Oplus_0

ಕೆಪಿಸಿಸಿ ಅಧ್ಯಕ್ಷರಿಗೆ ಮನವಿ | ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಡಿಸಿಎಂ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ  ಪ್ರಿಯಾಂಕ್ ಎಂ ಖರ್ಗೆ ಅವರನ್ನು ಕರ್ನಾಟಕ ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಮುಖಂಡರು ಜೈ ಗೋಷಗಳು ಕೂಗಿ ಪ್ರತಿಭಟನೆ ನಡೆಸಿ, ಕೆಪಿಸಿಸಿ ಅಧ್ಯಕ್ಷರಿಗೆ ಬರೆದ ಮನವಿ ಪತ್ರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ಸಲ್ಲಿಸಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಹಾಗೂ ಜನಪರ ಆಡಳಿತವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯುವ ನಾಯಕತ್ವದ ಅಗತ್ಯತೆ ಇಂದು ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆ ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಯುವಜನರ ಆಶೋತ್ತರಗಳು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಚಿತ್ತಾಪುರ ಕ್ಷೇತ್ರದ ಜನಪ್ರಿಯ ಶಾಸಕ ಪ್ರಿಯಾಂಕ್ ಎಂ ಖರ್ಗೆ ಅವರು ರಾಜ್ಯದ ಜನರ ವಿಶ್ವಾಸವನ್ನು ಗಳಿಸಿರುವ ಶಕ್ತಿಶಾಲಿ ಯುವ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಇವರನ್ನು ಉಪ ಮುಖ್ಯಮಂತ್ರಿಯಾಗಿ ಮಾಡಬೇಕು ಒತ್ತಾಯಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ಪ್ರಿಯಾಂಕ್ ಎಂ ಖರ್ಗೆ ಅವರು ತಮ್ಮ ಸರಳತೆ, ಪ್ರಾಮಾಣಿಕತೆ, ಜನಸಾಮಾನ್ಯರೊಂದಿಗೆ ಬೆರೆಯುವ ಗುಣ ಹಾಗೂ ಆಡಳಿತಾತ್ಮಕ ಅನುಭವದಿಂದ ರಾಜ್ಯದಾದ್ಯಂತ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಯುವಜನರಿಗೆ ಪ್ರೇರಣೆಯಾಗಿರುವ ಅವರು ಶಿಕ್ಷಣ, ಉದ್ಯೋಗ, ತಂತ್ರಜ್ಞಾನ ಹಾಗೂ ಸಾಮಾಜಿಕ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಾ ಜನಸೇವೆ ಮಾಡುತ್ತಿದ್ದಾರೆ. ಕರ್ನಾಟಕದ ಜನರ ನಾಡಿಮಿಡಿತವನ್ನು ಬಲ್ಲಿರುವ ನಾಯಕ ಪ್ರಿಯಾಂಕ್ ಖರ್ಗೆಯವರು ಸರ್ಕಾರದ ಮತ್ತು ಜನ ಸಾಮಾನ್ಯರ ಮಧ್ಯದಲ್ಲಿ ಸಾಮರಸ್ಯ ಮೂಡಿಸುವಂತವರು ಮತ್ತು ಜನ ಸಾಮಾನ್ಯರಿಗೆ ಸರ್ಕಾರದ ಸೌಲಭ್ಯವನ್ನು ಕೊಡಿಸುವಲ್ಲಿ ಅಪಾರ ಅನುಭವಗಳನ್ನು ಹೊಂದಿರುವ ಧಿಮಂತ ನಾಯಕರಾಗಿರುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆ, ಹಿಂದುಳಿದ ವರ್ಗಗಳ ಏಳಿಗೆ ಕುರಿತು ಹೊಂದಿರುವ ಬದ್ಧತೆ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ವಹಿಸಿರುವ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ. ರಾಜ್ಯ ರಾಜಕಾರಣದಲ್ಲಿ ಹೊಸ ಚೈತನ್ಯ ಮೂಡಿಸುವ ಸಾಮರ್ಥ್ಯ ಮತ್ತು ಜನಪರ ಆಡಳಿತದ ದೃಷ್ಟಿಕೋನ ಹೊಂದಿರುವ ಪ್ರಿಯಾಂಕ್ ಎಂ ಖರ್ಗೆ ಅವರನ್ನು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಿದಲ್ಲಿ ರಾಜ್ಯದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ದೊರೆಯಲಿದೆ ಎಂಬುದು ನಮ್ಮ ದೃಢ ನಂಬಿಕೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ಶಿವರುದ್ರಪ್ಪ ಭೀಣ್ಣಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಜಗಣ್ಣಗೌಡ ರಾಮತೀರ್ಥ, ಶಾಂತಣ್ಣ ಚಾಳೀಕಾರ, ವೀರುಪಾಕ್ಷಪ್ಪ ಗಡ್ಡದ್, ನಾಮದೇವ ರಾಠೋಡ, ಶೇಕ್ ಬಬ್ಲು, ಬಸವರಾಜ ಚಿನ್ನಮಳ್ಳಿ, ಶಿವರೆಡ್ಡಿ ನಾಲವಾರ, ನಾಗಯ್ಯ ಗುತ್ತೇದಾರ, ಹಣಮಂತ ಸಂಕನೂರ, ಶಿವಕಾಂತ ಬೆಣ್ಣೂರಕರ್, ನಾಗರೆಡ್ಡಿ ಗೋಪಸೇನ್, ನಿಂಗಣ್ಣ ಹೆಗಲೇರಿ, ಜಗದೀಶ್ ಚವ್ಹಾಣ, ಸೂರ್ಯಕಾಂತ ಪೂಜಾರಿ, ಮಹಾಂತೇಶ ಬೊಮ್ಮನಳ್ಳಿ, ದೇವಿಂದ್ರ ಯಾಬಾಳ, ಬಸವರಾಜ ಪೂಜಾರಿ, ಭೀಮಸಿಂಗ್ ಚವ್ಹಾಣ, ದೇವಿಂದ್ರ ಅರಣಕಲ್, ಶ್ರೀಮಂತ ಗುತ್ತೇದಾರ, ಸೂರ್ಯಕಾಂತ ರದ್ದೇವಾಡಿ, ಶರಣು ವಾರದ್, ಓಂಕಾರ ರೇಷ್ಮಿ, ಶರಣು ಡೋಣಗಾಂವ, ಮಲ್ಲಿಕಾರ್ಜುನ ಬೆಣ್ಣೂರಕರ್, ಸಂತೋಷ ಪೂಜಾರಿ, ಜಗನ್ನಾಥ ಮುಡುಬೂಳಕರ್,  ಗಂಗಾಧರ ಡಿಗ್ಗಿ, ವಿನ್ನುಕುಮಾರ ಜಡಿ, ಮಲ್ಲಿಕಾರ್ಜುನ ಕುದುರಿ, ಭಾಗು ದೊರೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಉದಯಕುಮಾರ್ ಸಾಗರ ನಿರೂಪಿಸಿದರು. ಪಿಎಸ್ಐ ಮಂಜುನಾಥ ರೆಡ್ಡಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!