Oplus_0

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿತ್ತಾಪುರಕ್ಕೆ ಶೇ.87.89 ಫಲಿತಾಂಶ, ಕಲಬುರಗಿ ಜಿಲ್ಲೆಗೆ 2 ನೇ ಸ್ಥಾನ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿತ್ತಾಪುರ ತಾಲೂಕಿಗೆ ಶೇ.40.88 ಫಲಿತಾಂಶ ಬಂದಿತ್ತು, ಆದರೆ ಈ ಬಾರಿ ಫಲಿತಾಂಶದಲ್ಲಿ ಭಾರಿ ಸುಧಾರಣೆ ಕಂಡಿದ್ದು, ಶೇ.87.89 ಫಲಿತಾಂಶ ಪಡೆಯುವ ಮೂಲಕ ಕಲಬುರಗಿ ಜಿಲ್ಲೆಗೆ 2 ನೇ ಸ್ಥಾನ ಪಡೆದಿದೆ.

ಈ ಬಾರಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಪ್ರೌಢ ಶಾಲೆಗಳಲ್ಲಿ ಫಲಿತಾಂಶ ವೃದ್ಧಿಗೊಂಡಿದೆ. ಸರ್ಕಾರಿ: ಪರೀಕ್ಷೆಗೆ ಹಾಜರಾದ 2952 ವಿದ್ಯಾರ್ಥಿಗಳ ಪೈಕಿ 2601 ಉತ್ತೀರ್ಣ, 361 ಅನ್ನುತ್ತೀರ್ಣ, ಶೇ.87.81. ಅನುದಾನಿತ: ಪರೀಕ್ಷೆಗೆ ಹಾಜರಾದ 734 ವಿದ್ಯಾರ್ಥಿಗಳ ಪೈಕಿ 639 ಉತ್ತೀರ್ಣ, 95 ಅನ್ನುತ್ತೀರ್ಣ, ಶೇ.87.6. ಅನುದಾನ ರಹಿತ: ಪರೀಕ್ಷೆಗೆ ಹಾಜರಾದ 1401 ವಿದ್ಯಾರ್ಥಿಗಳ ಪೈಕಿ 1240 ಉತ್ತೀರ್ಣ, 161 ಅನ್ನುತ್ತೀರ್ಣ, ಶೇ.88.51.

ಒಟ್ಟಾರೆ ಪರೀಕ್ಷೆಗೆ ಹಾಜರಾದ 5097 ವಿದ್ಯಾರ್ಥಿಗಳ ಪೈಕಿ 4480 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, 617 ವಿದ್ಯಾರ್ಥಿಗಳು ಅನ್ನುತ್ತೀರ್ಣರಾಗಿದ್ದಾರೆ, ಶೇ.87.89 ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ತಿಳಿಸಿದ್ದಾರೆ.

ಶೇ.100 ಫಲಿತಾಂಶ ಪಡೆದ ಶಾಲೆಗಳು:

ಸರ್ಕಾರಿ ಆದರ್ಶ ವಿದ್ಯಾಲಯ ಚಿತ್ತಾಪುರ, ಆಲ್ ಅಮೀನ್ ಉರ್ದು ಪ್ರೌಢ ಶಾಲೆ ವಾಡಿ, ಬೆಥನಿ ಪ್ರೌಢ ಶಾಲೆ ಚಿತ್ತಾಪುರ, ಡಾ.ಬಿ.ಆರ್.ಅಂಬೇಡ್ಕರ್ ಎಸ್.ಸಿ ವಾಡಿ ಟೌನ್, ಸರ್ಕಾರಿ ಪ್ರೌಢ ಶಾಲೆ ಕಂದಗೋಳ, ಸರ್ಕಾರಿ ಪ್ರೌಢ ಶಾಲೆ ದಂಡೋತಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಬ್ಬಾಳ, ಸರ್ಕಾರಿ ಉರ್ದು ಪ್ರೌಢ ಶಾಲೆ ನಾಲವಾರ, ಸರ್ಕಾರಿ ಪ್ರೌಢ ಶಾಲೆ ಚಿಂಚೋಳಿ ಎಚ್, ಸರ್ಕಾರಿ ಪ್ರೌಢ ಶಾಲೆ ಶೆಳ್ಳಗಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಗುಂಡಗುರ್ತಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಾಡಿ ಟೌನ್, ಶ್ರೀ ಶೇಷಗಿರಿರಾವ್ ಪ್ರೌಢ ಶಾಲೆ ಚಿತ್ತಾಪುರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಿತ್ತಾಪುರ ಟೌನ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್.ಸಿ ವಾಡಿ ಟೌನ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆಬ್ಬಾಳ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್ಸಿ ಚಿತ್ತಾಪುರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್ಸಿ ಗುಂಡಗುರ್ತಿ, ಎನ್ಇಎಸ್ ಪ್ರೌಢ ಶಾಲೆ ಚಿತ್ತಾಪುರ, ಶಶಿಕಲಾ ವಿದ್ಯಾಮಂದಿರ ಕಾಳಗಿ, ಇಂದಿರಾಗಾಂಧಿ ವಸತಿ ಶಾಲೆ ಎಸ್ಸಿ ನಾಲವಾರ, ಸರ್ಕಾರಿ ಪ್ರೌಢ ಶಾಲೆ ಕೊಂಚೂರ, ವಿದ್ಯಾನಿಕೇತನ ಪ್ರೌಢ ಶಾಲೆ ಚಿತ್ತಾಪುರ.

