Oplus_0

ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ಆಯ್ಕೆ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ನಗರದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ಹಲವು ಗುಂಪು ಮತ್ತು ಮೇಲಾಟಗಳಲ್ಲಿ ಗೆಲ್ಲುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.

ಥ್ರೋ ಬಾಲ್ – ಬಾಲಕರ ಮತ್ತು ಬಾಲಕಿಯರ ವಿಭಾಗ (ಪ್ರಥಮ ), 200ಮೀ ಓಟ – ರೋಹಿತ್ (ಪ್ರಥಮ ) ಹರ್ಷಿತ (ದ್ವಿತೀಯ), 100ಮೀ ಓಟ – ಹರ್ಷಿತ(ದ್ವಿತೀಯ), 1500ಮೀ ಓಟ -ರೋಹಿತ್ (ಪ್ರಥಮ), 4*100ಮೀ ರಿಲೇ ಬಾಲಕರ (ಪ್ರಥಮ), ಉದ್ದ ಜಿಗಿತ – ವೆಂಕಟೇಶ್ (ಪ್ರಥಮ), ತ್ರಿವಿಧ ಜಿಗಿತ – ವೆಂಕಟೇಶ್ (ದ್ವಿತೀಯ). 100ಮೀ – ಪ್ರಕೃತಿ (ತೃತೀಯ) ಸ್ಥಾನ ಪಡೆದಿರುತ್ತಾರೆ.

ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಸಿದ್ದಲಿಂಗ ಸ್ವಾಮಿಗಳು, ಕಾರ್ಯದರ್ಶಿ ಈಶ್ವರ್ ಜಿ ಬಾಳಿ ಸೇರಿದಂತೆ ಸಂಸ್ಥೆಯ ಸದಸ್ಯರು, ಮುಖ್ಯ ಗುರುಗಳು, ದೈಹಿಕ ಶಿಕ್ಷಕರು ಮತ್ತು ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!