Oplus_0

ಶಹಾಪುರದಲ್ಲಿ ಯೋಗ ತರಬೇತಿ ಶಿಬಿರದ ಸಮಾರೋಪ 

ಜೀವನದಲ್ಲಿ ನಿತ್ಯ ಯೋಗಾಭ್ಯಾಸ ಮೈಗೂಡಿಸಿಕೊಳ್ಳುವುದು ಅವಶ್ಯಕ: ಏಕದಂಡಗಿ ಶ್ರೀ 

ನಾಗಾವಿ ಎಕ್ಸಪ್ರೆಸ್

ಶಹಾಪುರ: ಒತ್ತಡದ ಬದುಕಿನಿಂದ ಮುಕ್ತರಾಗಬೇಕಾದರೆ  ಜೀವನದಲ್ಲಿ ನಿತ್ಯ ಯೋಗಾಭ್ಯಾಸ ಮೈಗೂಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಏಕದಂಡಗಿ ಮಠರ ಶ್ರೀ ಅಜೇಂದ್ರ ಮಹಾಸ್ವಾಮಿಗಳು ಹೇಳಿದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯ ಆವರಣದಲ್ಲಿ ನಡೆದ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಸೇಡಂ, ಪತಂಜಲಿ ಯೋಗ ಕೇಂದ್ರ ಶಹಾಪುರ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ಇವರ ಜಂಟಿ ಸಹಯೋಗದಲ್ಲಿ ನಡೆದ ಏಳು ದಿನಗಳ ಸಪ್ತ ಯೋಗ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂದಿನ ದೈನಂದಿನ ಒತ್ತಡದ ಬದುಕಿಗೆ ಯೋಗದ ವಿಧಾನ ಉತ್ತಮ ಚಿಕಿತ್ಸೆ. ಇದರ ಅನುಪಾಲನೆಯಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ನುಡಿದರು.

ಕಸಾಪ ತಾಲೂಕು ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗಕ್ಕೆ ಪುರಾತನ ಇತಿಹಾಸವಿದ್ದು, ಕಾರಣ ಎಲ್ಲರೂ ಯೋಗಾಭ್ಯಾಸ ಮಾಡಬೇಕು, ಯೋಗದಿಂದ ರೋಗ ಮುಕ್ತಿಯಾಗಲಿದೆ, ಅಲ್ಲದೇ ಮನಸ್ಸಿನ ಏಕಾಗ್ರತೆ, ಶಾಂತಿ ಮತ್ತು ನೆಮ್ಮದಿ ಸಿಗಲಿದೆ ಎಂದರು. ಏಳು ದಿನದ ಯೋಗ ತರಬೇತಿ ಶಿಬಿರ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಏಳು ದಿನಗಳ ಸಪ್ತಯೋಗದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಯೋಗ ಶಿಕ್ಷಕರಾದ ನರಸಿಂಹ. ಕೆ.ವೈದ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ವೇದಿಕೆಯಲ್ಲಿ ಸಿದ್ದಲಿಂಗಣ್ಣ ಆನೆಗುಂದಿ, ಹೊನ್ನರೆಡ್ಡಿ, ಡಾ. ಬಸವರಾಜ ಹಾದಿಮನಿ ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಗೂ ಯೋಗಾಸಕ್ತರು ತರಬೇತಿಯಲ್ಲಿ ಭಾಗವಹಿಸಿದ್ದರು.

ಮಹೇಶ್. ಪತ್ತಾರ್ ರವರು ಪ್ರಾರ್ಥಸಿದರು, ವಿರೇಶ್ ಕೊಳ್ಳಿ ಸ್ವಾಗತಿಸಿದರು, ಸುರೇಶ್ ಅರುಣಿ ನಿರೂಪಿಸಿ ವಂದಿಸಿದರು.

 

Spread the love

Leave a Reply

Your email address will not be published. Required fields are marked *

error: Content is protected !!