Oplus_0

ಚಿತ್ತಾಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ | ಅಂಬೇಡ್ಕರ್‌ ವಿಚಾರಧಾರೆ ಜಗತ್ತಿಗೆ ದಾರಿದೀಪ: ಸುರೇಶ್ ಮೆಂಗನ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರಬುದ್ಧ ಭಾರತ ನಿರ್ಮಾಣವಾಗಲು ಡಾ. ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನವು ನೆರವಾದಂತೆ, ಅವರ ವಿಚಾರಧಾರೆಯು ಜಗತ್ತಿನ ಶೋಷಿತ ಸಮುದಾಯಗಳ ಏಳಿಗೆಯ ದಾರಿದೀಪವಾಗಿದೆ ಎಂದು ದಲಿತ ಹಿರಿಯ ಮುಖಂಡ ಸುರೇಶ್ ಮೆಂಗನ್ ಹೇಳಿದರು.

ಪಟ್ಟಣದ ಬಜಾಜ್ ಮಿನಿ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ) ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಸಂಘರ್ಷ ಸಮಿತಿ ಚಿತ್ತಾಪುರ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಸಮಾಜ ಸುಧಾರಕ, ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಡಿದ ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿಗಳು ಎಂದು ಹೇಳಿದರು.

ಡೆಕ್ಕನ್ ಬಿಇಡಿ ಕಾಲೇಜಿನ ಉಪನ್ಯಾಸಕ ಡಾ.ಅನೀಲಕುಮಾರ ತೆಂಗಳಿ ಮಾತನಾಡಿ, ದಲಿತರು ಮತ್ತು ಶೋಷಿತ ಸಮುದಾಯಗಳಿಗೆ ಸಾಮಾಜಿಕ ಸಮಾನತೆ, ಸಮಾನ ಅವಕಾಶ ಮತ್ತು ಬದುಕುವ ಹಕ್ಕನ್ನು ಕಾನೂನುಬದ್ಧವಾಗಿ ಕಲ್ಪಿಸಿಕೊಟ್ಟ ಅಂಬೇಡ್ಕರ್ ಅವರು ಶ್ರೇಷ್ಠ ಚಿಂತಕರು ಎಂದು ಬಣ್ಣಿಸಿದರು.

ಈಗಿನವರಿಗೆ ಬರವಣಿಗೆಯ ಅಂಬೇಡ್ಕರ್ ಬೇಕಾಗಿಲ್ಲ ಮೆರವಣಿಗೆಯ ಅಂಬೇಡ್ಕರ್ ಬೇಕಾಗಿದ್ದಾರೆ ಹಾಗೂ ಪುಸ್ತಕದ ಅಂಬೇಡ್ಕರ್ ಬೇಕಾಗಿಲ್ಲ ಪುತ್ತಳಿಯ ಅಂಬೇಡ್ಕರ್ ಬೇಕಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂದಿಗೂ ಶೋಷಣೆ ನಿಂತಿಲ್ಲ ಹಾಗೂ ಜಾತಿ ವ್ಯವಸ್ಥೆ ನಾಶವಾಗಿಲ್ಲ, ಸಂವಿಧಾನದ ಅಡಿಯಲ್ಲಿ ಸಮಾನತೆ ಮತ್ತು ಅವಕಾಶ ನೀಡಿದ ಮಹಾಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಅಣದೂರ ಭಂತೆ ದಮಾನಂದ ಮಹಾತೆರು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಡಿಎಸ್ಎಸ್ ಮುಖಂಡ ಜಗದೀಶ್ ಸಾಗರ ಮಾತನಾಡಿದರು.

ಎಎಪಿ ಮುಖಂಡರಾದ ದರ್ಶನ ಜೈನ, ಸಂಚಿತ್ ಸಹಾನಿ, ಅರ್ಜುನ್ ಹಲಗಿಗೌಡ, ಉಷಾ ಬೆಂಗಳೂರು, ರಾಘವೇಂದ್ರ ಚಿಂಚನಸೂರ, ಅಶೋಕ ಮಲ್ಕಪಗೋಳ್, ಕೀರಣ್ ರಾಠೋಡ, ಎಂ.ಎಂ.ಜಾಗೀರದಾರ್, ಮೀರ್ ಮೋಶಿನ್, ಬಂಡುಪಟ ನಾಯಕ, ಶಂಕರ್ ಜಾನಾ, ನ್ಯಾಯವಾದಿ ಎಸ್.ಪಿ.ಸಾತನೂರಕರ್, ಪರಮೇಶ್ವರ ಝಳಕಿ, ಮಲ್ಲಿಕಾರ್ಜುನ ಪೂಜಾರಿ, ಪರಮೇಶ್ವರ್ ಮತ್ತಿಮೂಡ್, ಲಿಂಗಣ್ಣಗೌಡ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಹಡಪದ ಸೂಗೂರ, ಬಸವರಾಜ ಸೂಗೂರ, ರಾಮಣ್ಣ ಡೋಣಗಾಂವ, ಗುಂಡಪ್ಪ ದಿಗ್ಗಾಂವ, ಜೈ ಭೀಮ್ ಭಾಗೋಡಿ, ಈರಣ್ಣ ತೊನಸನಳ್ಳಿ, ಪ್ರಸಾದ್ ಪಟ್ಟಣಕರ್, ಶರಣು ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಂಬೇಡ್ಕರ್ ವೃತ್ತದಲ್ಲಿ ಎಎಪಿ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಡಿಎಸ್ಎಸ್ ಸಂಘಟನಾ ಸಂಚಾಲಕ ಭರತ್ ಧನ್ನಾ ಸಂವಿಧಾನ ಪೀಠಿಕೆ ಪಠಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!