ಮಾಲಗತ್ತಿ ಗ್ರಾಮದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷ ಅಪ್ಪಾರಾವ್ ಪಾಟೀಲ್ ಅವರ ಅಭಿನಂದನಾ ಸಮಾರಂಭ | ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಏಕೈಕ ಪಕ್ಷ ಬಿಜೆಪಿ: ಬೆಣ್ಣೂರಕರ್
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಸಾಮಾನ್ಯ ಕಾರ್ಯಕರ್ತರಿಗೆ ಹಾಗೂ ಯುವಕರಿಗೆ ಅವಕಾಶ ನೀಡಿ ಪಕ್ಷದ ಸ್ಥಾನಮಾನ ನೀಡುವ ಏಕೈಕ ಪಕ್ಷ ಅದು ಭಾರತೀಯ ಜನತಾ ಪಕ್ಷವಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ಬಣ್ಣಿಸಿದರು.
ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಪ್ಪಾರಾವ್ ಮಾಲಿ ಪಾಟೀಲ್ ಇವರ ಅಭಿನಂದನಾ ಹಾಗೂ ಜಿಲ್ಲಾ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ವಿಶ್ವದ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾದ ಬಿಜೆಪಿ, ಪ್ರತಿಯೊಬ್ಬ ಸಕ್ರಿಯ ಹಾಗೂ ಸಾಮಾನ್ಯ ಕಾರ್ಯಕರ್ತನಿಗೆ ಒಂದಲ್ಲೊಂದು ಜವಾಬ್ದಾರಿಯನ್ನು ನೀಡುತ್ತಾ ಬಂದಿದೆ, ಪಕ್ಷ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಪಕ್ಷದ ಸಂಘಟನೆ ಇನ್ನಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಉತ್ತಮ ಅಡಿಪಾಯ ಹಾಕಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಭಾರತೀಯ ಜನತಾ ಪಕ್ಷದ ಜಿಲ್ಲಾ ಪದಾಧಿಕಾರಿಗಳಲ್ಲಿ ಚಿತ್ತಾಪುರ ಮಂಡಲದ ನಾಲ್ಕೈದು ಜನರಿಗೆ ಅವಕಾಶ ಸಿಕ್ಕಿರುವುದು ಸಂತೋಷ ವಿಷಯವಾಗಿದ್ದು, ಬರುವ ದಿನಗಳಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಶರಣು ಜ್ಯೋತಿ ಮಾತಾಡಿ, ಕೇಂದ್ರದ ಮೋದಿ ಸರ್ಕಾರ ಮೂರು ಅವಧಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ, ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯವಾಗಬೇಕಾಗಿದೆ ಎಂದರು.
ಜಿಲ್ಲಾ ವಕ್ತಾರ ಚಂದ್ರಶೇಖರೆಡ್ಡಿ ಪರಸರೆಡ್ಡಿ ಮಾತನಾಡಿ, ವಿಬಿ ಜಿ ರಾಮ ಜಿ ಯೋಜನೆ ಕುರಿತು ವಿಸ್ತೃತವಾಗಿ ಜನಸಾಮಾನ್ಯರಿಗೂ ಮತ್ತು ಕೂಲಿ ಕಾರ್ಮಿಕರಿಗೆ ಗ್ರಾಮೀಣ ಭಾಗದಲ್ಲಿ ತಿಳಿಸಬೇಕಾಗಿದೆ ಎಂದರು.
ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷ ಅಪ್ಪಾರಾವ್ ಮಾಲಿ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಗಿರೀಶ್ ಭಜಂತ್ರಿ ಅವರು ಮಾತನಾಡಿದರು.
ಬಿಜೆಪಿ ಮುಖಂಡರಾದ ಶರಣಪ್ಪ ಹುಂಡೇಕಾರ್, ರಾಜು ಪಾಟೀಲ್, ಶೀತಲ್ ಮಣಿ, ದ್ಯಾವಪ್ಪ ಷಣ್ಮುಖ, ದೇವಪ್ಪ ಕುಲುಕುಂದಿಕರ್, ಬಸವರಾಜ್ ಬಾಲಕ್, ಹರಿಶ್ಚಂದ್ರ ಕಟ್ಟಿ, ನಾಗಯ್ಯ ಸ್ವಾಮಿ ಮಠಪತಿ, ನಿಂಗಪ್ಪ ಮುದುಕಬ್ ಗೊಳ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರಣಪ್ಪ ಸಣಮೋ, ಮಲ್ಲಿಕಾರ್ಜುನ ಕುಲಕುಂದಿ, ಕಾಶೀನಾಥ್ ಸಣಮೋ, ಈಶ್ವರ್ ಯಾದಗಿರಿ, ರಾಜು ತಳವಾರ್ ಸೇರಿದಂತೆ ನೂರಾರು ಜನ ಬಿಜೆಪಿ ಬೆಂಬಲಿಗರು ಮತ್ತು ಮಾಲಗತ್ತಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಕುಮಾರಿ ಭಾಗ್ಯಶ್ರೀ ಹೂಗಾರ್, ಕುಮಾರಿ ದಿವ್ಯ ಇಟಗಿ ಇವರಿಂದ ಭರತನಾಟ್ಯ ನಡೆಯಿತು. ರವಿ ಯರಗೋಳ ಸ್ವಾಗತಿಸಿದರು, ಈಶ್ವರ್ ಮುಗುಳನಾಗಾಂವ ನಿರೂಪಿಸಿದರು, ರಾಜು ಪಾಟೀಲ್ ವಂದಿಸಿದರು. ಇದಕ್ಕೂ ಮುನ್ನ ಬಿಜೆಪಿ ಸರ್ವ ನಾಯಕರುಗಳನ್ನು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಡೊಳ್ಳು- ಹಲಗೆ- ಭಾಜಾ ಬಜಂತ್ರಿಗಳ ತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.

