲ್ಲಿ ಬೆಳಿಗ್ಗೆ 10.30 ಕ್ಕೆ ಆಯೋಜಿಸಲಾಗಿದೆ ಎಂದು ತಾಲೂಕು ಕ್ರೀಡಾಂಗಣ ವ್ಯವಸ್ಥಾಪಕ ಮರಿಯಪ್ಪ ಬೊಮ್ಮನಳ್ಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸೆ.11 ರಂದು ಗುಂಪು ಆಟಗಳಾದ ಕಬ್ಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್, ಫುಟ್ಬಾಲ್ ಹಾಗೂ ಅಥ್ಲೇಟಿಕ್ಸ್ ಸ್ಪರ್ಧೆಗಳು ನಡೆಯಲಿವೆ, ಈ ಒಂದು ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆನ್ ಲೈನ್ http//dasaracmcup.in ಮೂಲಕ ಕಡ್ಡಾಯವಾಗಿ ನೊಂದಾಯಿಸಿಬೇಕು ಹಾಗೂ ಶಹಾಬಾದ ತಾಲೂಕು ವ್ಯಾಪ್ತಿಗೆ ಒಳಪಟ್ಟಿರಬೇಕು, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ತರಬೇಕು. ಆನ್‌ಲೈನ್‌ನಲ್ಲಿ ನೊಂದಣಿ ಆಗದ ಕ್ರೀಡಾ ಪಟುಗಳಿಗೆ ಭಾಗವಹಸಲು ಅವಕಾಶವಿರುವದಿಲ್ಲ, ಆನ್‌ಲೈನ್ ಜೆರಾಕ್ಸ್ ಪ್ರತಿಯನ್ನು ಆಯೋಜಕರಿಗೆ ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.

ಕ್ರೀಡಾಕೂಟಗಳಲ್ಲಿ ಭಾಗವಹಿಸುವವರು ತಮ್ಮ ತಂಡದ ಪಟ್ಟಿ ಮಾಡಿ ಸಂಘಟಕರಿಗೆ ನೀಡಬೇಕು, ರಕ್ಷಣಾ ಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಆಗಿರಬಾರದು, ಒಂದು ತಾಲೂಕಿನಲ್ಲಿ ಸ್ಪರ್ಧಿಸಿದರೆ ಮತ್ತೊಮ್ಮೆ ಅವಕಾಶ ದೊರೆಯುವುದಿಲ್ಲ, ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮತ್ತು ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ, ಮಹಿಳೆಯರು ಹಾಗೂ ಪುರುಷರು ಭಾಗವಹಿಸಬಹುದು, ವಯಸ್ಸಿನ ಮಿತಿ ಇರುವುದಿಲ್ಲ, ಅಲ್ಲದೇ ದಿನಭತ್ಯೆ ಹಾಗೂ ಪ್ರಯಾಣ ಭತ್ಯೆ ಇರುವುದಿಲ್ಲ, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಕ್ರೀಡಾಂಗಣ ವ್ಯವಸ್ಥಾಪಕ ಮರಿಯಪ್ಪ ಬೊಮ್ಮನಳ್ಳಿಕರ 9945230160, ದೈಹಿಕ ಶಿಕ್ಷಕ ರತನರಾಜ್ ಕೋಬಾಳ 8095007451 ಸಂಪರ್ಕಿಸಲು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!