ಸುಲೇಪೇಟ್‌ನಲ್ಲಿ ಬೈಹಲೂಲ್ ಶಾಹ ಸಂಭ್ರಮದ ಉರುಸ್ 

ನಾಗಾವಿ ಎಕ್ಸಪ್ರೆಸ್ 

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಬೈಹಲೂಲ್ ಶಾಹ ದರ್ಗಾದ ಉರುಸ್ ಪ್ರಯುಕ್ತ ಗಂಧದ ಮೆರವಣಿಗೆಯು ಗುರುವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ಜರುಗಿತು.

ಬೈಹಲೂಲ್ ಶಾಹ ದರ್ಗಾದ ಬಕ್ರೀದ್ ಹಬ್ಬದ ದಿನ ರಾತ್ರಿ ಉರುಸ್ ನಡೆಯಿತು, ಉರುಸ್ ಪ್ರಯುಕ್ತ ದರ್ಗಾವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಾತ್ರಿ 9 ಗಂಟೆಗೆ ಜಹೀರೋದ್ದಿನ್ ಜೈನೋದ್ದಿನ ಪಟೇಲ್ ಮನೆಯಿಂದ ಗಂಧದ ಮೆರವಣಿಗೆ ಜರುಗಿತು.

ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ದೇವರನಾಮ ಮೀಲಾದ ಹಾಡುವ ತಂಡ, ಹಲಗಿ, ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಗಂಧದ ಚಾದರನ್ನು ದರ್ಗಾಕ್ಕೆ ತರಲಾಯಿತು. ನಂತರ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ಭಕ್ತರು ದರ್ಗಾದ ದರ್ಶನ ಪಡೆದು ವಿಶೇಷ ದುವಾ ಸಲ್ಲಿಸಿದರು. ಹರಕೆ ಹೊತ್ತು ಬರುವ ಅನೇಕ ಭಕ್ತರು ಇಲ್ಲಿನ ಗೋರಿಗೆ ಹೂವಿನ ಚಾದರ್ ಹೊದಿಸಿ ಗಂಧ ಹಚ್ಚಿದರು.

ಮತ್ತೆ ಅಲ್ಲಿಂದ ಮೆರವಣಿಗೆ ಮೂಲಕ ಸಂದಾಲ್ ಸಾಹೇಬ, ಮೈಬೂಬಸುಭಾನಿ ದರ್ಗಾ, ನವಾಬ ಸಾಹೇಬ್ ಹಾಗೂ ಶಾಹ ಹುಸ್ಸೇನ್ ದರ್ಗಾಕ್ಕೆ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ಪುನಃ ಮೆರವಣಿಗೆ ಜಹಿರೋದ್ದಿನ ಪಟೇಲ್ ಮನೆಗೆ ಬಂದು ಸಂಪನ್ನಗೊಂಡಡಿತ್ತು.

ಈ ಸಂದರ್ಭದಲ್ಲಿ ಮಸಜೀದ್ ಕಮಿಟಿಯ ಸದರ ಮನ್ನಾನ ಮೋಮಿನ, ಜಾಮೀಯಾ ಮಸ್ಜೀದ್ ಮೌಲಾನಾ ಹುಸ್ಸೇನ್ ಹಶ್ಮಿ, ಜಹೀರೋದ್ದಿನ್ ಪಟೇಲ್, ಶರೀಫ್ ಕೊಹಿರ್, ಚಾಂದಪಾಶಾ ಮೋಮಿನ, ಆರಿಫ ಪಟೇಲ, ಜಾಕೀರ ಪಟೇಲ, ಅಕ್ರಮ ಪಟೇಲ್, ಸಮದಾನಿ ಹಶ್ಮಿ, ಸೈಯದ ಉಸ್ಮಾನ, , ತಯ್ಯಬ ಮೋಮಿನ, ರೌಷನ ಅಲಿ ಅಹ್ಮದ ಖಾನ, ಹಾಜಿ ಬಾಬಾ,ದಸ್ತೆಗೀರ, ಗೌಸ, ತೌಸೀಫ್ ಖುರೇಷಿ, ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!