ಶ್ರೀ ಸಿಮೆಂಟ್ ಕೋಡ್ಲಾ ಘಟಕದ ಸಿಬ್ಬಂದಿಗಳಿಂದ ಬೃಹತ್ ಸ್ವಚ್ಛತಾ ಅಭಿಯಾನ | ನೌಕರರಲ್ಲಿ ಸ್ವಯಂಸೇವಾ ಮನೋಭಾವ ಹಾಗೂ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಂಸ್ಕೃತಿಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶ: ರಾಜೇಶ್ ಕುಮಾರ್

ನಾಗಾವಿ ಎಕ್ಸಪ್ರೆಸ್

ಸೇಡಂ: ಭಾರತದ ಪ್ರಮುಖ ಸಿಮೆಂಟ್ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾದ ಶ್ರೀ ಸಿಮೆಂಟ್ ಲಿಮಿಟೆಡ್ ತನ್ನ ಕೋಡ್ಲಾ ಘಟಕದಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ 3 ರಿಂದ 5 ರವರೆಗೆ ‘ಬೃಹತ್ ಸ್ವಚ್ಛತಾ ಅಭಿಯಾನವನ್ನು  ಪ್ರಾರಂಭಿಸಿದೆ ಕೆಲಸದ ಸ್ಥಳವನ್ನು ಹೆಚ್ಚು ಸ್ವಚ್ಛವಾಗಿ, ಸುರಕ್ಷತವಾಗಿ ಮತ್ತು ವ್ಯವಸ್ಥಿತವಾಗಿರಿಸುವ ಜೊತೆಗೆ ನೌಕರರಲ್ಲಿ ಸ್ವಯಂಸೇವಾ ಮನೋಭಾವ ಹಾಗೂ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಂಸ್ಕೃತಿಯನ್ನು ಉತ್ತೇಜಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು  ಶ್ರೀ ಸಿಮೆಂಟ್‌ನ ಕೊಡಲಾ ಘಟಕದ ಮುಖ್ಯಸ್ಥ ರಾಜೇಶ್ ಕುಮಾರ್ ವಿಜಯ್ ಹೇಳಿದರು.

ಈ ಅಭಿಯಾನವು ವಿವಿಧ ವಿಭಾಗಗಳ ನೌಕರರನ್ನು ಒಗ್ಗೂಡಿಸಿ ಕೆಲಸದ ಸ್ಥಳದ ನಿರ್ವಹಣೆಯಲ್ಲಿ ಸಾಮೂಹಿಕ ಜವಾಬ್ದಾರಿ ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತದೆ. ಇದು ಕೇವಲ ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸುವುದಲ್ಲದೆ, ನೌಕರರಿಗೆ ನಾಯಕತ್ವ ಸಮನ್ವಯ ಮತ್ತು ಸಹಯೋಗದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಪ್ರತಿ ವಾರ ಸುಮಾರು 55-60 ನೌಕರರು ಈ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುತ್ತಿದ್ದು ಒಟ್ಟಾರೆಯಾಗಿ 120 ಮಾನವ ಗಂಟೆಗಳ ಸೇವೆಯನ್ನು ಒದಗಿಸುತ್ತಿದ್ದಾರೆ. ಪ್ರತಿ ಉದ್ಯೋಗಿಯು ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ಮಾಡುತ್ತಿದ್ದು ಇದು ಸಂಸ್ಥೆಯಲ್ಲಿ ಸಕಾರಾತ್ಮಕ ವಾತಾವರಣ ಮತ್ತು ಸಾಮೂಹಿಕ ಹೊಣೆಗಾರಿಕೆಯನ್ನು ಮೂಡಿಸುತ್ತಿದೆ ಎಂದರು.

ಈ ಅಭಿಯಾನವು ಕೇವಲ ಸ್ವಚ್ಛತೆಯನ್ನು ಕಾಪಾಡುವುದಕ್ಕೆ ಸೀಮಿತವಾಗಿಲ್ಲ, ಇದು ಉದ್ಯೋಗಿಗಳು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಮ್ಮೆ ಪಡುವಂತೆ ಮಾಡುವುದು, ತಮ್ಮ ದೈನಂದಿನ ಕೆಲಸದ ಆಚೆಗೂ ಪರಸ್ಪರ ಸಹಕರಿಸುವುದು ಮತ್ತು ಜವಾಬ್ದಾರಿಯುತ ಸಂಸ್ಕೃತಿಗೆ ಕೊಡುಗೆ ನೀಡುವುದಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

ಈ ಬೃಹತ್ ಸ್ವಚ್ಛತಾ ಅಭಿಯಾನವು ಸುಸ್ಥಿರತೆ, ಉದ್ಯೋಗಿಗಳ ಯೋಗಕ್ಷೇಮ ಮತ್ತು ಸಾಂಸ್ಥಿಕ ಶ್ರೇಷ್ಠತೆಯ ಬಗ್ಗೆ ಶ್ರೀ ಸಿಮೆಂಟ್ ಹೊಂದಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಮಾನಗೌಡ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

“ಶ್ರೀ ಸಿಮೆಂಟ್ ಲಿಮಿಟೆಡ್ (SCL) ಭಾರತದ ಆಗ್ರಗಣ್ಯ ಸಿಮೆಂಟ್ ಸಮೂಹಗಳಲ್ಲಿ ಒಂದಾಗಿದ್ದು ಪರಿಸರ ಸ್ನೇಹಿ ಕ್ರಮಗಳು, ನವೀನ ಅಭ್ಯಾಸಗಳು ಮತ್ತು ವೆಚ್ಚ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದೆ. ಉತ್ತಮ ಕಾರ್ಪೊರೇಟ್ ಆಡಳಿತ ಮತ್ತು ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾದ ಈ ಸಂಸ್ಥೆಯು ಭಾರತ ಮತ್ತು ಯುಎಇನಲ್ಲಿ ಸುಧಾರಿತ ಉತ್ಪಾದನಾ ಘಟಕಗಳನ್ನು ಹೊಂದಿದೆ”.- ರಾಜೇಶ್ ಕುಮಾರ್ ವಿಜಯ್ ಶ್ರೀ ಸಿಮೆಂಟ್‌ನ ಕೋಡ್ಲಾ ಘಟಕದ ಮುಖ್ಯಸ್ಥರು.

Spread the love

Leave a Reply

Your email address will not be published. Required fields are marked *

error: Content is protected !!