ಹೆಚ್ಚು ಅಂಕ ಪಡೆದ ಟಾಪ್ 10 ವಿದ್ಯಾರ್ಥಿಗಳು: 

ಹೆಬ್ಬಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶ್ವೇತಾ 619, ಚಿತ್ತಾಪುರ ವಿದ್ಯಾನಿಕೇತನ ಪ್ರೌಢ ಶಾಲೆಯ ವಿದ್ಯಾರ್ಥಿ ಸುಮಂತ್ 614, ಗುಂಡಗುರ್ತಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿ ನಿವೇದಿತಾ ನಂದಾ 612, ಹೆಬ್ಬಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಕ್ಷತಾ 612, ಚಿತ್ತಾಪುರ ವಿದ್ಯಾನಿಕೇತನ ಪ್ರೌಢ ಶಾಲೆಯ ವಿದ್ಯಾರ್ಥಿ ಚೈತನ್ಯ 610, ಶುಭಂ 609, ಖುಷಿ 608, ಎಂಡಿ ಅಮೀನ್ ಪಟೇಲ್ 608, ಹೆಬ್ಬಾಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶ್ರೀಲಕ್ಷ್ಮೀ 608, ಹೊನಗುಂಟಾ ರೋಡ್ ಮಿನಿರೋಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಮದನ್ 607.

ನಮ್ಮ ತಾಲೂಕು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಕಳೆದ ವರ್ಷದ ಫಲಿತಾಂಶ ಗಮನಿಸಿದಾಗ ಫಲಿತಾಂಶ ಶೇ.47 ಪ್ರತಿಶತ ಏರಿಕೆಯಾಗಿದೆ. ಅಲ್ಲದೇ ಈ ವರ್ಷ ಮಿಷನ್-40+ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ 4 ಮಾದರಿ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ಒಳಗೊಂಡ ಅರಿವೆ ಗುರು ಎಂಬ ಪುಸ್ತಕ ಫಲಿತಾಂಶ ಸುಧಾರಣೆಗೆ ಬಹಳಷ್ಟು ಸಹಾಯವಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಫಲಿತಾಂಶ ಕಡಿಮೆ ಬಂದ ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಪರಿಣಾಮಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಜನವರಿ 2025 ರ ಮಾಹೆಯಿಂದ ಶನಿವಾರ ಹಾಗೂ ಭಾನುವಾರ ಸಹ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು, ಮಕ್ಕಳ ಮನೆ ಭೇಟಿ, ವೇಕ್ ಅಪ್ ಕಾಲ್, ಬರವಣಿಗೆಗೆ ಹೆಚ್ಚು ಒತ್ತು ನೀಡಲಾಗಿದೆ. ಡಯಟ್ ತಂಡ ದತ್ತುಶಾಲೆ ಪಡೆದು ನಿರಂತರ ಅನುಪಾಲನೆ ಮಾಡಲಾಗಿದೆ. ಶೈಕ್ಷಣಿಕ ವರ್ಷದಿಂದ ಸೇತುಭಂದ ಮಾಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಕಡಿಮೆಗೆ ವಿಶ್ಲೇಷಣೆ ಮಾಡಿ ನಿರಂತರ ಅನುಪಾಲನೆ ಮಾಡಿ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ನಾಗಾವಿ ಎಕ್ಸಪ್ರೆಸ್ ಗೆ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!