Oplus_0

ಶಹಾಬಾದ ನಗರಕ್ಕೆ ಮೂಲಭೂತ ಸೌಕರ್ಯಗಳು ಒದಗಿಸುವಂತೆ ಆಗ್ರಹಿಸಿ ಜೆಡಿಎಸ್ ಮುಖಂಡರಿಂದ ಪೌರಾಯುಕ್ತರಿಗೆ ಮನವಿ 

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ನಗರಕ್ಕೆ ಶುದ್ದ ನೀರು ಸರಬರಾಜು ಹಾಗೂ ನೀರಿನ ಕರದ ಬಡ್ಡಿ ಮನ್ನಾ ಮಾಡಬೇಕು ಮತ್ತು ಮೂಲಭೂತ ಸೌಕರ್ಯಗಳು ಒದಗಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಪಕ್ಷದ ಮುಖಂಡರು ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಜೆಡಿಎಸ್ ಪಕ್ಷದ ಅಧ್ಯಕ್ಷ ಅಬ್ದುಲ ಘನಿ ಸಾಬೀರ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಪೂರೈಕೆ 24/7 ಎಂದು ಹೇಳುತ್ತಾರೆ, ಆದರೆ ಸರಿಯಾಗಿ 3 ರಿಂದ 4 ಗಂಟೆಗಳ ಕಾಲ ಮಾತ್ರ ಪೂರೈಕೆ ಮಾಡುತ್ತಾರೆ ಹಾಗೂ ನೀರಿನ ಕರದ ಜೊತೆ ಬಡ್ಡಿ ವಿಪರೀತವಾಗಿ ವಿಧಿಸಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ಶುದ್ಧವಾದ ನೀರು ಪೂರೈಕೆ ಮಾಡಬೇಕು, ಹಾಗೂ ಎಲ್ಲಾ ವಾರ್ಡಗಳಿಗೆ ತಾರಾತಮ್ಯ ಮಾಡದೆ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

‘ಬಿ’ ಖಾತೆಗಳು ಸರ್ಕಾರದ ಆದೇಶದ ಅನುಸಾರ ನೀಡಬೇಕು, ಇಂದಿರಾ ಕ್ಯಾಂಟಿನ್ ಕಂಪೌಂಡ ಗೋಡೆ ನಿರ್ಮಾಣ ಮಾಡಬೇಕು, ಜೊತೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ವಾರ್ಡ ನಂ 9-10 ರಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ತಡೆ ಹಿಡಿಯಲಾಗಿದೆ, ಸ್ಥಳ ವೀಕ್ಷಣೆ ಮಾಡಬೇಕು ಹಾಗೂ ಪೌರ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಬೇಕು ಮತ್ತು ಪಿ.ಎಫ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ ಪಕ್ಷದ ಅಧ್ಯಕ್ಷ ಅಬ್ದುಲ ಘನಿ ಸಾಬೀರ, ಕಾರ್ಯದರ್ಶಿ ಶ್ರೀಧರ ಕೊಲ್ಲೂರ, ಶೇಖ್ ಮಹೇಬೂಬ, ವಿಶ್ವರಾಜ, ಸಿದ್ದಲಿಂಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಹಾಬಾದ ವರದಿ-ನಾಗರಾಜ್ ದಂಡಾವತಿ

Spread the love

Leave a Reply

Your email address will not be published. Required fields are marked *

error: Content is protected !!